Sunday, 15th December 2024

ಮೈಸೂರು ಜಿಲ್ಲೆಯಲ್ಲಿ ಮತ್ತೈದು ಪ್ರಕರಣ ಪತ್ತೆ

ವಿಶ್ವವಾಣಿ ಸುದ್ದಿಮನೆ

ಮೈಸೂರು

ಕರೋನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಕೈಗೊಂಡಿದ್ದರ ನಡುವೆಯೂ ನಂಜನಗೂಡು ಔಷಧ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಕರೋನಾ ದೃಢವಾದ ಬೆನ್ನಲ್ಲೇ ಮತ್ತೆ ಐದು ಪ್ರಕರಣ ದೃಢವಾಗಿದೆ.

ನಂಜನಗೂಡು ತಾಲೂಕಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಔಷಧ ಗುಣಮಟ್ಟ‌ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೆ ಪತ್ತೆಯಾದ ಎರಡನೇ ದಿನವೇ ಮತ್ತೆ ಐದು ಜ‌ನರಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ. ವಿಚಾರ ಈಗ ಇಡೀ ಜಿಲ್ಲಾಡಳಿತದಲ್ಲಿ ತಲ್ಲಣ ಮೂಡಿಸಿದೆ. ನಂಜನಗೂಡು ಪಟ್ಟಣದಲ್ಲಿಒಂದು, ಚಾಮುಂಡಿಪುರ ಎಕ್ಸಟೆನ್ಷನ್, ರಾಮಸ್ವಾಮಿ ಲೇಔಟ್, ಗೋವಿಂದ ರಾಜ ಲೇಔಟ್ , ಮೈಸೂರು ನಗರದ ಯರಗನಹಳ್ಳಿ ನ್ಯೂ ಎಕ್ಸ್ ಟೆನ್ಷನ್ ಬಡಾವಣೆಯ ಪ್ರದೇಶಕ್ಕೆ ಸೇರಿದ ಉದ್ಯೋಗಿಯಾಗಿದ್ದಾರೆ. ಐದು ಜನರಿಗೆ ದೃಢ ವಾಗಿರುವ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಭಾನುವಾರ ಹೆಚ್ಚಿನ ವಿವರಣೆ ಕೊಡುವುದಾಗಿ ಹೇಳಿದ್ದಾರೆ. ನಿನ್ನೆಯಷ್ಟೇ ಜ್ಯುಬಿಲಿಯಂಟ್ ಕಾರ್ಖಾನೆಯ ಎಲ್ಲಾ ನೌಕರರಿಗೆ ತಪಾಸಣೆ ಮಾಡಿ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಐದು ಪಾಸಿಟಿವ್ ಪ್ರಕರಣ ದೃಢವಾಗಿದೆ.