ಬೆಂಗಳೂರು:
ಕರೋನಾ ಶಂಕಿತ ಹಾಗೂ ದೃಢಪಟ್ಟ ವ್ಯಕ್ತಿಗಳ ಚಿಕಿತ್ಸೆಗೆ (ಆರೋಗ್ಯ ಕರ್ನಾಟಕ-ಆಯುಷ್ಮಾನ್ ಭಾರತ್ ಯೋಜನೆ ನಿಯಮ ಸಡಿಲಿಸಿ ಜಿಲ್ಲಾ ಆಸ್ಪತ್ರೆಗಳನ್ನು ಕರೋನಾ ಆಸ್ಪತ್ರೆಗಳಾಗಿ ಸದ್ಯಕ್ಕೆ ಪರಿಗಣಿಸಲಾಗಿದೆ.
ನಿತ್ಯ ಚಿಕಿತ್ಸೆಗೆ ಬಯಸಿ ಜಿಲ್ಲಾ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ ಮಾಡಿ ಆಯ್ಕೆ ಮಾಡಲಾದ ಖಾಸಗಿ ಅಥವಾ ನೋಂದಾಯಿತ ಆಸ್ಪತ್ರೆಗಳಿಗೆ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ.ತುರ್ತುಪರಿಸ್ಥಿತಿ ನಿಭಾಯಿಸಲು ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಎಬಿಎಆರ್ ಕೆ ಯೋಜನೆಯಡಿ ನಿಯಮ ಸಡಿಸಲಿಸಿ ಇಂತಹ ಅವಕಾಶ ಕಲ್ಪಿಸಲಾಗಿದೆ.
ಯೋಜನೆಯಡಿ ನಿಗದಿಯಾಗಿರುವ ೧೬೫೦ ಚಿಕಿತ್ಸಾ ವಿಧಾನಗಳಿಗೆ ನಿಗದಿತ ದರದಂತೆ ಭರಿಸಲು ಹಾಗೂ ಪರಿಗಣಿಸಲಾದ ಚಿಕಿತ್ಸಾ ವಿಧಾನಗಳನ್ನು ಹೊರತುಪಡಿಸಿ ಇತರೆ ಚಿಕಿತ್ಸೆಗೆ ಒಳಪಟ್ಟಲ್ಲಿ ಸಿಜಿಎಚ್ ಎಸ್ ದರಗಳ ಆಧಾರದ ಮೇಲೆ ಸುವರ್ಣ ಆರೋಗ್ಯ ಟ್ರಸ್ಟ್ ಭರಿಸಲು ಸರಕಾರ ಸೂಚಿಸಿದೆ.