ಜೈಪುರ: ಹಿಂಸಾಚಾರ ಪೀಡಿತ ರಾಜಸ್ಥಾನದ ಕರೌಲಿಯಲ್ಲಿ ಕಾನೂನು ಸುವ್ಯವಸ್ಥೆ ಪರಿಗಣಿಸಿ ಏ.7 ರವರೆಗೆ ಕರ್ಫ್ಯೂ ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ತೋರಿಸಿದ ನಂತರ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅವಕಾಶ ಮಾಡಿಕೊಡುವುದಾಗಿ ಅಧಿಕಾರಿ ಗಳು ತಿಳಿಸಿದ್ದಾರೆ. ಕರೌಲಿಯಲ್ಲಿ ಕೋಮು ಘರ್ಷಣೆ ನಡೆದ ಎರಡು ದಿನಗಳ ಬಳಿಕ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ.
ಪರಿಸ್ಥಿತಿಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮಟ್ಟಕ್ಕೆ ಇಲ್ಲವಾದ್ದರಿಂದ ಕರ್ಫ್ಯೂ ವನ್ನು ಏ.7ರ ಮಧ್ಯರಾತ್ರಿಯವರೆಗೆ ವಿಸ್ತರಿಸ ಲಾಗಿದೆ ಎಂದು ಈ ಬಗ್ಗೆ ಮಾತನಾಡಿದ ಕರೌಲಿ ಜಿಲ್ಲಾಧಿಕಾರಿ ರಾಜೇಂದ್ರ ಶೇಖಾವತ್ ಹೇಳಿದ್ದಾರೆ.
ಜನರಿಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಎರಡು ಗಂಟೆಗಳ ವಿಶ್ರಾಂತಿ ನೀಡಲಾಗುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಗಣಿಸಿ ಯಾವುದೇ ಹೆಚ್ಚಿನ ವಿಶ್ರಾಂತಿ ನೀಡಲಾಗು ವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಸೋಮವಾರ ಎರಡು ಗಂಟೆಗಳ ಕಾಲ ಕರ್ಫ್ಯೂನಲ್ಲಿ ವಿಶ್ರಾಂತಿ ನೀಡಲಾಗಿದೆ. ಕೇಂದ್ರ ಮತ್ತು ರಾಜಸ್ಥಾನದ ಸರ್ಕಾರಿ ಕಚೇರಿಗಳು ಮತ್ತು ನ್ಯಾಯಾಲಯಗಳು ತೆರೆದಿವೆ ಮತ್ತು ನೌಕರರು ಗುರುತಿನ ಚೀಟಿಗಳನ್ನು ತೋರಿಸಿದ ನಂತರ ತಮ್ಮ ಕಚೇರಿಗಳನ್ನು ತಲುಪಬಹುದು” ಎಂದು ಶೇಖಾವತ್ ಹೇಳಿದ್ದಾರೆ.