Saturday, 23rd November 2024

ಸ್ಯಾಂಡಲ್‌ವುಡ್ ಸೌಂಡ್‌ಗೆ ಕಂಗಾಲು ’ಖಾನ್‌ವುಡ್‌’ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಅದೊಂದು ಕಾಲವಿತ್ತು, ಹಿಂದಿ ಚಿತ್ರರಂಗವೆಂದರೆ ಬಾನೆತ್ತರದ ಸ್ಟಾರ್‌ಗಿರಿಯಾಗಿತ್ತು. ಬರಿಯ ಗ್ಲಾಮರಸ್ ಅದ್ದೂರಿತನವೇ ಹಿಂದಿ ಚಿತ್ರರಂಗದ ಬಂಡವಾಳ. ದಕ್ಷಿಣಭಾರತದ ಚಿತ್ರರಂಗದಲ್ಲಿ ಅಭಿನಯ, ಕಲಾತ್ಮಕತೆ, ಐತಿಹಾಸಿಕ, ಪೌರಾಣಿಕ ಚಿತ್ರಗಳೇ ಜೀವಾಳ. ಹೀಗಾಗಿ ಅಪ್ಪಟ ಕಲಾವಿದರಿಗಿಂತ ಆಕರ್ಷಣೆಯುಳ್ಳ ಸ್ಟಾರ್‌ಗಳೇ ಅಲ್ಲಿ ಮೆರೆದರು.

ಭಾರತೀಯ ಚಿತ್ರರಂಗವೆಂದರೇ ನಾವುಗಳೇ ಎಂದು ಮರೆಯುತ್ತಿದ್ದ ಬಾಲಿವುಡ್‌ನ ದೇಶಗೇಡಿ ಮನಃಸ್ಥಿತಿಯ ಖಾನ್‌ಗಿರಿಯನ್ನು ಮಟ್ಟ ಹಾಕಿದ ಬಾಹುಬಲಿ, ಪುಷ್ಪ, ಆರ್‌ಆರ್‌ಆರ್, ದಿ ಕಾಶ್ಮಿರ್ ಫೈಲ್ಸ್, ನಂತರ ಇದೀಗ ತೆರೆಕಾಣುತ್ತಿರುವ ನಮ್ಮ ಕೆಜಿಎಫ್ 2 ಮತ್ತು ವಿಕ್ರಾಂತ್‌ರೋಣ. ಇದರಿಂದ ಕಂಗೆಟ್ಟು ಕುಳಿತಿzರೆ ಅಮಿರ್‌ಖಾನ್ ಮತ್ತು ಶಾರುಕ್ ಖಾನ್.

ಅದೊಂದು ಕಾಲವಿತ್ತು, ಹಿಂದಿ ಚಿತ್ರರಂಗವೆಂದರೆ ಬಾನೆತ್ತರದ ಸ್ಟಾರ್‌ಗಿರಿಯಾಗಿತ್ತು. ಹಾಲಿವುಡ್‌ನಂತೆ ಭಾರತದ ‘ಬಾಲಿವುಡ್’ ಎಂದು ಕರೆಸಿಕೊಂಡಿತ್ತು. ನಟ ದಿಲೀಪ್ ಕುಮಾರ್ ತಾನೊಬ್ಬ ಮುಸಲ್ಮಾನನೆಂಬುದನ್ನೇ ಮರೆಮಾಚಿ ದೇಶಾದ್ಯಂತ ಅಭಿಮಾನಿಗಳನ್ನು ಪಡೆದಿದ್ದ. ಜತೆಗೆ ರಾಜ್‌ಕುಮಾರ್, ಕಪೂರ್ ಖಾಂದಾನ್, ರಾಜೇಶ್ ಖನ್ನ, ರಾಜ್‌ಬಬ್ಬರ್, ಅಮಿತಾಭ್ ಬಚ್ಚನ್, ಮಿಥುನ್ ಚಕ್ರವರ್ತಿ, ಗೋವಿಂದ ಹೀಗೆ ಒಂದು ತಲೆಮಾರು ಬಾಲಿವುಡ್ ಅನ್ನು ಆಳಿತು.

ಇವರನ್ನೂ ಮೀರಿಸುವಂತೆ ದಕ್ಷಿಣ ಭಾರತದಲ್ಲಿ ನಮ್ಮ ವರನಟ ಡಾ.ರಾಜ್‌ಕುಮಾರ್. ಎನ್ ಟಿಆರ್, ಅಕ್ಕಿನೇನಿ ನಾಗೇಶ್ವರರಾವ್, ಚಿರಂಜೀವಿ, ಎಂಜಿಆರ್, ಶಿವಾಜಿ ಗಣೇಶನ್ ಅವರು ತಮ್ಮದೇ ಆದ ಚಿತ್ರಗಳ ಮೂಲಕ ದಕ್ಷಿಣ ಭಾರತ ಚಿತ್ರರಂಗವನ್ನು ಕಟ್ಟಿದರು. ಆದರೂ ಬಾಲಿವುಡ್ ನಲ್ಲಿ ಕನ್ನಡಿಗ ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್ ನಟಿಸಿದರೂ ಅಲ್ಲಿನ ಸ್ಟಾರ್‌ಗಿರಿಯ ಮುಂದೆ ನೆಲೆಯೂರಲಾಗಲಿಲ್ಲ. ಬರಿಯ ಗ್ಲಾಮರಸ್ ಅದ್ದೂರಿತನವೇ ಹಿಂದಿ ಚಿತ್ರರಂಗದ ಬಂಡವಾಳ. ದಕ್ಷಿಣಭಾರತದ ಚಿತ್ರರಂಗದಲ್ಲಿ ಅಭಿನಯ, ಕಲಾತ್ಮಕತೆ, ಐತಿಹಾಸಿಕ, ಪೌರಾಣಿಕ ಚಿತ್ರಗಳೇ ಜೀವಾಳ.

ಹೀಗಾಗಿ ಅಪ್ಪಟ ಕಲಾವಿದರಿಗಿಂತ ಆಕರ್ಷಣೆಯುಳ್ಳ ಸ್ಟಾರ್‌ಗಳೇ ಅಲ್ಲಿ ಮೆರೆದರು. ಕನ್ನಡ ಚಿತ್ರರಂಗದಿಂದಲೂ ಡಾ.ವಿಷ್ಣುವರ್ಧನ್,
ಎಸ್.ವಿ.ರಾಜೇಂದ್ರಸಿಂಗ್‌ಬಾಬು ದ್ವಾರಕೀಶ್ ಹಿಂದಿ ಸಿನಿಮಾಗಳನ್ನು ನಿರ್ಮಿಸಿದರೂ ಅಲ್ಲಿ ಗಟ್ಟಿ ಯಾಗಲಿಲ್ಲ. ಹೀಗಾಗಿ ಬಾಲಿವುಡ್‌ಗೆ ದಕ್ಷಿಣ ಭಾರತದ ಚಿತ್ರರಂಗವೆಂದರೆ ಒಂದು ರೀತಿಯ ಕೀಳುರಿಮೆ, ಅಸಡ್ಡೆಯಾಗಿತ್ತು. ಇಂಥ ಕಾಲದಲ್ಲಿ ಬಾಲಿವುಡ್‌ಗೆ ಸಡ್ಡು ಹೊಡೆದು ನಿಂತವರಲ್ಲಿ ನಮ್ಮ ಶಂಕರ್‌ನಾಗ್, ತಮಿಳಿನ ಮಣಿರತ್ನಂ, ತೆಲುಗಿನ ನಿರ್ದೇಶಕ ರಾಮಗೋಪಾಲ್‌ವರ್ಮ ಮೊದಲಾದವರು.

ಆನಂತರ ಎಂಬತ್ತರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರಗೊಂಡ ‘ಸರ್ಕಸ್’ ಮತ್ತು ‘ಫೌಜಿ’ ಧಾರವಾಹಿಗಳಲ್ಲಿ ಅಭಿನಯಿಸಿ ಚಿತ್ರರಂಗಕ್ಕೆ ಬಂದ ಶಾರುಕ್‌ಖಾನ್, ಜತೆಗೆ ಅಮೀರ್‌ಖಾನ್, ಸಲ್ಮಾನ್‌ಖಾನ್… ಖಾಂದಾನ್ ಕಟ್ಟಿಕೊಂಡು ಬಾಲಿವುಡ್ ಎಂದರೆ ನಾವೇ ಎಂದು ಮೆರೆದರು. ಇವರ ‘ಖಾನ್‌ಗಿರಿ’ಯ ಅಮಲು ಯಾವ ಮಟ್ಟಕ್ಕೆ ತಿರುಗಿತೆಂದರೆ ಜನಪ್ರಿಯತೆ, ಅಭಿಮಾನಿಗಳು, ಆಸ್ತಿ, ಐಷಾರಾಮಿ ಬದುಕು ಎಲ್ಲವನ್ನೂ ಸಂಪಾದಿಸಿದ ಇವರುಗಳು ಭಾರತವನ್ನೇ ಅಸಹಿಷ್ಣು ದೇಶ ಎಂದರು. ಸಲ್ಮಾನ್‌ಖಾನ್‌ಗೆ ಎಲ್ಲವೂ ಹೆಚ್ಚಾಗಿ ಜಿಂಕೆ ಯನ್ನು ಬೇಟೆಯಾಡಿ, ರಸ್ತೆ ಅಪಘಾತ ಮಾಡಿಯೂ ಮೆರೆಯುತ್ತಾನೆ.

ಸಂಜಯ್‌ದತ್ ಎಂಬಾತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ನಂಟು ಮತ್ತು ಅಕ್ರಮ ಶಸಾಸ ಹೊಂದಿರುವ ಆರೋಪದ ಮೇಲೆ ಜೈಲುಪಾಲಾಗುತ್ತಾನೆ. ಇಂಥ ಬಾಲಿವುಡ್ ಮೇಲೆ ಪಾಕಿಸ್ತಾನದ ಭಯೋತ್ಪಾ ದಕರ ಕರಿನೆರಳು ಬಿದ್ದ ಪರಿಣಾಮ ದೈವಭಕ್ತ ನಿರ್ಮಾಪಕ, ಟಿ.ಸಿರೀಸ್ ಕಂಪನಿಯ ಗುಲ್ಷನ್ ಕುಮಾರ್ ಕೊಲೆಯೂ ಆಗಿಹೋಗುತ್ತದೆ. ಜಿಹಾದಿ ಭ್ರೂಣ ಹೊತ್ತವನಂತಿರುವ ಅಮಿರ್ ಖಾನ್ ‘ಪಿಕೆ’ ಎಂಬ ಸಿನಿಮಾದಲ್ಲಿ ಹಿಂದೂದೇವರನ್ನು ಅವಹೇಳನ ಮಾಡಿ ಬಹುಸಂಖ್ಯಾತರ ಭಾವನೆಗಳಿಗೆ ಕೊಳ್ಳಿ ಇಟ್ಟರೂ ಆತನ ಸಿನಿಮಾವನ್ನು ಮಾನಗೇಡಿ ಹಿಂದೂಗಳೇ ನೋಡಿ ಚಿತ್ರವನ್ನು ಗೆಲ್ಲಿಸುತ್ತಾರೆ. ನಂತರ ಈ ಖಾನ್ ‘ಸತ್ಯಮೇವ ಜಯತೆ’ ಕಾರ್ಯಕ್ರಮ ಮಾಡಿ ಹಾಲನ್ನು ದೈವಮೂರ್ತಿಗಳ ಮೇಲೆ ಚೆಲ್ಲಬೇಡಿ ಎಂದು ಪುಗಸಟ್ಟೆ ಪಾಠ ಮಾಡುತ್ತಾನೆ.

ತೀರಾ ಮೊನ್ನೆಯಷ್ಟೇ ಜಾಹೀರಾತುವೊಂದರಲ್ಲಿ ದೀಪಾವಳಿ ಹಬ್ಬದಲ್ಲಿ ‘ರಸ್ತೆಯಲ್ಲಿ ಪಟಾಕಿ ಹೊಡೆಯಬೇಡಿ’ ಎಂದು ನೂರುಕೋಟಿ ಹಿಂದೂಗಳಿಗೆ ನೀತಿ ಹೇಳುತ್ತಾನೆ. ಸಾಲದೆಂಬಂತೆ ತನ್ನ ಚಿತ್ರಕ್ಕಾಗಿ ಭಾರತ ವಿರೋಧಿ ಟರ್ಕಿ ದೇಶದ ಅಧ್ಯಕ್ಷೆಯನ್ನು ಭೇಟಿ ಮಾಡಿ ದೇಶಾಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗುತ್ತಾನೆ.

ಇನ್ನು ಶಾರುಕ್‌ಖಾನ್ ಎಂಥ ದರಿದ್ರ ಮನಃ ಸ್ಥಿತಿಯವನೆಂದರೆ ಸಾಕ್ಷಾತ್ ತನ್ನ ಮಗ ಸಿಕ್ಕಸಿಕ್ಕ ಹುಡುಗಿಯರೊಂದಿಗೆ ಸುಖಪಡೆಯಬಹು
ದೆಂದು ಮಾಧ್ಯಮದ ಮುಂದೆಯೇ ಹೇಳುತ್ತಾನೆ. ಜತೆಗೆ ತನ್ನ ಮಗ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದು ಮಾನಮರ್ಯಾದೆ ಹರಾಜಾದರೂ ಐಪಿಎಲ್ ಹಾರಾಜಿನಲ್ಲಿ ಅವನನ್ನು ತಂದು ಕೂರಿಸುತ್ತಾನೆ. ಇವರುಗಳ ಮಧ್ಯೆ ‘ಮಹೇಂದ್ರಸಿಂಗ್ ಧೋನಿ’ ಹಿಟ್ ಚಿತ್ರ ಕೊಟ್ಟ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್‌ಗೆ ವೇದಿಕೆಯೊಂದರಲ್ಲಿ ಛೇಡಿಸಿ ಅವಮಾನಿಸುತ್ತಾನೆ. ಹೀಗಾಗಿ ಸುಶಾಂತ್ ಸಾವಿನ ವಿಚಾರದಲ್ಲೂ ಖಾನ್‌ಗಿರಿಯ ತಳುಕು ಕೇಳಿಬಂದಿತ್ತು. ಶಾರುಕ್‌ಖಾನ್ ಸಾಲು ಸಾಲು ಚಿತ್ರಗಳು ಮಕಾಡೆ ಮಲಗಿದಾಗ ಈತನ ಕೈ ಹಿಡಿದದ್ದು ದಕ್ಷಿಣಭಾರತದಲ್ಲಿನ ಕಥೆ ಆಧಾರಿತ ‘ಚೆನೈ ಎಕ್ಸ್‌ಪ್ರೆಸ್’ ಚಿತ್ರ.

ಇನ್ನು ಬಿಗ್‌ಬಿ ಎನಿಸಿರುವ ಬಚ್ಚನ್‌ಗೆ ಏನಾಗಿದೆ? ‘ದಿ ಕಾಶ್ಮೀರ್ ಫೈಲ್ಸ್’ ಹಿಂದಿ ಚಿತ್ರದ ಕುರಿತು ಇದುವರೆಗೂ ಒಂದೂ ಹೇಳಿಕೆಯನ್ನು ನೀಡಿಲ್ಲ. ಏಕೆಂದರೆ 1982ರಲ್ಲಿ ತೆರೆಕಂಡ ಬೆಮಿಸಾಲ್ ಚಿತ್ರದಲ್ಲಿ ನಾಯಕ ಅಮಿತಾಭ್ ಹೇಳುತ್ತಾನೆ ‘ಕಾಶ್ಮೀರವನ್ನು ಕಂಡು ಹಿಡಿದದ್ದು ಮೊಘಲರು’ ಎಂದು. ಅಲ್ಲಿಗೆ ಅರ್ಥವಾಯ್ತಲ್ಲ ! ಹೀಗೆ ನಮ್ಮಿಂದಲೇ ಬಾಲಿವುಡ್ ನಮ್ಮಿಂದಲೇ ಭಾರತದ ಚಿತ್ರರಂಗ ಎಂಬ ಗಾಂಚಲಿಯ ಮೆರೆದರು, ದೇಶದ ಘನತೆಯ ವಿರುದ್ಧವೇ ನಡೆದರು.

ಜಾತಿಧರ್ಮ ಭೇದಗಳಿಲ್ಲದೇ ಹಿಂದಿ ಚಿತ್ರಗಳನ್ನು ಆರಾಽಸುತ್ತಿದ್ದ ಭಾರತೀಯರಿಗೆ ಇವರ ಮಾನಸಿಕತೆ ಅರ್ಥವಾಗುತ್ತ ಬರುತ್ತಿದ್ದಂತೇ
ಬಾಲಿವುಡ್‌ನ ಬಾಲ ಕತ್ತರಿಸಿದ್ದು ರಾಯಚೂರಿನಲ್ಲಿ ಜನಿಸಿದ ಬಾಹುಬಲಿ ಎಸ್‌ಎಸ್ ರಾಜಮೌಳಿ. ಮತ್ತು ಆ ನಂತರ ನಮ್ಮ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಯಶ್. ಬಾಲಿವುಡ್‌ನ ನಾಯಕರನ್ನೆಲ್ಲ ಹಿಂದೂಗಳೆಂದು ತೋರಿಸುತ್ತ, ಹಿಂದುತ್ವವನ್ನು ಅವಹೇಳನ ಮಾಡುತ್ತ ಬರುತ್ತಿದ್ದ ಸಮಯದಲ್ಲಿ ನಿರ್ದೇಶಕ ರಾಜ್‌ಮೌಳಿ, ನಮ್ಮ ಸುದೀಪ್ ಅವರ ‘ಈಗ’ ಚಿತ್ರವನ್ನು ನಿರ್ಮಿಸಿ ಮೊದಲ ಬಾರಿಗೆ ತನ್ನ ತಾಕತ್ತನ್ನು ತೋರುತ್ತಾರೆ.

ನಂತರ ಬಾಹುಬಲಿ ಚಿತ್ರಗಳನ್ನು ಮಾಡಿ ಅದರಲ್ಲಿ ಹಿಂದೂತ್ವದ ಮಹತ್ವ, ಹಿಂದೂ ರಾಜರ ಆಡಳಿತದ ವೈಭವ, ಸನಾತನ ಶಾಸ್ತ್ರಗಳು, ವಿಜ್ಞಾನ, ಜನಜೀವ ನದಲ್ಲಿನ ವೈಜ್ಞಾನಿಕತೆ, ಕಲಾತ್ಮಕತೆ, ಸಂಸ್ಕೃತ ಶ್ಲೋಕಗಳನ್ನೊಳಗೊಂಡ ಗೀತೆಗಳು ಹೀಗೆ ಭವ್ಯ ಸನಾತನ ಪರಂಪರೆಯನ್ನು ಕಣ್ತುಂಬಿಸಿದರಲ್ಲ, ಆಗಲೇ ಇಡೀ ಬಾಲಿವುಡ್ ಖಾನ್‌ಗಿರಿಯನ್ನು ತಿಪ್ಪೆಗೆಸೆಯಲಾರಂಭಿಸಿದ್ದು. ಇನ್ನು ನಮ್ಮ ಕೆಜಿಎಫ್ ಚಿತ್ರ ಮೊದಲಿಗೆ ಒಂದು ಕನ್ನಡ ಚಿತ್ರವಾಗಿ ಆರಂಭಗೊಂಡು ‘ಪ್ಯಾನ್ ಇಂಡಿಯಾ’ ಆಗಿ ಬಿಡುಗಡೆಗೊಂಡಾಗ (2018) ಅದರ ಜತೆಯ ಬಿಡುಗಡೆಯಾದ ಶಾರುಕ್ ಖಾನ್‌ನ ‘ಝೀರೋ’ ಸಿನಿಮಾ ಎಷ್ಟರ ಮಟ್ಟಿಗೆ ಝೀರೋ ಆಯಿತೆಂದರೆ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕುವಾಗ ಝೀರೋ ನೋಡಿ ಎಂದರೆ ‘ಝೀರೋ ಬಿಟ್ಟಾಕಿ, ಹೋಗಿ ಕೆಜಿಎಫ್ ನೋಡಿ’ ಎನ್ನುತ್ತಿದ್ದರು.

ಇನ್ನು ಮೊನ್ನೆ ತೆಲುಗಿನಲ್ಲಿ ಅಲ್ಲುಅರ್ಜುನ್ ಅಭಿನಯದ ‘ಪುಷ್ಪ’ ಬಿಡುಗಡೆಗೊಂಡಿತಲ್ಲ, ಆ ಚಿತ್ರ ಪಕ್ಕಾ ಹಳ್ಳಿ ತೆಲುಗಿನ ನೇಟಿವಿಟಿ ಹೊಂದಿದ ಚಿತ್ರವಾದರೂ ಹಿಂದಿಯಲ್ಲಿ ಬರೋಬ್ಬರಿ ನೂರುಕೊಟಿ ದೋಚಿದೆ. ಪುಷ್ಪ ಚಿತ್ರದ ಪ್ರಭಾವ ಎಷ್ಟಿತ್ತೆಂದರೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯನ ಅಜ್ಜಿಯೂ ಪುಷ್ಪ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪುಟ್ಟ ಮಗುವಿನಿಂದ ಹಿಡಿದು ವಿದೇಶಿ ಕ್ರಿಕೆಟಿಗರೂ ಹಾಡಿಗೆ ಹೆಜ್ಜೆ ಹಾಕಿದ ರಲ್ಲದೇ, ಪಂದ್ಯ ನಡೆಯುತ್ತಿರುವಾಗಲೂ ಪುಷ್ಪ ಚಿತ್ರದ ನಾಯಕನ ಶೈಲಿಯನ್ನು ಅನುಕರಿಸಿದ್ದಾರೆ.

ಎಲ್ಲಿಯ ಪುಷ್ಟ ಎಲ್ಲಿಯ ಡೇವಿಡ್ ವಾರ್ನರ್, ಬ್ರಾವೋ?! ಈಗ ಅಮೀರ್‌ಖಾನ್ ಎಷ್ಟು ಕೆಂಗೆಟ್ಟಿದ್ದಾನೆಂದರೆ ತನ್ನ ಮಹತ್ವಾಕಂಕ್ಷೆಯ ಚಿತ್ರ ’ಲಾಲ್‌ಸಿಂಗ್ ಚಡ್ಡಾ’ ಬಿಡುಗಡೆಯ ದಿನವೇ ಕೆಜಿಎಫ್ ಬಿಡುಗಡೆ ಎಂದು ತಿಳಿದ ಕೂಡಲೇ ಬೆಚ್ಚಿಬಿದ್ದು ಬಾಯಿ ಮುಚ್ಚಿಕೊಂಡು ತನ್ನ ಚಿತ್ರವನ್ನು ಮುಂದೂಡಿದ್ದಾನೆ. ಒಂದು ಕನ್ನಡ ಚಿತ್ರಕ್ಕೆ ಹೆದರಿ ಅಮಿರ್ ಖಾನ್ ಚಿತ್ರ ಮುಂದೂಡಲಾಗಿದೆಯೆಂದರೆ ಅಲ್ಲಿಗೆ ಕನ್ನಡದ ಹವಾ ಹೇಗಿದೆಯೆಂದು ಬಾಲಿವುಡ್‌ಗೆ ಚೆನ್ನಾಗಿಯೇ ಅನುಭೂತಿಯಾಗಿದೆ ಯಲ್ಲವೇ?. ಲಾಲ್‌ಸಿಂಗ್ ಚಡ್ಡ ಚಿತ್ರವನ್ನು ಭಾರತೀಯ ಪ್ರೇಕ್ಷಕ ಕೈಬಿಟ್ಟರೆ ತನ್ನ ಮನೆ ಮಾರಿಕೊಳ್ಳಬೇಕಾಗುತ್ತದೆ ಎಂದು ಕಂಗಾಲಾಗಿ ದಯನೀಯವಾಗಿ ಹೇಳಿಕೊಂಡಿದ್ದಾನೆ ಅಮೀರ್ ಖಾನ್.

ದೇಶಭಕ್ತರು ಇವನ ದೇಶಗೇಡಿತನಕ್ಕೆ ಎಷ್ಟು ರೋಸಿ ಹೋಗಿದ್ದಾರೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ‘ಇವನು ಮನೆಮಾರಿಕೊಂಡು
ದೇಶಬಿಡಲಿಕ್ಕಾದರೂ ಈತನ ಸಿನಿಮಾವನ್ನು ನೋಡಬಾರದು’ ಎನ್ನುತ್ತಿzರೆ. ಹಿಂದೂಗಳ ವಿರುದ್ಧದ ಮನಃಸ್ಥಿತಿಯಲ್ಲಿದ್ದವನು ಈಗ
ಎಷ್ಟೊಂದು ಸಹಿಷ್ಣು ಆಗಿzನೆಂದರೆ ‘ದಿ ಕಾಶ್ಮಿರ್ ಫೈಲ್ಸ್’ ಚಿತ್ರವನ್ನು ಹೊಗಳಿ ಕೊಂಡಾಡಿದ್ದಾನೆ.

2018 ರಲ್ಲಿ ‘ಝೀರೋ’ ಆಗಿದ್ದ ಶಾರುಕ್‌ಖಾನ್ ‘ಪಠಾಣ್’ ಚಿತ್ರ ನಾಲ್ಕು ವರ್ಷಗಳ ನಂತರ ಬರುತ್ತಿದೆ. ಆತನದ್ದೂ ಅಮಿರ್‌ಖಾನ್ ಗತಿಯೇ. ಇವೆರಡೂ ಚಿತ್ರಗಳನ್ನು ಭಾರತೀಯರು ಡಬ್ಬಾ ಸೇರುವಂತೆ ಮಾಡಿದರೆ ಅಲ್ಲಿಗೆ ‘ಖಾನ್‌ದಾನ್’ ಬಾಲಿವುಡ್ ಬೂದಿಯಾ ದಂತೆಯೇ!. ಇದರ ಜತೆಗೆ ದಿ ಕಾಶ್ಮಿರ್ ಫೈಲ್ಸ್ ಹಾಗೂ ರಾಜಮೌಳಿಯ ಆರ್‌ಆರ್‌ಆರ್ ಸಿನಿಮಾ ದೇಶಾದ್ಯಂತ ದೇಶಾಭಿಮಾನ ವನ್ನು ಜಾಗೃತಗೊಳಿಸುತ್ತಿದೆ.

ಅದು ಹಿಂದಿಯ ಸುಮಾರು ಇನ್ನೂರು ಕೋಟಿಯಷ್ಟು ಬಾಚಿದೆಯೆಂದರೆ ಹಿಂದಿ ಚಿತ್ರ ಪ್ರೇಮಿಗಳು ಎತ್ತ ತಿರುಗಿದ್ದಾರೆಂದು ಸ್ಪಷ್ಟವಾಗುತ್ತದೆ. ಇದರ ಪರಿಣಾಮವಾಗಿ ಇಷ್ಟು ದಿನ ಬಾಲಿವುಡ್‌ನಲ್ಲಿ ಎಂತೆಂಥ ಅಸಹ್ಯಗಳನ್ನು ನೋಡಿಕೊಂಡು ಸಹಿಸಿಕೊಂಡು ಬಂದೆವು, ಇನ್ನು ಮುಂದೆ ಎಂಥ ಚಿತ್ರಗಳನ್ನು ಬೆಂಬಲಿಸಬೇಕೆಂಬುದನ್ನು ನಿರ್ಧರಿಸುತ್ತಿದ್ದಾರೆ. ಬಾಲಿವುಡ್ ನಟಿಯೇ ಆಗಿರುವ ಕಂಗಾನ ರಣಾವತ್ ಕೂಡಾ ಬಾಲಿವುಡ್‌ಗಿಂತ ದಕ್ಷಿಣಭಾರತದ ಚಿತ್ರಗಳೇ ದೇಶದ ಘನತೆಯನ್ನು ಹೆಚ್ಚಿಸುತ್ತಿರುವುದಾಗಿ ಹೇಳಿಕೆ ನೀಡಿzರೆ. ಇದಕ್ಕೆಲ್ಲ ಪೂರಕವಾಗಿ ನಮ್ಮ ಕೆಜಿಎಫ್ 2 ಮುಂದಿನ ವಾರ ವಿಶ್ವಾದ್ಯಂತ ತೆರೆಕಾಣುತ್ತಿದೆ.

ಯಾವ ಹಾಲಿವುಡ್ ಚಿತ್ರವನ್ನೂ ಮೀರಿಸುವಂತಿರುವ ಬರಿಯ ಟ್ರೈಲರತ್ ನೋಡಿಯೇ ದೇಶದ ಚಿತ್ರಪ್ರೇಮಿಗಳು ಕಾತರದಿಂದ ಕಾಯು
ತ್ತಿzರೆ. ಇನ್ನು ಸುದೀಪ್ ಅಭಿನಯದ ‘ವಿಕ್ರಾಂತ್ ರೋಣಾ’ ಬುರ್ಜ್ ಖಲೀಫಾ ಮಟ್ಟಕ್ಕೇರಿ ನಿರೀಕ್ಷೆ ಹುಟ್ಟಿಸಿ ಬಿಡುಗಡೆಗೆ ಸಿದ್ಧಗೊಂಡಿದೆ.
ಇದು ಪ್ಯಾನ್‌ಇಂಡಿಯಾ ಸಿನಿಮಾ ಆಗಿರದೆ ‘ಪ್ಯಾನ್ ವರ್ಡ್’ ಸಿನಿಮಾ ಆಗಿದ್ದು ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ
ಕನ್ನಡದ ಈ ಎರಡು ಚಿತ್ರಗಳಂತೂ ಬಾಲಿವುಡ್‌ನ ಸಮಾಽ ಕಟ್ಟುವುದಂತೂ ಖಚಿತ.

ಒಂದು ಕಾಲದಲ್ಲಿ ಹಿಂದಿ ಸಿನಿಮಾ ಬಿಡುಗಡೆಯ ಮೊದಲು ದರ್ಗಾಕ್ಕೆ ಹೋಗಿ ಚಾದರ ಹೊದಿಸಿ ಪ್ರಾರ್ಥಿಸಿ ಬರುತ್ತಿದ್ದ ಬೆರಕೆ ನಟನಟಿ
ಯರು ಇಂದು ವಾರಣಾಸಿಯ ಕಾಶಿವಿಶ್ವನಾಥ ದೇವಾಲಯಕ್ಕೆ ತೆರಳಿ ಹರಕೆ ಹೊರುತ್ತಿzರೆ. ತನ್ನ ಚಿತ್ರದ ಪ್ರಚಾರವನ್ನು ದೇಶದ್ರೋಹಿ ತುಖಡೇ ಗ್ಯಾಂಗ್ ಜತೆಸೇರಿ ಮಾಡುತ್ತಿದ್ದ ಪ್ರಿಯಾಂಕ ಪಡುಕೋಣೆ ಒಂದೆಡೆಯಾದರೆ, ರಾಜಮೌಳಿ, ರಾಮಚರಣ್, ಜ್ಯೂ.ಎನ್‌ಟಿಆರ್ ಕಾಶಿಗೆ ತೆರಳಿ ಗಂಗಾರತಿ ಮಾಡಿ ಬರುತ್ತಿzರೆ. ಈಗ ನಿಜಕ್ಕೂ ದೇಶಕ್ಕೆ ಬೇಕಿರುವ ಮಹತ್ವದ ಚಿತ್ರವೆಂದರೆ ‘ಬಾಲಿವುಡ್ ಫೈಲ್ಸ್’ ಎಂಬ ಸತ್ಯ ಸಿನಿಮಾ.

ಅದನ್ನು ಆರ್‌ಜಿವಿ ಅಥವಾ ವಿವೇಕ್ ಅಗ್ನಿಹೋತ್ರಿ ತಯಾರಿಸಿದರೂ ಆಶ್ಚರ್ಯವಿಲ್ಲ. ಇಷ್ಟೆಲ್ಲ ಹೇಳಿದ ಮೇಲೆ ಕನ್ನಡಿಗರನ್ನು ಕಾಡುತ್ತಿರುವ
ನಿರಾಸೆಯೆಂದರೆ ಇಂಥ ಕಾಲದಲ್ಲಿ ನಮ್ಮ ಆ ಒಂದು ಚಿರತೆ ಮತ್ತು ಆನೆ ಬದುಕಿದಿದ್ದರೆ ಅದೇ ಶಂಕರ್‌ನಾಗ್ ಮತ್ತು ಅಪ್ಪು..!!