ನವದೆಹಲಿ: ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವತ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿ ಸಿದ ಅಲಿಬಾಗ್ನಲ್ಲಿರುವ ಎಂಟು ಆಸ್ತಿಗಳು ಮತ್ತು ಮುಂಬೈನ ದಾದರ್ ಉಪನಗರದ ಫ್ಲ್ಯಾಟ್ ಅನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮುಂಬೈನಲ್ಲಿ ‘ಚಾಲ್’ ಮರು ಅಭಿವೃದ್ಧಿಗೆ ಸಂಬಂಧಿಸಿದ 1,034 ಕೋಟಿ ರೂ.ಗಳ ಭೂ ‘ಹಗರಣ’ಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗೆ ಈ ಅಟ್ಯಾಚ್ಮೆಂಟ್ ಲಿಂಕ್ ಆಗಿದೆ.
ಫೆಬ್ರವರಿಯಲ್ಲಿ ಇ.ಡಿ ಮಹಾರಾಷ್ಟ್ರ ಮೂಲದ ಉದ್ಯಮಿ ಪ್ರವೀಣ್ ರಾವತ್ ಅವರನ್ನು ಬಂಧಿಸಿತ್ತು ನಂತರ ಚಾರ್ಜ್ಶೀಟ್ ಕೂಡ ಸಲ್ಲಿಸಿತ್ತು.
ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್ ರಾವತ್ ಅವರ ಪತ್ನಿ ಮಾಧುರಿ ಅವ ರೊಂದಿಗಿನ ಸಂಪರ್ಕಕ್ಕಾಗಿ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರನ್ನು ಕಳೆದ ವರ್ಷ ಏಜೆನ್ಸಿ ಪ್ರಶ್ನಿಸಿತ್ತು.