Saturday, 23rd November 2024

ಆರ್ಥಿಕವಾಗಿ ಹಿಂದೆ ಹೋಗಿದ್ದು ಭಾರತ ಮಾತ್ರವಲ್ಲ ಇಡೀ ವಿಶ್ವ

ಅಶ್ವತ್ಥ ಕಟ್ಟೆ
– ರಂಜಿತ್. ಎಚ್ ಅಶ್ವತ್ಥ

ಕಳೆದ 15 ದಿನದಿಂದ ದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕರೋನಾ ಭೀತಿ. ಕರೋನಾವನ್ನು ದೇಶದಿಂದ ಹೊರದಬ್ಬಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕೂತಿರಬೇಕು ಎನ್ನುವ ಸಮಸ್ಯೆೆ ಒಂದೆಡೆಯಾದರೆ, ಕರೋನಾ ಎಫೆಕ್‌ಟ್‌‌ಗೆ ಸೈಡ್ ಎಫೆಕ್‌ಟ್‌ ರೀತಿ ಭಾರತದ ಆರ್ಥಿಕತೆಯ ಮೇಲಾಗುವ ಪರಿಣಾಮ ಮೇಲೆ ಜನ ಮಾತನಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಜನ ಮಾತನಾಡಿಕೊಳ್ಳುತ್ತಿರುವಂತೆ ಭಾರತ ಆರ್ಥಿಕತೆಗೆ ಕರೋನಾ ಕೊಡಲಿ ಪೆಟ್ಟು ಕೊಟ್ಟಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇದರಿಂದ ದೇಶದ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಸಮಸ್ಯೆಗಳು ಭವಿಷ್ಯದಲ್ಲಿ ಏಳಬಹುದು. ಇದರೊಂದಿಗೆ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆೆ ನುಗಿದ್ದ ಭಾರತ ಇನ್ನಷ್ಟು ಸಮಸ್ಯೆೆಗೆ ಸಿಲುಕಲಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಇದರಿಂದ ಭಾರತ ಆರ್ಥಿಕವಾಗಿ ಹಿಂದೆ ಹೋಗುವುದರಿಂದ, ಮುಂದಿನ ದಿನಗಳು ಮತ್ತಷ್ಟು ಕಷ್ಟದ ದಿನಗಳಾಗಲಿವೆ ಎನ್ನುವುದನ್ನು ಒಪ್ಪಲೇಬೇಕು. ಆದರೆ ಕರೋನಾ ಎನ್ನುವುದು ಕೇವಲ ಭಾರತ ಅಥವಾ ಇನ್ಯಾಾವುದೋ ಒಂದು ದೇಶದ ಸಮಸ್ಯೆೆಯಾಗಿ ಉಳಿದಿಲ್ಲ. ಇದೊಂದು ಜಾಗತಿಕ ಸಮಸ್ಯೆೆಯಾಗಿದ್ದು, ವಿಶ್ವದ ದೊಡ್ಡಣ್ಣ ಅಮೆರಿಕ ಸೇರಿದಂತೆ 160ಕ್ಕೂ ಹೆಚ್ಚು ದೇಶದಲ್ಲಿ ಕರೋನಾ ಕಾಣಿಸಿಕೊಂಡಿದೆ. ಆದ್ದರಿಂದ ಬಹುತೇಕ ದೇಶಗಳು ಲಾಕ್‌ಡೌನ್ ಪರಿಸ್ಥಿಿತಿಯಲ್ಲಿದ್ದು, ಇದೇ ಪರಿಸ್ಥಿಿತಿಯನ್ನು ಇನ್ನು ಕೆಲ ತಿಂಗಳ ಕಾಲ ಮುಂದುವರಿಸುವ ಇಚ್ಛೆಯನ್ನು ಅಲ್ಲಿನ ಸರಕಾರಗಳು ಹೊಂದಿವೆ. ಆದ್ದರಿಂದ ಆರ್ಥಿಕವಾಗಿ, ಜಿಡಿಪಿ ಲೆಕ್ಕದಲ್ಲಿ ಹಾಗೂ ಅಭಿವೃದ್ಧಿಯ ದೃಷ್ಟಿಯಲ್ಲಿ ನೋಡುವುದಾದರೆ ಕೇವಲ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಕೆಲ ವರ್ಷ ಹಿಂದಕ್ಕೆ ಹೋಗಿದೆ ಎಂದರೆ ತಪ್ಪಾಾಗುವುದಿಲ್ಲ.

ವಿಶ್ವದ ಒಟ್ಟು ಜಿಡಿಪಿಯಲ್ಲಿ ಬಹುಪಾಲು ಪಡೆಯವ ದೇಶಗಳ ಪಟ್ಟಿಯಲ್ಲಿ ಪ್ರಮುಖವಾಗಿ ಅಮೆರಿಕ, ಚೀನಾ, ಭಾರತ, ಜರ್ಮನಿ, ಇಂಗ್ಲೆೆಂಡ್, ಫ್ರಾನ್‌ಸ್‌, ಸ್ವಿಜರ್‌ಲ್ಯಾಾಂಡ್ ಪಾತ್ರವಹಿಸುತ್ತವೆ. ಆದರೆ ದುರಾದೃಷ್ಟವಶಾತ್ ಕರೋನಾ ಸೋಂಕಿತ ಪಟ್ಟಿಯಲ್ಲಿಯೂ ಈ ದೇಶಗಳೇ ಟಾಪ್ 10 ಸ್ಥಾನದಲ್ಲಿ ಕಾಣಿಸಿಕೊಂಡಿವೆ. ಹಾಗೇ ನೋಡಿದರೆ, ಅಮೆರಿಕ, ಚೀನಾ, ಇಂಗ್ಲೆೆಂಡ್, ಫ್ರಾಾನ್‌ಸ್‌, ಜರ್ಮನಿ, ಇಟಲಿ ದೇಶವನ್ನು ಹೋಲಿಸಿದರೆ ಭಾರತಕ್ಕೆೆ ಕರೋನಾ ಹೆಚ್ಚು ಕಾಡಿಲ್ಲ. 135 ಕೋಟಿ ಜನಸಂಖ್ಯೆೆಯಲ್ಲಿ ಕರೋನಾ ಕಾಣಿಸಿಕೊಂಡಿದ್ದು, ಸಾವಿರ ಮಂದಿಗೆ ಮಾತ್ರ! ಇಷ್ಟು ಜನರಲ್ಲಿ ಮೃತಪಟ್ಟವರ ಪ್ರಮಾಣ ಇನ್ನು ಕಡಿಮೆಯಿದೆ. ಆದ್ದರಿಂದ ಆರ್ಥಿಕ ವಿಷಯದಲ್ಲಿ ನೋಡುವುದಾದರೆ, ಒಮ್ಮೆೆ ಕರೋನಾ ಮಹಾಮಾರಿ ಹೋದರೆ, ಈ ದೇಶಗಳಿಗಿಂತ ಶೀಘ್ರವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಭಾರತಕ್ಕಿದೆ. ಆದರೆ ಕರೋನಾ ಇನ್ನು ಭಾರತದಲ್ಲಿ ಯಾವ ಹಂತದಲ್ಲಿದೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ ಎನ್ನುವುದು ಬೇರೆ ಮಾತು.

ಕರೋನಾದ ಈ ಸಮಸ್ಯೆಯಿಂದ ಈಗಾಗಲೇ ವಿಶ್ವದ ಅರ್ಧಕ್ಕೂ ಹೆಚ್ಚು ದೇಶಗಳು ಲಾಕ್‌ಡೌನ್ ಆಗಿವೆ. ಪಾಕಿಸ್ತಾನದಂತಹ ಕೆಲ ದೇಶಗಳನ್ನು ಹೊರತುಪಡಿಸಿ, ಕೆಲ ದೇಶದಲ್ಲಿ ಭಾರತದ ರೀತಿಯಲ್ಲಿ ಅಧಿಕೃತವಾಗಿ ಲಾಕ್‌ಡೌನ್ ಮಾಡಿದ್ದರೆ, ಇನ್ನು ಕೆಲ ದೇಶಗಳಲ್ಲಿ ಅನಧಿಕೃತವಾಗಿ ಲಾಕ್‌ಡೌನ್ ಆಗಿವೆ. ಚೀನಾದ ವಾಣಿಜ್ಯ ರಾಜಧಾನಿಯೆಂದೇ ಹೇಳುವ ವುಹಾನ್ ತಿಂಗಳಿಗೂ ಹೆಚ್ಚು ಕಾಲ ಸ್ತಬ್ಧವಾಗಿತ್ತು. ಇದೀಗ ಲಾಕ್‌ಡೌನ್ ಆದೇಶವನ್ನು ಹಿಂಪಡೆದಿದ್ದರೂ, ನಗರ ಮಾತ್ರ ಸಹಜ ಸ್ಥಿತಿಗೆ ಬಂದಿಲ್ಲ. ಇನ್ನು ಅತಿಹೆಚ್ಚು ಕರೋನಾ ಸೋಂಕಿತರು ಇರುವ ಅಮೆರಿಕ ಇದಕ್ಕೆ ಹೊರತಲ್ಲ. ಅಲ್ಲಿನ ಅಧ್ಯಕ್ಷ ಟ್ರಂಪ್ ಸರಕಾರವನ್ನು ಲಾಕ್‌ಡೌನ್ ಮಾಡುವ ಅಗತ್ಯವಿಲ್ಲ ಎಂದಿದ್ದರೂ, ಈಗಾಗಲೇ 50 ಬಿಲಿಯನ್ ಡಾಲರ್‌ನ್ನು ಘೋಷಣೆ ಮಾಡಿದ್ದಾಾರೆ. ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಇದು 3,50,00,00,000 ರು.ಗಳಾಗುತ್ತೆೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಬಿಡುಗಡೆ ಮಾಡುವುದರೊಂದಿಗೆ, ಇದೀಗ ಅಮೆರಿಕದ ಬಹುತೇಕ ಆದಾಯ ಇಲ್ಲ ಎನ್ನುವ ರೀತಿಯಲ್ಲಿಯೇ ಇರುತ್ತದೆ. ಆದ್ದರಿಂದ ಸಹಜವಾಗಿ ಆರ್ಥಿಕತೆಯಲ್ಲಿ ಭಾರಿ ಹಿಂದೆ ಹೋಗುವುದರಲ್ಲಿ ಅನುಮಾನವಿಲ್ಲ. ಇದೇ ಪರಿಸ್ಥಿತಿ ಚೀನಾ, ಇಟಲಿ, ಇಂಗ್ಲೆೆಂಡ್, ಜರ್ಮನಿಯಲ್ಲಿಯೂ ಇದ್ದು, ಸುಮಾರು ಕೋಟಿ ನಷ್ಟವಾಗುತ್ತಿದೆ ಎನ್ನುವುದನ್ನು ಅಲ್ಲಿನ ಸರಕಾರಗಳು ಒಪ್ಪಿಕೊಂಡಿವೆ.

ಈ ರೀತಿ ಆರ್ಥಿಕ ಹೊಡೆತ ಈ ಹಿಂದೆ ಮೊದಲನೇ ಹಾಗೂ ಎರಡನೇ ವಿಶ್ವಯುದ್ಧ ನಡೆದ ಸಮಯದಲ್ಲಿ ಆಗಿತ್ತಂತೆ. ಇದನ್ನು ಕೆಲವರು ಮೂರನೇ ವಿಶ್ವಯುದ್ಧ ಎಂದು ಕರೆಯುತ್ತಾಾರೆ ಎನ್ನುವುದು ಬೇರೆ ಮಾತು. ಒಂದು ಮೂಲದ ಪ್ರಕಾರ 2.1 ಟ್ರಿಲಿಯನ್ ನಷ್ಟ ಇಡೀ ವಿಶ್ವಕ್ಕೆ ಆಗುತ್ತದೆ. ಅದನ್ನು ಭಾರತದ ರುಪಾಯಿಗೆ ಬದಲಾಯಿಸಿ ಹೇಳುವುದಾದರೆ ಅಂದಾಜು, 150 ಲಕ್ಷ ಕೋಟಿ ರು. ನಷ್ಟವಂತೆ. ಇದು ಮುಂದಿನ ಎರಡು ತಿಂಗಳಲ್ಲಿ ಸಹಜ ಸ್ಥಿತಿಗೆ ಬಂದರೆ ಮಾತ್ರ. ಒಂದು ವೇಳೆ ಇದು ಮುಂದುವರಿದರೆ ಮತ್ತಷ್ಟು ನಷ್ಟವಾಗುವುದರಲ್ಲಿ ಸಂಶಯವೇ ಇಲ್ಲ. ವಿಶ್ವಕ್ಕೆ ಇಷ್ಟು ದೊಡ್ಡ ಆರ್ಥಿಕತೆ ಹೊಡೆತ ನೀಡುತ್ತಿದೆ. ಆದರೆ ಕರೋನಾ ಹೋದ ಕೂಡಲೇ ಇಷ್ಟು ಬರುವುದಿಲ್ಲ. ಬದಲಿಗೆ ಹೋಗಿರುವ ಸಮಸ್ಯೆೆ ಮತ್ತಷ್ಟು ನಷ್ಟವಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ನಷ್ಟ ಕೇವಲ ಲಕ್ಷ ಕೋಟಿ ಲೆಕ್ಕದಲ್ಲಿಯೇ ಆಗಬೇಕು ಎಂದಿಲ್ಲ. ಉದಾಹರಣೆಗೆ ರಸ್ತೆೆ ಬದಿಯಲ್ಲಿ ಪಾನಿಪುರಿ ಮಾಡುವ ವ್ಯಾಾಪಾರಿಯೋ, ಸಣ್ಣ ಹೂವಿನ ಅಂಗಡಿ ವ್ಯಾಪಾರಿ ದಿನಕ್ಕೆೆ ಸಾವಿರ ರುಪಾಯಿ ತಗೆದುಕೊಂಡು ಮನೆಗೆ ಹೋಗುತ್ತಿದ್ದರು. ಅಂದರೆ ತಿಂಗಳಿಗೆ 30 ಸಾವಿರ ರುಪಾಯಿ. ಆದರೀಗ ಕರೋನಾ ಲಾಕ್‌ಡೌನ್‌ನಿಂದ ಆ ವ್ಯಾಪಾರಿಗೆ ಒಂದು ರುಪಾಯಿ ಸಹ ಬರುತ್ತಿಲ್ಲ. ಸಾರಸಗಟಾಗಿ ನೋಡುವುದಾದರೆ, ಸಣ್ಣ ವ್ಯಾಪಾರಿಗೆ ತಿಂಗಳಿಗೆ 30 ಸಾವಿರ ನಷ್ಟವಾಗುತ್ತಿದ್ದರೆ, ದೊಡ್ಡ ಆಟೋಮೊಬೈಲ್ ಕಂಪನಿಗಳು, 25 ಸಾವಿರ ಉದ್ಯೋಗಿಗಳನ್ನು ನಿಭಾಯಿಸುವ ಇನ್ಫೋಸಿಸ್‌ನಂಥ ಬೃಹತ್ ಐಟಿ ಕಂಪನಿಗಳಿಗೆ ಆಗಬಹುದಾದ ನಷ್ಟವೇನು ಎನ್ನುವುದನ್ನು ಊಹಿಸುವುದಕ್ಕೂ ಕಷ್ಟ. ಇನ್ನು ಯೂರೋಪ್, ಇಟಲಿ, ಸ್ಪೇನ್‌ನಂತಹ ಪ್ರವಾಸೋದ್ಯಮ ಪೂರಕ ದೇಶಗಳಲ್ಲಿ ಕರೋನಾದಿಂದ ಪ್ರಸ್ತುತ ಮಾತ್ರವಲ್ಲದೇ, ಮುಂದಿನ ಕೆಲ ವರ್ಷಗಳ ಕಾಲ ನಷ್ಟವಾಗುವುದು ಖಚಿತ. ಇದನ್ನು ನಿಭಾಯಿಸುವುದು ಹೇಗೆ ಎನ್ನುವುದನ್ನು ಅಲ್ಲಿನ ಸರಕಾರಗಳೇ ನಿರ್ಧರಿಸಬೇಕಿದೆ. ಜರ್ಮನಿಯಲ್ಲಿ ಕರೋನಾದಿಂದ ಆದ ಆರ್ಥಿಕ ಮುಗ್ಗಟ್ಟಿನಿಂದ, ದೇಶದಲ್ಲಾಾಗುತ್ತಿರುವ ಅಲ್ಲೋಲ್ಲ ಕಲ್ಲೋೋಲ್ಲದಿಂದ ಹಾಗೂ ಆರ್ಥಿಕ ತುರ್ತು ಪರಿಸ್ಥಿತಿಯಿಂದ ಬೇಸತ್ತು ಅಲ್ಲಿನ ಹಣಕಾಸು ಸಚಿವರೇ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇನ್ನು ಈಗಾಗಲೇ ಹೇಳುತ್ತಿರುವ ಆರ್ಥಿಕ ಸಮಸ್ಯೆ ಕರೋನಾ ಮುಗಿಯುತ್ತಿದ್ದಂತೆ ಮುಗಿಯಿತು ಎನ್ನುತ್ತಿಲ್ಲ. ಏಕೆಂದರೆ ಇಂಗ್ಲೆೆಂಡ್ ಈಗಾಗಲೇ ಆರು ತಿಂಗಳ ಕಾಲ ಲಾಕ್‌ಡೌನ್ ಮಾಡಲು ಚಿಂತನೆ ನಡೆಸಿದೆ. ಅಮೆರಿಕ ಸದ್ಯಕ್ಕೆ ಲಾಕ್‌ಡೌನ್ ಮಾಡುವ ಲೆಕ್ಕಾಚಾರದಲ್ಲಿ ಇರದಿದ್ದರೂ, ಅಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆೆ ಹೆಚ್ಚಾದರೆ ಅನಿವಾರ್ಯವಾಗಿ ಲಾಕ್‌ಡೌನ್ ಮಾಡಲೇಬೇಕು. ಅದು ಕನಿಷ್ಟ ಆರು ತಿಂಗಳ ಮಟ್ಟಿಗೆ. ಈ ರೀತಿ ಸಂಪೂರ್ಣ ಲಾಕ್‌ಡೌನ್ ಆದರೆ ಅಲ್ಲಿನ ಜಿಡಿಪಿಯೂ ನೆಲಕಚ್ಚುವುದು ಖಚಿತ. ಈಗಾಗಲೇ ಭಾರತ ತನ್ನ ಜಿಡಿಪಿಯನ್ನು 5ರಿಂದ 3.5ಗೆ ಅಂದಾಜು ಮಾಡಿದೆ.
ಈ ರೀತಿ ಸಂಪೂರ್ಣ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆೆ ಸಿಲುಕಿರುವುದರಿಂದ ಆರ್ಥಿಕ ಮುಗ್ಗಟ್ಟು ಕೇವಲ ಭಾರತಕ್ಕೆೆ ಆಗುವುದಿಲ್ಲ. ಇದರಿಂದ ಮಧ್ಯಮ ವರ್ಗಕ್ಕೆ ಆಗುವ ಸಮಸ್ಯೆೆಯಾದರೂ ಏನು ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪ್ರಮುಖವಾಗಿ ಈ ಆರ್ಥಿಕ ಮುಗ್ಗಟ್ಟು ನೇರವಾಗಿ ನಿರುದೋಗ್ಯ ಸಮಸ್ಯೆೆಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ನಿರೀಕ್ಷಿತ ಪ್ರಮಾಣದಲ್ಲಿ ವಿಶ್ವಮಟ್ಟದಲ್ಲಿ ವ್ಯಾಪರವಾಗದೇ ಇರುವುದರಿಂದ ಚಿಲ್ಲರೆ ವ್ಯಾಪಾರಿಗಳ ಮೇಲೆ, ಪ್ರವಾಸೋದ್ಯಮ ಮೇಲೆ, ಸಾರಿಗೆ ಕ್ಷೇತ್ರದಲ್ಲಿ, ಆಟೋಮೊಬೈಲ್, ಹೋಟೆಲ್ ಉದ್ಯಮದ ಮೇಲೆ ಭಾರಿ ಹೊಡೆತ ಬೀಳುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ದೇಶದ ಹಲವು ಪಂಚತಾರಾ ಹೋಟೆಲ್‌ಗಳು ತಮ್ಮ ಉದ್ಯಮವನ್ನು ನಡೆಸಲು ಸಾಧ್ಯವಾಗದೇ ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಇದು ಮುಂದಿನ ದಿನದಲ್ಲಿ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಆದರೆ ಪ್ರತಿಬಾರಿ ಇಡೀ ವಿಶ್ವ ಆರ್ಥಿಕ ಮುಗ್ಗಟ್ಟು ಎದುರಿಸಿದಾಗ ಭಾರತದಲ್ಲಿಯೂ ರಿಸಿಶನ್ ಆಗಿದ್ದರೂ, ಅದು ದೊಡ್ಡ ಮಟ್ಟದಲ್ಲಿ ಆಗಿಲ್ಲ. ಅದಕ್ಕೆೆ ಕಾರಣ ಇಲ್ಲಿನ ಜೀವನ ಶೈಲಿ. ಉದ್ಯೋೋಗ ಕಳೆದುಕೊಂಡು ಹಳ್ಳಿಗಳಿಗೆ ಹೋದರು ಅಲ್ಲಿ ಜಮೀನು ಮಾಡಿಕೊಂಡು ಜೀವನ ಸಾಗಿಸುವುದು ದೊಡ್ಡ ವಿಷಯವಲ್ಲ. ಆದ್ದರಿಂದ ಭಾರತೀಯರಿಗೆ ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವುದು ದೊಡ್ಡ ವಿಷಯವಲ್ಲ. ಆದರೆ ಈಗ ಬಂದಿರುವ ಆಪತ್ತು ಕರೋನಾದಿಂದ ತಪ್ಪಿಿಸಿಕೊಳ್ಳಬೇಕಿದೆಯಷ್ಟೆೆ.
ಇನ್ನು ಇಡೀ ವಿಶ್ವದ ಪರಿಸ್ಥಿತಿ ಹೀಗಿರುವಾಗ ಕರ್ನಾಟಕದ ಪರಿಸ್ಥಿತಿ ವಿಭಿನ್ನವಾಗಿಲ್ಲ. ಕರ್ನಾಟಕದಲ್ಲಿ 2019-20ನೇ ಸಾಲಿನಲ್ಲಿ ಆರ್ಥಿಕ ಪರಿಸ್ಥಿತಿ ವಿಷಮ ಸ್ಥಿತಿಯಲ್ಲಿತ್ತು. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ, ಒಂದೆಡೆ ತೆರಿಗೆ ಸಂಗ್ರಹವಾಗಿರಲಿಲ್ಲ. ಜಿಎಸ್‌ಟಿಯಿಂದ ರಾಜ್ಯಕ್ಕೆ ಬರಬೇಕಾಗಿದ್ದ ಪಾಲನ್ನು ಕೇಂದ್ರ ಸರಕಾರ ನೀಡಿರಲಿಲ್ಲ. ಈ ಎರಡರೊಂದಿಗೆ ಕೇಂದ್ರ ಸರಕಾರದಿಂದ ಬರಬೇಕಾದ ಹಣವೂ ಬಂದಿರಲಿಲ್ಲ. ಈ ಎಲ್ಲರೊಂದಿಗೆ ರಾಜ್ಯದಲ್ಲಿ ಕಾಣಿಸಿಕೊಂಡ ಪ್ರವಾಹ ಪರಿಸ್ಥಿತಿಯಿಂದ, ಪರಿಹಾರ ನೀಡುವುದಕ್ಕಾಾಗಿ ಹಣ ವ್ಯಯಿಸಿ ಖಜಾನೆಯನ್ನು ಖಾಲಿ ಮಾಡಿಕೊಂಡಿತ್ತು. ಇದೀಗ ಕರೋನಾವನ್ನು ಯುದ್ಧೋೋಪಾದಿಯಲ್ಲಿ ನಿಭಾಯಿಸಲು ಹಣ ಬಿಡುಗಡೆ ಮಾಡಬೇಕಿದೆ. ಆದರೆ ಸರಕಾರಕ್ಕೆೆ ಬರಬೇಕಾದ ವರಮಾನ ಸಂಪೂರ್ಣ ನಿಂತಿದೆ. ಆದ್ದರಿಂದ ರಾಜ್ಯ ಸರಕಾರಕ್ಕೆೆ ಇದೀಗ ಖರ್ಚು ಹೊರತು, ಒಳಹರಿವು ಸಂಪೂರ್ಣ ಬತ್ತಿದೆ. ಇನ್ನು ಈ ಸಂಕಷ್ಟ ಪರಿಸ್ಥಿಿತಿಯಲ್ಲಿ ಕೇಂದ್ರದಿಂದ ಸಹಾಯವನ್ನು ಕೇಳುವ ಬಗ್ಗೆೆ ಯೋಚಿಸಿದರೆ, ಕರ್ನಾಟಕ ರಾಜ್ಯ ಆರ್ಥಿಕ ಪರಿಸ್ಥಿಿತಿಯಿಂದ ಕೇಂದ್ರದ ಖಜಾನೆಯಲ್ಲಿ ಏನು ಬದಲಾವಣೆಯಿಲ್ಲ. ಆದ್ದರಿಂದ ಈ ಹಂತದಲ್ಲಿ ಕೇಂದ್ರ ಸರಕಾರದಿಂದ ಯಾವುದೇ ಹೆಚ್ಚುವರಿ ಸಹಾಯದ ನಿರೀಕ್ಷೆಯನ್ನು ಮಾಡುವಂತಿಲ್ಲ. ಆದ್ದರಿಂದ ರಾಜ್ಯದಲ್ಲಿ ಇರುವ ಸಂಪನ್ಮೂಲವನ್ನೇ ಕ್ರೊೊಢೀಕರಿಸಿಕೊಂಡು ಈ ಮಹಾಮಾರಿ ವಿರುದ್ಧ ಹೋರಾಡಬೇಕಿರುವ ಅನಿವಾರ್ಯತೆ ಕರ್ನಾಟಕ ಸರಕಾರದ ಮೇಲಿದೆ.
ಆದ್ದರಿಂದ ರಾಜ್ಯ ಸರಕಾರ ಇದೀಗ ಕರೋನಾ ವಿರುದ್ಧ ಹೋರಾಡಲು ಅಗತ್ಯವಿರುವ ಹಣಕಾಸನ್ನು ನಿಭಾಯಿಸಲು, ಇತರೆ ಯೋಜನೆಗಳಿಗೆ ನೀಡಿರುವ ಅನುದಾನವನ್ನು ಕಡಿತಗೊಳಿಸಿ ಅದನ್ನು ಆರೋಗ್ಯ ಇಲಾಖೆ ಅಥವಾ ಕರೋನಾ ಸಂಬಂಧಿತ ಖರ್ಚಿಗೆ ಬಳಸಬೇಕಿದೆ. ಇದೇ ವಿಚಾರವಾಗಿ ಭಾನುವಾರ ನಡೆದ ಸರ್ವ ಪಕ್ಷ ಸಭೆಯಲ್ಲಿಯೂ ಚರ್ಚೆಯಾಗಿದ್ದು, ಇತರೆ ಯೋಜನೆಗಳಿಗೆ ಇಟ್ಟಿರುವ ಅನುದಾನವನ್ನು ಕರೋನಾಗೆ ಬಳಸಬೇಕು ಎನ್ನುವ ಸಲಹೆ ಕೇಳಿಬಂದಿದೆ. ಇದು ಅನಿವಾರ್ಯಯೂ ಸಹ. ಆದ್ದರಿಂದ ಇದೀಗ ಯಡಿಯೂರಪ್ಪ ಅವರ ಸರಕಾರ ಎಲ್ಲ ಇಲಾಖೆಯ ಅನುದಾನವನ್ನು ಕರೋನಾದತ್ತ ಡೈವರ್ಟ್ ಮಾಡುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧತೆ ನಡೆಸಿಕೊಂಡಿದೆ. ಆದರೆ ಈ ರೀತಿ ಮಾಡುವುದರಿಂದ ರಾಜ್ಯದ ಎಲ್ಲ ಅಭಿವೃದ್ಧಿಿ ಕಾರ್ಯಗಳಿಗೂ ಬ್ರೇಕ್ ಬೀಳಲಿದೆ. ರಸ್ತೆೆ ಕಾಮಗಾರಿ, ಸೇತುವೆ ನಿರ್ಮಾಣ, ವಸತಿ ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳು ಸ್ಥಗಿತಗೊಂಡು, ಸಂಬಳ , ಪಿಂಚಣಿ ಹಾಗೂ ಇತರೆ ಕೆಲ ಯೋಜನೆಗಳಿಗೆ ಮಾತ್ರ ಸರಕಾರದ ಅನುದಾನ ಸೀಮಿತಗೊಳ್ಳಲಿದೆ. ತಜ್ಞರೊಬ್ಬರ ಪ್ರಕಾರ ಇದು ಕೇವಲ ಒಂದು ವರ್ಷದ ಕಥೆಯಲ್ಲವಂತೆ, ಈಗ ಸಂಭವಿಸಿರುವ ಈ ಆರ್ಥಿಕ ಮುಗ್ಗಟ್ಟಿನಿಂದ ಸರಿ ಹೋಗಲು ಕನಿಷ್ಠ ಎರಡರಿಂದ ಮೂರು ವರ್ಷ ಅಗತ್ಯವಿದೆಯಂತೆ.(ಅದು ಮುಂದಿನ ವರ್ಷದಲ್ಲಿ ಯಾವುದೇ ಸಮಸ್ಯೆೆಯಾಗದಿದ್ದರೆ ಮಾತ್ರ).

ಆದ್ದರಿಂದ ಈ ಹಂತದಲ್ಲಿ ಸರಕಾರಗಳು ಯೋಚಿಸಬೇಕಿರುವುದು ಇಂದಿನ ಆರ್ಥಿಕ ದುಸ್ಥಿಿತಿಯ ಬಗ್ಗೆೆಯಲ್ಲ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಇಂದಿನ ಅಗತ್ಯ ದೇಶದ ಜನರ ಆರೋಗ್ಯವೇ ಹೊರತು, ದೇಶದ ಆರ್ಥಿಕತೆ, ಜಿಡಿಪಿ ಅಲ್ಲವೇ ಅಲ್ಲ. ಆರ್ಥಿಕತೆಯನ್ನು ಉಳಿಸಿಕೊಳ್ಳುವುದಕ್ಕೆೆ ಲಾಕ್‌ಡೌನ್ ಮಾಡದೇ, ಎಂದಿನಿಂತೆ ಜೀವನ ಸಾಗಿಸಿದ್ದರೆ ಭಾರತವು ಇಟಲಿ, ಅಮೆರಿಕವನ್ನೂ ಮೀರಿಸುತ್ತಿತ್ತು. ಭಾರತದ ಜನಸಂಖ್ಯೆೆ ಶೇ.1ರಷ್ಟು ಜನರಿಗೆ ಈ ಕರೋನಾ ಹಬ್ಬಿದರೂ ಆಗಬಹುದಾದ ಅನಾಹುತವನ್ನು ಒಮ್ಮೆೆ ಯೋಚಿಸಿದೆ. ಭವಿಷ್ಯವನ್ನು ನೋಡಲು ನಾವೇ ಇಲ್ಲದಿದ್ದರೆ ಯಾವ ಭವಿಷ್ಯ? ಆದ್ದರಿಂದ ಆರ್ಥಿಕತೆ, ಜಿಡಿಪಿ ಎನ್ನುವುದನ್ನು ಪಕ್ಕಕ್ಕಿಟ್ಟು, ನಮ್ಮ ಆರೋಗ್ಯದ ಬಗ್ಗೆೆ ಕಾಳಜಿವಹಿಸಬೇಕಿದೆ. ಕೂಲಿ ಕಾರ್ಮಿಕರಿಗೆ, ಊಟ ಸಿಗದವರಿಗೆ ಅಗತ್ಯ ವ್ಯವಸ್ಥೆೆಯನ್ನು ಸರಕಾರಗಳು ಮಾಡಲಿ. ಇನ್ನುಳಿದವರು ನಿಮ್ಮ ಲಾಕ್‌ಡೌನ್ ಅವಧಿಯನ್ನು ಮನೆಯಲ್ಲಿ ಉಳಿಯುವ ಮೂಲಕ, ಸರಕಾರದ ಮಹತ್ವದ ನಿರ್ಧಾರವನ್ನು ಬೆಂಬಲಿಸಬೇಕಿದೆ. ಆದ್ದರಿಂದ *ಖಠಿ ಟಞಛಿ, ಠಿ ್ಛಛಿ ಇನ್ನುಳಿದದ್ದು ನಂತರ.
ಆದ್ದರಿಂದ ಈಗಾಗಲೇ ಭಾರತದ ಮನೆಯೊಳಗೆ ಬಂದಿರುವ ಕರೋನಾವನ್ನು ಓಡಿಸುವ ಜವಾಬ್ದಾಾರಿ ಕೇವಲ ಸರಕಾರದ ಮೇಲಿಲ್ಲ. ಬದಲಿಗೆ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಲಾಕ್‌ಡೌನ್ ಇದ್ದರೂ, ಭವಿಷ್ಯ, ಆರ್ಥಿಕ ಮುಗ್ಗಟ್ಟು ಎನ್ನುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಜೀವ ಉಳಿಸಿಕೊಳ್ಳುವತ್ತ ಗಮನಹರಿಸಬೇಕಿದೆ. ನಮ್ಮೊಬ್ಬರ ನಿರ್ಲಕ್ಷ್ಯದಿಂದ ಇಡೀ ದೇಶಕ್ಕೆ ಇನ್ನಷ್ಟು ಸಮಸ್ಯೆ ಆಗುವಂತಾಗಬಾರದು. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲರೂ ಮನೆಯಲ್ಲಿಯೇ ಉಳಿದುಕೊಂಡರೆ, ದೇಶಕ್ಕೆ ನೀಡುವ ಅತಿದೊಡ್ಡ ಕೊಡುಗೆಯಾಗುತ್ತದೆ.