ಬೆಂಗಳೂರು:
ಜೀವ ತೆಗೆಯುವ ಕರೋನಾ ವೈರಸ್ ಹರಡುವಿಕೆ ಭೀತಿ ನಡುವೆಯೂ ಬೆಂಗಳೂರು ಜನರು ಬೀದಿಯಲ್ಲಿ ಯಾವುದೇ ಭಯವಿಲ್ಲದೆ ತಿರುಗಾಡುತ್ತಿದ್ದಾರೆ. ಇನ್ನೂ ರಾಜ್ಯದ ನಾನಾ ಪ್ರದೇಶದ ಜನ, ಕರೋನಾಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಜನರ ಈ ಮನಸ್ಥಿತಿ ಗಮನಿಸಿದರೆ ದೇಶ ಕರೋನಾ ವೈರಸ್ ಅನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸಾಭೀತಾಗುತ್ತದೆ. ಜನರು ಮುಂದಿನ ದಿನಗಳಲ್ಲಿ ಬಂದ್, ಲಾಕ್ಡೌನ್ ಆದರೆ ಏನು ಮಾಡಬೇಕು ಎಂಭ ಆತಂಕದಲ್ಲಿ ಬೀದಿಗಿಳಿಯುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ ಎಂಬ ವಾದ ಒಂದೆಡೆಯಾದರೂ, ಅಗತ್ಯ ವಸ್ತುಗಳಿಗೆ ಯಾವುದೇ ಸಮಸ್ಯೆೆಯಾಗುವುದಿಲ್ಲ ಎಂಬ ಭರವಸೆಯನ್ನು ಸರಕಾರ ನೀಡಿದರೂ ಜನರು ಜೀವಭಯ ತೊರೆದು ಬೀದಿಗೆ ಬರುತ್ತಿರುವುದೇಕೆ? ಜನರಿಗೆ ಜೀವ ಉಳಿಸಿಕೊಳ್ಳುವುದಕ್ಕಿಿಂತ ಜರೂರಿಜ ಕೆಲಸ ಬೇರೆ ಯಾವುದಿದೇ?
ಬಾರ್ ಅಂಡ್ ರೆಸ್ಟೋರೆಂಟ್ಗಳು ಈಗಾಗಲೇ ಬಂದ್ ಆಗಿವೆ. ಖಾಯಂ ಕುಡುಕರು ಹೋಗಲಿ, ವಿದ್ಯಾವಂತರೆನಿಸಿಕೊಂಡವರೆ ಬಾರ್ಗಳ ಹಿಂಬಾಗಿಲ ಬಳಿ ನಿಂತ ಮಧ್ಯ ಖರೀದಿ ಮಾಡುತ್ತಿದ್ದಾರೆ. ತಮ್ಮ ತಮ್ಮ ಖಾಸಗಿ ವಾಹನಗಳನ್ನೇರಿ ಒಂದು ಜಾಲಿ ರೈಡ್ ಹೊರಡುತ್ತಿದ್ದಾರೆ. ಗುಂಪುಗುಂಪಾಗಿ ಜನ ಸೇರಬಾರದು, ವೈರಸ್ ಹರಡುವ ಸಾಧ್ಯತೆ ಹೆಚ್ಚು ಎಂಬ ಎಚ್ಚರಿಕೆ ಇದ್ದರೂ ಜನ ಸಂಧಿಗೊಂದಿಗಳಲ್ಲೇ ಸಮಾರಾಧನೆ ಮಾಡುತ್ತಿದ್ದಾರೆ. ಇಂತಹ ಉಢಾಪೆ, ನಿರ್ಲಕ್ಷ್ಯ ನಮ್ಮ ಜನರಿಗೆ ಬಂದಿದ್ದೇಕೆ?
ಇಟಲಿ ದೇಶದಲ್ಲಿ ಸೋಂಕಿನ ಬಗ್ಗೆ ಜನತೆ ನಿರ್ಲಕ್ಷ್ಯ ತಾಳಿ ಒಂದು ಪ್ರದೇಶದಿಂದ ಮತ್ತೊೊಂದು ಪ್ರದೇಶಕ್ಕೆ ಈ ರೀತಿಯಲ್ಲಿ ಓಡಾಡಿದ್ದರೆ ಅಷ್ಟೊೊಂದು ದೊಡ್ಡ ಪ್ರಮಾಣದ ಅನಾಹುತಕ್ಕೆ ಕಾರಣ ಎಂಬುದು ಇಡೀ ಜಗತ್ತಿಗೆ ಗೊತ್ತಾಗಿದೆ. ಈಗ ಇಟಲಿ ಕರೋನಾ ಸೋಂಕಿಗೆ ಬಲಿಯಾದ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ದಿನವೊಂದಕ್ಕೆ 637 ಮಂದಿ ಪ್ರಾಾಣ ಕಳೆದುಕೊಳ್ಳುವ ಮಟ್ಟಿಗೆ, ದೇಶದ ಅಧ್ಯಕ್ಷರೇ ಪರಿಸ್ಥಿತಿ ನಮ್ಮ ಕೈಮೀರಿದೆ ಎಂದು ಕಣ್ಣಿರು ಹಾಕುವ ಮಟ್ಟಿಗೆ ತತ್ತರಿಸಿ ಹೋಗಿದೆ. ಇದೆಲ್ಲವನ್ನೂ ನಿತ್ಯ ನೋಡುತ್ತಲೇ ಇರುವ ನಮ್ಮ ವಿದ್ಯಾಾವಂತರು ಟಿವಿಗಳಿಗೆ ಬೈಯುತ್ತಾ, ವಾಟ್ಸಾಪ್ ಸೇರಿ ಇತರೆ ಸಾಮಾಜಿಕ ಮಾಧ್ಯಮಗಳ ಸುದ್ದಿ ಸುಳ್ಳು ಎಂಬ ವದಂತಿಯನ್ನೇ ನಂಬುತ್ತಾ ಬೇಕಾಬಿಟ್ಟಿ ಅಡ್ಡಾಡುತ್ತಿದ್ದಾರೆ.
ಚಪ್ಪಾಳೆ ಬದಲಿಗೆ ಬೀದಿಗೆ ಬಂದಿದ್ದೇಕೆ?
ದೇಶದ ಪ್ರಧಾನಿ ನರೇಂದ್ರ ಮೋದಿ ಕರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಇತರರಿಗೆ ಅಭಿನಂದನೆ ಸಲ್ಲಿಸಲು ಚಪ್ಪಾಾಳೆ ತಟ್ಟಿ ಎಂದು ನೀಡಿದ ಕರೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಜನರು ಬೀದಿಬೀದಿಯಲ್ಲಿ ಗುಂಪು ಸೇರಿ ತಮಟೆ ಜಾಗಟೆ ಭಾರಿಸುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಅರ್ಥವನ್ನೇ ಕೆಡಿಸಿದರು. ಸಾವಿರಾರು ಮಂದಿ ಪಟ್ಟಿಗೆ ಸೇರಿ ತಮಟೆ ಬಡಿದು, ತಟ್ಟೆ, ಲೋಟಗಳೇಕೆ, ಕೊನೆಗೂ ಗ್ಯಾಸ್ ಸಿಲೀಂಡರ್ ಅನ್ನು ಕೂಡ ತೆಗೆದುಕೊಂಡು ಭಾರಿಸುತ್ತಾಾ ಬೀದಿ ಸುತ್ತಿದರು. ಆ ಮೂಲಕ ಪ್ರಧಾನಿಗಳ ಆಶಯಕ್ಕೆ ವಿರುದ್ಧವಾಗಿಯೇ ನಡೆದುಕೊಂಡರು. ಜನ ಗುಂಪಾಗಿ ಸೇರಿದ್ದರಿಂದ ಕರೋನಾ ಹರಡುವಿಕೆ ಹೆಚ್ಚಾಾಗುವ ಸಾಧ್ಯತೆಯಿದೆಯೇ ಹೊರತು ಕಡಿಮೆ ಮಾಡಬೇಕೆಂಬ ಉದ್ದೇಶದ ಈಡೇರಿಕೆ ಸಾರ್ಥಕವಾಗುವುದಿಲ್ಲ ಎಂಬ ಕನಿಷ್ಠ ಜ್ಞಾಾನ ನಮ್ಮವರಿಗೆ ಬರಲೇ ಇಲ್ಲ. ರಾಜಭವನದಲ್ಲೇ ಎಲ್ಲ ಸಿಬ್ಬಂದಿ ಮತ್ತು ರಾಜ್ಯಪಾಲರು ಒಟ್ಟಿಗೆ ಸೇರಿದರು, ಉತ್ತರ ಪ್ರದೇಶದಲ್ಲಿ ಜಿಲ್ಲಾಾ ಮಂತ್ರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಯೇ ಊರು ತುಂಬಾ ಜನರನ್ನು ಕಟ್ಟಿಕೊಂಡು ಮೆರವಣಿಗೆ ನಡೆಸಿದರೂ ಎಂದು ಹೇಳಲಾಗಿದೆ. ಇಂಥ ಸ್ಥಿತಿಗೆ ಇದೆಲ್ಲ ಬೇಕಾ?
ಊರಿಗೆ ಕರೋನಾ ಕೊಂಡೊಯ್ದರೆ?
ನಾಳೆಯಿಂದ ಕರ್ನಾಟಕವೇ ಲಾಕ್ಡೌನ್ ಆಗಲಿದೆ ಎಂಬ ಭೀತಿಯಲ್ಲಿ ಸಾವಿರಾರು ಮಂದಿ ಬೆಂಗಳೂರು ಬಿಟ್ಟು ಊರಿನ ಕಡೆಗೆ ನಡೆದರು. ಹೀಗಾಗಿ ತುಮಕೂರು ರಸ್ತೆೆಯಲ್ಲಿ ಭಾರಿ ಸಂಚಾರ ದಟ್ಟಣೆಯಾಗಿತ್ತು. ಒಂದೊಂದು ಬಸ್ನಲ್ಲಿ ನೂರೈವತ್ತು, ಇನ್ನೂರು ಜನರು ಕುಳೀತು ಪ್ರಯಾಣ ಮಾಡಿದರು. ಹೀಗೆ ಜನರು ಪಟ್ಟಿಗೆ ಸೇರಿದ್ದಲ್ಲಿ ಕರೋನಾ ಹರಡುವುದಿಲ್ಲವೇ ಎಂದು ಪ್ರಶ್ನಿಸಿದರೆ, ನಾವು ಊರು ಬಿಟ್ಟು ಬಂದಿದ್ದೇವೆ, ನಮಗೆ ಇಲ್ಲಿ ಕೆಲಸ ಇಲ್ಲ, ದುಡ್ಡು ಇಲ್ಲ, ಹೋಟೆಲ್ಗಳೆಲ್ಲ ಬಂದಾಗಿರುವ ಕಾರಣದಿಂದ ಊಟ ಸಿಗುತ್ತಿಲ್ಲ, ನಾವೇನು ಮಾಡುವುದು ಎಂದು ಮರುಪ್ರಶ್ನೆ ಹಾಕುತ್ತಾಾರೆ. ಈ ಭೀತಿಯಲ್ಲಿ ತಾವೆಲ್ಲರೂ ಸಾಗುವ ಬಸ್ನಲ್ಲಿ ಯಾರಾದರೊಬ್ಬ ಕರೋನಾ ಪೀಡಿತನಿದ್ದು, ಅದನ್ನು ನಿಮಗೆ ಹಸ್ತಾಾಂತರಿಸಿದರೆ? ತಾವುಗಳು ತಮ್ಮ ತಮ್ಮ ಊರುಗಳಿಗೆ ಯುಗಾದಿಯ ಉಡುಗೊರೆಯಾಗಿ ಕರೋನಾವನ್ನು ಕೊಂಡೊಯ್ದರೆ? ಅಲ್ಲಿ ಏನು ತಪ್ಪುು ಮಾಡದ ಹಳ್ಳಿಗರ ಪಾಡೇನು, ನಿಮಗಾದರೋ ಮನೆ ಬಳಿಗೆ ಬಂದು ಕರೆದೊಯ್ಯಲು ಆಂಬ್ಯುಲೆನ್ಸ್ಗಳಿವೆ. ಕರೋನಾ ಚಿಕಿತ್ಸೆಗೆ ಸೀಮಿತವಾದ ಆಸ್ಪತ್ರೆೆಗಳಿವೆ. ಆದರೆ, ಹಳ್ಳಿಗಳಲ್ಲಿ ಜನರನ್ನು ಕರೆದೊಯ್ಯಲು ಸಂಪರ್ಕ ವ್ಯವಸ್ಥೆೆ ಏನಿದೆ? ಅಂಥವರನ್ನು ಕರೆದೊಯ್ದರು ಅವರಿಂದ ಮತ್ತಷ್ಟು ಜನರಿಗೆ ಹರಡಿದರೆ ಮುಂದೇನು? ಇದಕ್ಕೆೆ ಉತ್ತರವೇನಿದೆ?