Friday, 22nd November 2024

ಗಾಯಕ ಟಾಮ್​ ಪಾರ್ಕರ್ ಕ್ಯಾನ್ಸರ್​ನಿಂದ ನಿಧನ

ಲಂಡನ್‌: ಬ್ರಿಟಿಷ್-ಐರಿಶ್ ಬ್ಯಾಂಡ್​ ‘ದಿ ವಾಂಟೆಡ್​’ನ ಸದಸ್ಯನಾಗಿದ್ದ ಗಾಯಕ ಟಾಮ್​ ಪಾರ್ಕರ್ (33)ಅವರು ಮಿದುಳು ಕ್ಯಾನ್ಸರ್​ನಿಂದ ನಿಧನ ಹೊಂದಿದ್ದಾರೆ.

ಟಾಮ್​ಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದರು. ಅವರು ನಿಧನ ಹೊಂದಿರುವ ವಿಚಾರ ವನ್ನು ‘ದಿ ವಾಂಟೆಡ್​’ ಬ್ಯಾಂಡ್ ಘೋಷಣೆ ಮಾಡಿದ್ದು, ಸಾಕಷ್ಟು ದುಃಖ ವ್ಯಕ್ತಪಡಿಸಿದೆ. ಟಾಮ್ ಪಾರ್ಕರ್​ ನಿಧನಕ್ಕೆ ವಿಶ್ವದ ನಾನಾ ಕಡೆಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗುತ್ತಿದೆ. ಟೀಂ ಇಂಡಿಯಾ ಮಾಜಿ ಆಟಗಾರಕೂಡ ಈ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ಟಾಮ್​ಗೆ ಮಿದುಳಿನಲ್ಲಿ ಟ್ಯೂಮರ್ ಇರುವ ವಿಚಾರ 2020ರಲ್ಲಿ ತಿಳಿದಿತ್ತು. ಈ ವಿಚಾರ ವನ್ನು ಅವರು ಸೋಶಿಯಲ್​ ಮೀಡಿಯಾ ದಲ್ಲಿ ಹೇಳಿಕೊಂಡಿದ್ದರು. ಕ್ಯಾನ್ಸರ್​ ಪತ್ತೆ ಆದ ನಂತರದಲ್ಲಿ ಅವರು ಸಾಕಷ್ಟು ಕುಗ್ಗಿದ್ದರು.

ವಿಶ್ವದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಕೆಮೋಥೆರಪಿಗೆ ಒಳಗಾಗಿದ್ದರು. ಆದರೆ, ಕ್ಯಾನ್ಸರ್​ನ ಗುಣಮಾಡಲು ಸಾಧ್ಯವಾಗಲೇ ಇಲ್ಲ.  ಕೆಲ್ಸಿ ಹಾಗೂ ಟಾಮ್​ 2018ರಲ್ಲಿ ಮದುವೆ ಆದರು. ಇವರಿಗೆ ಇಬ್ಬರು ಮಕ್ಕಳು.

2009ರಲ್ಲಿ ‘ದಿ ವಾಂಟೆಡ್​’ ಬ್ಯಾಂಡ್​ ಆರಂಭಗೊಂಡಿತು. ಟಾಮ್​ ಪಾರ್ಜರ್​ ಸೇರಿ ಐದು ಮಂದಿ ಇದನ್ನು ಆರಂಭಿಸಿದರು.