ದೂರಿನ ಸ್ಕ್ರೀನ್ಶಾಟ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ, ‘ಕುಡಿದ ಸ್ಥಿತಿಯಲ್ಲಿ ಗುರುದ್ವಾರ ದಮ್ದಮಾ ಸಾಹಿಬ್ ಪ್ರವೇಶಿಸಿದ್ದಕ್ಕಾಗಿ ಪಂಜಾಬ್ ಸಿಎಂ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ನನ್ನ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ.
ಪಂಜಾಬ್ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಭಗವಂತ್ ಸಿಂಗ್ ಮಾನ್ ಅವರು ಏಪ್ರಿಲ್ 14 ರಂದು ದೇಶಾದ್ಯಂತ ಆಚರಿಸಲಾದ ಬೈಸಾಖಿಯ ಸಂದರ್ಭದಲ್ಲಿ ತಖ್ತ್ ದಮ್ದಾಮಾ ಸಾಹಿಬ್ ಅನ್ನು ಕುಡಿದ ಮತ್ತಿನಲ್ಲಿ ಪ್ರವೇಶಿಸಿ ದ್ದಾರೆ ಎಂದು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (ಎಸ್ಜಿಪಿಸಿ) ಶುಕ್ರವಾರ ಆರೋಪಿಸಿದೆ.
ಇದಕ್ಕಾಗಿ ಪಂಜಾಬ್ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಎಂದು ಸಮಿತಿಯು ಒತ್ತಾಯಿಸಿತ್ತು.