Thursday, 12th December 2024

‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಗೆ ಆಯ್ಕೆ

ನವದೆಹಲಿ: ಲೇಖಕಿ ಗೀತಾಂಜಲಿ ಶ್ರೀ ಅವರ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.

ಗೀತಾಂಜಲಿ ಅವರ ಈ ಕೃತಿಯನ್ನು ಡೇಸಿ ರಾಕ್​ವೆಲ್ ಇಂಗ್ಲಿಷ್​ಗೆ ಅನುವಾದಿಸಿದ್ದಾರೆ. ‘ಗಟ್ಟಿಧ್ವನಿಯ ಮತ್ತು ಓದದೆ ಕೆಳಗಿರಿಸ ಲಾಗದ ಅದಮ್ಯ ಕೃತಿ’ ಎಂದು ತೀರ್ಪುಗಾರರು ಬಣ್ಣಿಸಿದ್ದಾರೆ.

50 ಸಾವಿರ ಪೌಂಡ್ ಮೌಲ್ಯದ ಬೂಕರ್ ಸಾಹಿತ್ಯ ಪ್ರಶಸ್ತಿಗೆ ಜಗತ್ತಿನ ನಾನಾ ಭಾಗಗಳಿಂದ ಸ್ಪರ್ಧಿಸುತ್ತಿರುವ ಐದು ಇತರೆ ಪುಸ್ತಕ ಗಳೊಂದಿಗೆ ಗೀತಾಂಜಲಿ ಶ್ರೀ ಅವರ ಕೃತಿಯೂ ಪೈಪೋಟಿಗಿಳಿದಿದೆ. ಆಯ್ಕೆಯಾದರೆ ಬಹುಮಾನದ ಮೊತ್ತವನ್ನು ಲೇಖಕಿ ಮತ್ತು ಅನು ವಾದಕಿಯ ನಡುವೆ ಸಮನಾಗಿ ಹಂಚಲಾಗುವುದು.

ಬೋರಾ ಚುಂಗ್ ಅವರ ‘ಕರ್ಸ್ಡ್​ ಬನ್ನೀ’ (ಮೂಲ ಕೊರಿಯನ್​ನಿಂದ ಅನುವಾದಿಸಿದವರು ಆಯಂಟನ್ ಹುರ್), ಜಾನ್ ಫಾಸ್ ಅವರ ‘ಎ ನ್ಯೂ ನೇಮ್-ಸೆಪ್ಟಾಲಜಿ V-VVI’ (ಮೂಲ ನಾರ್ವೆಜಿಯಯನ್​ನಿಂದ ಅನುವಾದಿಸಿರುವವರು ಡೇಮಿಯನ್ ಸೀರ್ಲ್ಸ್​), ‘ಮೀಲ್ಕೋ ಕಾವಾಕಾಮಿ’ ಅವರ ಹೆವೆನ್ (ಮೂಲ ಜಪಾನಿಯಿಂದ ಅನುವಾದಿಸಿದವರು ಸ್ಯಾಮ್ಯುಯೆಲ್ ಬೆಟ್ ಮತ್ತು ಡೇವಿಡ್ ಬಾಯ್ಡ್), ಕ್ಲಾಡಿಯಾ ಪೀರೋ ಅವರ ‘ಎಲೆನಾ ನೋಸ್’ (ಮೂಲ ಸ್ಪ್ಯಾನಿಶ್​ನಿಂದ ಅನುವಾದಿಸಿದವರು ಫ್ರಾನ್ಸಿಸ್ ರಿಡ್ಲ್) ಹಾಗೂ ಓಲ್ಗಾ ಟೊಕರ್ಜುಕ್ ಅವರ ‘ದಿ ಬಯಕ್ ಆಫ್ ಜೇಕಬ್’ (ಮೂಲ ಪೊಲಿಶ್ ಅನುವಾದಿಸಿದವರು ಜೆನ್ನಿಫರ್ ಕ್ರಾಫ್ಟ್) ಇತರೆ ಐದು ಪುಸ್ತಕಗಳು.