Sunday, 15th December 2024

ಚೀನಾ ಬೆಳೆಯಲು ಭಾರತದ ನಿರ್ಲಿಪ್ತತೆಯೂ ಕಾರಣ

ಜನಾರ್ದನ ಸ್ವಾಮಿ, ಲೋಕಸಭೆ ಮಾಜಿ ಸದಸ್ಯ

ಭಾರತ ತನ್ನ ಮೈಕೊಡವಿ ನಿಲ್ಲಬೇಕು. ಆಲಸ್ಯಂ ಅಮೃತಂ ವಿಷಂ ಎಂಬ ಮಾತಿನಂತೆ ಅಲಕ್ಷ್ಯ ಮಾಡಿದರೆ ಅಮೃತವೂ ವಿಷವಾಗುತ್ತದೆ. ಭಾರತ ದೇಶದಲ್ಲಿ ನಂಬಿಕೆ ಇಟ್ಟಿರುವ 140 ಕೋಟಿ ಜನರಿದ್ದಾರೆ. ಅವರಿಗೆಲ್ಲ ಉತ್ತಮ ಭವಿಷ್ಯ ಕಟ್ಟಿಕೊಡಬೇಕಾದ ಅನಿವಾರ್ಯತೆಯಿದೆ.

ಚೀನಾವಿಲ್ಲದಿದ್ದರೆ ಪ್ರಪಂಚಕ್ಕೆ ದಿಕ್ಕೇ ತೋಚುವುದಿಲ್ಲ. ಜಪಾನ್ ಪ್ರಪಂಚದ ಸುಮಾರು ಶೇ.7ರಷ್ಟು ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದರೆ, ಜರ್ಮನಿ 6ರಷ್ಟು ತಯಾರಿಸುತ್ತಿದೆ. ದೊಡ್ಡಣ್ಣ ಎನಿಸಿಕೊಂಡ ಅಮೆರಿಕ 17ರಷ್ಟು. ಆದರೆ ಚೀನಾದ ಪಾಲು 28ರಷ್ಟು. ಕೇವಲ 3ರಷ್ಟು ಮಾತ್ರ ತಯಾರಿಕಾ ವಲಯದಲ್ಲಿ ಪಾಲನ್ನು ಹೊಂದಿರುವ ಭಾರತವೂ ತನ್ನ ಬದುಕಿಗೆ ತನ್ನ ವೈರಿಯನ್ನೇ ಅವಲಂಬಿಸಿರುವುದು ವಿಪರ್ಯಾಸ.

ಭಾರತಕ್ಕೆ ಯಾಕೆ ಇದು ಕಣ್ಣಿಗೆ ಕಾಣಿಸುತ್ತಿಲ್ಲ?
ಪ್ರಪಂಚ ಚೀನಾ ವಸ್ತುಗಳನ್ನು ತಿರಸ್ಕರಿಸುತ್ತಿದೆ. ಅದರಲ್ಲೂ ವೈದ್ಯಕೀಯ ವಸ್ತುಗಳನ್ನು. ಬಿಬಿಸಿಯ ಮಾರ್ಚ್ 30, 2020ರ ವರದಿಯ ಪ್ರಕಾರ ಕರೋನಾ ತಡೆಗೆ ಬಳಸಲಾಗುವ ಅನೇಕ ವಸ್ತುಗಳನ್ನು ಪರೀಕ್ಷಿಸಿದಾಗ ಚೀನಾದಲ್ಲಿ ತಯಾರಾದ ವಸ್ತುಗಳು ಅತ್ಯಂತ ಕಳಪೆ ಗುಣಮಟ್ಟದವೆಂದು ಕಂಡುಬಂದಿದ್ದರಿಂದ ಯುರೋಪ್ ರಾಷ್ಟ್ರಗಳು ಅವನ್ನು ತಿರಸ್ಕರಿಸುತ್ತಿವೆ. ಅನೇಕ ಟೆಸ್‌ಟ್‌ ಕಿಟ್‌ಗಳು, ಅಂದರೆ ಕರೋನಾ ಇದೆಯೋ ಇಲ್ಲವೋ ಎಂದು ಪರೀಕ್ಷೆ ಮಾಡಿ ತಿಳಿಸುವ ವ್ಯವಸ್ಥೆಗಳು, ಸರಿಯಾಗಿ ಕೆಲಸ ಮಾಡಲಿಲ್ಲವೆಂದು ಲಕ್ಷಾಂತರ ಮಾಸ್‌ಕ್‌‌ಗಳೂ ಸರಿಯಾಗಿ ಕೆಲಸ ಮಾಡಲಿಲ್ಲವೆಂದು ಸ್ಪೈನ್, ನೆದರ್‌ಲ್ಯಾಾಂಡ್ ಹೀಗೆ ಇತರೆ ದೇಶಗಳು ವರದಿ ಮಾಡಿವೆ.

ಭಾರತಕ್ಕೆ ಯಾಕೆ ಇದು ಕಣ್ಣಿಗೆ ಕಾಣಿಸುತ್ತಿಲ್ಲ? 1962ರಲ್ಲೇ ಭಾರತ ಮತ್ತು ಚೀನಾ ಮಧ್ಯೆ ಯುದ್ಧವೇ ನಡೆದು ಹೋಗಿದೆ. ಅನೇಕ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಚೀನಾ ಎಂದೂ ಭಾರತದ ಮಿತ್ರ ರಾಷ್ಟ್ರವಾಗುವ ಯಾವುದೇ ಲಕ್ಷಣಗಳು ಇದುವರೆಗೆ ಕಂಡುಬಂದಿಲ್ಲದಿರುವುದರಿಂದ ಯಾಕೆ ಭಾರತ ಇನ್ನೂ ಚೀನಾವನ್ನು ಅವಲಂಬಿಸಬೇಕು? ಅಮೆರಿಕಕ್ಕಂತೂ ಚೀನಾ ಇದುವರೆಗೆ ಅನಿವಾರ್ಯವಾಗಿದ್ದಿರಬಹುದು. ಆ ಸಂಬಂಧವೂ ಕೂಡ ಬಹುತೇಕ ವ್ಯವಹಾರಿಕ ಸಂಬಂಧಕ್ಕಷ್ಟೇ ಸೀಮಿತ. ಆದರೆ ಚೀನಾ ಬಿಟ್ಟರೆ ಅಮೆರಿಕಕ್ಕೆ ಇನ್ನೊೊಂದು ಆಯ್ಕೆ ಸಿಗಲಿಲ್ಲ. ಅನೇಕ ಬಾರಿ ಇದು ಅಮೆರಿಕಕ್ಕೆ ಆತಂಕಕಾರಿ ವಿಷಯವಾದರೂ ಇನ್ನೊೊಂದು ದೇಶ ಚೀನಾಕ್ಕೆ ಪರ್ಯಾಯವಾಗಿ ಬರಲೆಂದು ಬಯಸುತ್ತಿದ್ದರೂ ಭಾರತ ಈ ಅವಕಾಶವನ್ನು 80ರ ದಶಕದಿಂದಲೂ ಸುಮ್ಮನೆ ದೂರ ನಿಂತು ಮೂಕ ಪ್ರೇಕ್ಷಕನಾಗಿ ನೋಡುತ್ತಿದೆಯಾದರೂ, ಹೌದು ತಾನೇ ಏಕೆ ಪ್ರಪಂಚಕ್ಕೆ ಬೇಕಾಗಿರುವ ವಸ್ತುಗಳನ್ನು ತಯಾರು ಮಾಡಬಾರದು ಅಂತ ಪ್ರಯತ್ನಿಸಲೇ ಇಲ್ಲ. ಹಾಗೆ ಮಾಡಿದ್ದರೆ ಇಂದು ಎಷ್ಟೊೊಂದು ವಿದೇಶಿ ವಿನಿಮಯ ಭಾರತದ್ದಾಗುತ್ತಿತ್ತು. ಎಷ್ಟೊೊಂದು ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿತ್ತು. ದೇಶ ಇಂದು ಸಣ್ಣ ಸಣ್ಣ ವಸ್ತುಗಳಿಗೂ ಚೀನಾವನ್ನು ಅವಲಂಬಿಸುವ ಪರಿಸ್ಥಿತಿ ಬರುತ್ತಲೇ ಇರಲಿಲ್ಲ. ಅಮೆರಿಕಕ್ಕೆ ಆಗಲಿ ಜಗತ್ತಿನ ಯಾವುದೇ ರಾಷ್ಟ್ರಗಳಿಗಾಗಲೀ ವಸ್ತುಗಳು ಗುಣಮಟ್ಟವಾಗಿದ್ದು ಕಡಿಮೆ ದರದಲ್ಲಿ ಸಿಗುವುದಷ್ಟೇ ಸಾಕಿತ್ತು. ಅದು ಚೀನಾದಾದರೇನು ಅಥವಾ ಭಾರತದದ್ದಾದರೇನು? ಹೋಗಲಿ ಚೀನಾದಂತೆ ಶೇಕಡ 28ರಷ್ಟು ಆಗದಿದ್ದರೇನು? ಕನಿಷ್ಠ ಶೇ.15 ಅಥವಾ 20ರಷ್ಟಕ್ಕಾದರೂ ಪ್ರಯತ್ನಿಸಿದ್ದರೆ ಇವತ್ತಿನ ಪರಿಸ್ಥಿತಿ ಶೇ.3ರ ಪಾಲಿಗಿಂತ ಎಷ್ಟೋ ಉತ್ತಮವಾಗಿರುತ್ತಿತ್ತಲ್ಲವೆ?

ಭಾರತ ತನ್ನ ಮೈಕೊಡವಿ ನಿಲ್ಲಬೇಕು. ಆಲಸ್ಯಂ ಅಮೃತಂ ವಿಷಂ ಎಂಬ ಮಾತಿನಂತೆ ಅಲಕ್ಷ್ಯ ಮಾಡಿದರೆ ಅಮೃತವೂ ವಿಷವಾಗುತ್ತದೆ. ಭಾರತ ದೇಶದಲ್ಲಿ ನಂಬಿಕೆ ಇಟ್ಟಿರುವ 140 ಕೋಟಿ ಜನರಿದ್ದಾರೆ. ಅವರಿಗೆಲ್ಲ ಉತ್ತಮ ಭವಿಷ್ಯ ಕಟ್ಟಿಕೊಡಬೇಕಾದ ಅನಿವಾರ್ಯತೆಯಿದೆ. ಅವರನ್ನು ಇನ್ನೊೊಂದು ದೇಶದ ಮೇಲೆ ಅವಲಂಬಿಸುವ ಪರಾವಲಂಬಿಗಳನ್ನಾಗಿ ಮಾಡದಿರುವುದು ಆಗಬೇಕಿದೆ. ಹೌದು, ಯಾವ ದೇಶವೂ ಪ್ರಪಂಚದಿಂದ ದೂರವಾಗಿ ತಾನೊಬ್ಬನೇ ಬದುಕುವಂತಿಲ್ಲ. ಆದರೆ ಚಿಕ್ಕ ಪುಟ್ಟ ವಿಷಯಗಳಿಗೂ ಬೇರೆ ದೇಶಗಳನ್ನು ಅವಲಂಬಿಸುವ ಬದುಕು ಒಳ್ಳೆಯದಲ್ಲ. ಅದೂ ನಮ್ಮ ಶತ್ರು ರಾಷ್ಟ್ರವನ್ನು ನಾವು ಅವಲಂಬಿಸುವುದು ಖಂಡಿತಾ ಒಳ್ಳೆಯದಲ್ಲ. ಇಲ್ಲವಾದರೆ ತನ್ನ ಸಾರ್ವಭೌಮತ್ವದ ಅರ್ಥವಾದರೂ ಏನು?
ಇವತ್ತಿನ ಈ ಸಂದರ್ಭದಲ್ಲಿ ಮಾಸ್‌ಕ್‌ ಮಾಡುವವರನ್ನು, ವೆಂಟಿಲೇಟರ್ ಮಾಡುವವರನ್ನು ಭಾರತ ಹುಡುಕುತ್ತಿದೆ. ಇದರಲ್ಲಿ ತಪ್ಪೇನೂ ಇಲ್ಲ. ಮಾಡಬೇಕಾದ್ದೂ ಕೂಡ. ಆದರೆ ಮುಂದೆ ಹೀಗೆ ಗಡ್ಡಕ್ಕೆ ಬೆಂಕಿ ಬಿದ್ದಾಗ ಗುಡ್ಡದಲ್ಲಿ ಬಾವಿ ತೋಡಿದ ಹಾಗೆ ಆಗದಿರಲಿ ಎಂಬುದಷ್ಟೇ ಆಶಯ.

ಹೌದು, ಎಷ್ಟೂ ಅಂತ ಸಿದ್ಧರಾಗಿರಲು ಸಾಧ್ಯ? ಸರಿಯಿದೆ, ಎಲ್ಲದಕ್ಕೂ ಮೊದಲೇ ತಯಾರಿ ಮಾಡಿಕೊಂಡಿರಲಿಕ್ಕೆ ಯಾರಿಗೂ ಸಾಧ್ಯವಿಲ್ಲ. ಆದರೆ ಕಾಡಲ್ಲಿರಬೇಕಾದರೆ ಹುಲಿ, ಸಿಂಹ, ಕರಡಿ, ಚಿರತೆಗಳು ಸಹಜ. ಅದಕ್ಕೆ ಮನುಷ್ಯ ಸಹಜ ತಯಾರಿಯನ್ನು ಮಾಡಿಕೊಳ್ಳಬೇಕಾಗುತ್ತೆೆ. ಆ ತಯಾರಿ ಮಾತ್ರ ನಮ್ಮನ್ನು ಕಾಪಾಡಬಲ್ಲದು. ಕರೋನಾ ವೈರಸ್ ನೈಸರ್ಗಿಕವಾದದ್ದೇ ಅಥವಾ ಕೃತಕವಾಗಿ ತಯಾರು ಮಾಡಿದ್ದೋ ಎಂಬುದಕ್ಕೆ ಹಲವು ಅಭಿಪ್ರಾಯಗಳಿವೆ. ಒಂದು ವೇಳೆ ಅದು ಬಾವಲಿಯಿಂದಲೋ ಅಥವಾ ಇನ್ಯಾವುದೋ ಪ್ರಾಣಿಯಿಂದಲೋ ಬಂದಿದೆ ಅಂತ ಅಂದುಕೊಂಡರೂ ಇಂದು ವೈರಸ್ಸುಗಳನ್ನು ಕೃತಕವಾಗಿ ನಿರ್ಮಿಸಲಿಕ್ಕೆ ಮನುಷ್ಯನಿಗೆ ಅಸಾಧ್ಯವೇನಲ್ಲ. ಕಾಲರಾ, ಪ್ಲೇಗ್, ಸಿಡುಬು, ದಡಾರ, ರೇಬೀಸ್, ಪೋಲಿಯೋ, ಹೀಗೆ ಅನೇಕಾನೇಕ ಭಯಾನಕ ರೋಗಗಳನ್ನು ಇತಿಹಾಸವನ್ನು ಕಂಡಿದೆ ಭಾರತ. ನೂರಾರು ಕೋಟಿ ಜನ ಈ ಸಾಂಕ್ರಾಮಿಕ ರೋಗಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಏನೋ ನಮ್ಮ ಪುಣ್ಯ, ನಾವು ನೀವು ಇಲ್ಲಿರುವುದಕ್ಕೆ ಕಾರಣವೇನೆಂದರೆ ನಮ್ಮ ನಿಮ್ಮ ತಾತ, ಮುತ್ತಾತ, ಅವರ ತಾತ ಅಥವಾ ನಮ್ಮ ನಿಮ್ಮ ಅಜ್ಜಿ, ಮುತ್ತಜ್ಜಿ, ಅವರಜ್ಜಿಗಳು ಹೇಗೋ ಇಂತಹ ಅಪಾರವಾದ ಸಾವು- ನೋವುಗಳಿಂದ ಬದುಕುಳಿದಿರುವುದು. ಹಾಗಂತ ಈ ವಿಷಯಗಳನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಕೆಲವೊಮ್ಮೆ ದೇಶ ದೇಶಗಳೇ ಸಂಪೂರ್ಣವಾಗಿ ಅಳಿಸಿ ಹೋಗಬಹುದು. ಆ ತರಹದ ವೈರಸ್‌ಗಳನ್ನು ಇಂದು ಮನುಷ್ಯ ತಾನೇ ತಯಾರು ಮಾಡಿ ಇತರರ ಮೇಲೆ ಅಥವಾ ಇನ್ನೊೊಂದು ದೇಶದ ಮೇಲೆ ಪ್ರಯೋಗಿಸಬಹುದು.

ಅನೇಕ ಭಯಾನಕ ಕಾಯಿಲೆಗಳು ಭೂಮಿಯಿಂದ ಸಂಪೂರ್ಣವಾಗಿ ನಶಿಸಿ ಹೋಗಿದ್ದರೂ, ಅನೇಕ ದೇಶಗಳು ಆ ಸೂಕ್ಷ್ಮಾಣುಗಳ ಸ್ಯಾಾಂಪಲ್ಲುಗಳನ್ನು ಹಾಗೇ ಕಾಯ್ದಿರಿಸಿಕೊಂಡಿವೆ. ರಷ್ಯಾ, ಅಮೆರಿಕ, ಜಪಾನ್, ದಕ್ಷಿಣ ಆಫ್ರಿಕಾ, ಲಿಬಿಯ, ಚೀನಾ, ಕ್ಯೂಬಾ, ಈಜಿಪ್‌ಟ್‌, ಉತ್ತರ ಕೋರಿಯ, ಸಿರಿಯಾ, ತೈವಾನ್, ಅಲ್ಜೇರಿಯ, ಪ್ರಾನ್‌ಸ್‌, ಇರಾನ್, ಇರಾಕ್, ಇಸ್ರೇಲ್, ಯುಕೆ, ಹೀಗೆ ಹಲವಾರು ದೇಶಗಳು ವೈರಸ್ಸು ಅಥವಾ ಇತರೆ ಸೂಕ್ಷ್ಮಜೀವಿಗಳನ್ನು ಬಳಸುವ ಅಥವಾ ಹರಿಬಿಡುವ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದವು ಅಥವಾ ತೊಡಗಿಸಿಕೊಂಡಿವೆ. ಕೆಲವೇ ಕೆಲವು ದೇಶಗಳು ಹೀಗೆ ಮಾಡುವುದು ಬೇಡ ಎಂದು ಕೆಲವು ಒಪ್ಪಂದಗಳಿಗೆ ಸಹಿ ಹಾಕಿದ್ದರೂ ಎಲ್ಲರಿಗೂ ಮತ್ತೊಬ್ಬರ ಮೇಲೆ ಅನುಮಾನ ಇದ್ದೇ ಇದೆ.

ಬರೀ ಈ ಭಯಾನಕ ಕಾಯಿಲೆಗಳ ವೈರಸ್ಸು ಅಥವಾ ಸೂಕ್ಷ್ಮಾಣುಗಳನ್ನು ಶೇಖರಿಸಿಟ್ಟುಕೊಂಡಿಲ್ಲ. ಸಂಶೋಧನೆ ಮತ್ತು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ತಯಾರಿಗಳ ನೆಪದಲ್ಲಿ ಅವುಗಳನ್ನು ತಮಗೆ ಬೇಕಾದ ಹಾಗೆ ಬದಲಾಯಿಸುವ ಶಕ್ತಿಯನ್ನೂ ಗಳಿಸಿಕೊಂಡಿದ್ದಾರೆ. ಹೇಗೆ ನಮ್ಮ ವಿಜ್ಞಾನಿಗಳು ಅನೇಕ ಹೈಬ್ರಿಡ್ ತಳಿಗಳನ್ನು ಮತ್ತು ಕುಲಾಂತರಿ ತಳಿಗಳನ್ನು ರೂಪಿಸಿದರೋ, ಹಾಗೆ ಒಂದು ವೈರಸ್ಸು ಹೇಗೆ ಕೆಲಸ ಮಾಡಬೇಕೆಂದು ಇಂದು ವಿಜ್ಞಾನಿಗಳು ನಿರ್ಧರಿಸಬಹುದು ಮತ್ತು ಆ ರೀತಿಯ ವೈರಸ್‌ಗಳನ್ನು ತಯಾರೂ ಮಾಡಬಹುದು. ಈ ರೀತಿಯ ಕಸ್ಟಮೈಸ್ ಮಾಡಿದ ವೈರಸ್ಸುಗಳಿಂದ ಒಂದು ತೆರನಾದ ಜನರು ಮಾತ್ರ ತೊಂದರೆಗೊಳಪಡುವಂತೆ ಮಾಡಬಹುದು. ಅಥವಾ ಅದು ಹೇಗೆ ಹರಡಬೇಕು, ಅದರ ಪರಿಣಾಮಗಳೇನಾಗಿರಬೇಕು, ಎಷ್ಟು ಅವಧಿಯವರೆಗೆ ಅದು ಸಾಂಕ್ರಾಮಿಕವಾಗಿರಬೇಕು, ಅದಕ್ಕೆ ಪರಿಹಾರ ಏನಾಗಿರಬೇಕು, ಹೀಗೆ ಹಲವು ವಿಷಯಗಳನ್ನು ಆ ವೈರಸ್ಸಿನಲ್ಲಿ ವಿಜ್ಞಾನಿಗಳು ನಿರ್ಧರಿಸಬಹುದು.

ಒಂದಂತೂ ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೇನೆಂದರೆ, ಯಾರು ಏನು ಮಾಡುತ್ತಾರೆ ಎನ್ನುವುದಕ್ಕಿಿಂತ ನಾವು ನಮ್ಮ ರಕ್ಷಣೆಗೆ ಏನು ಮಾಡಬೇಕು ಎಂದು ಯೋಚಿಸಬೇಕಿದೆ. ಇದು ಒಂದೆರಡು ದಿನಗಳ ಬದುಕಲ್ಲ. ನಮ್ಮ ನಂತರವೂ ಭಾರತದಲ್ಲಿ ನಮ್ಮವರಿರುತ್ತಾರೆ. ಅವರಿಗಾಗಿ ನಾವು ಇಂದು ಎಚ್ಚರಗೊಳ್ಳಬೇಕಿದೆ. ಇವತ್ತಿನದಷ್ಟೇ ಯೋಚಿಸಿ ಮತ್ತೆ ನಾವು ಆರಾಮಾಗಿ ಮೆರೆಯುವಂತೆ ಆಗದಿರಲಿ. ಏಕೆಂದರೆ ಮುಂದೆ ನೋಡೋಣ ಎಂದು ಅಲಕ್ಷ್ಯ ಮಾಡಿದರೆ ಆಗ ಅವಕಾಶಗಳು ಇಲ್ಲದಿರಬಹುದು. ಇವುಗಳಿಗೆಲ್ಲ ದುಡ್ಡು ಮಾಡಬೇಕೆಂಬ ಮನಸ್ಸುಗಳು ಬೇಕು. ಹಣಕಾಸು ಉತ್ತಮವಾಗಬೇಕಾದರೆ ಭಾರತ ಹೆಚ್ಚು ರಫ್ತು ಮಾಡುವ ಯೋಜನೆಗಳನ್ನು ರೂಪಿಸಿಕೊಳ್ಳಬೇಕಿದೆ. ಪ್ರತೀ ಪ್ರಜೆಯನ್ನು ಅವರ ಶಕ್ತ್ಯಾನುಸಾರ ಬಳಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಬೇಕು. ಏನೇ ಉತ್ಪಾದಿಸಬೇಕೆಂದರೆ ಜ್ಞಾನ ಮತ್ತು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತವೆ. ಆ ರೀತಿಯ ಕೆಲಸವಾಗಲು ಶಿಕ್ಷಣ ಕ್ಷೇತ್ರ ಪರಿಷ್ಕರಣೆಗೊಳಗಾಗಬೇಕು. ಇಂದಿನ ಈ ರೀತಿಯ ಶಿಕ್ಷಣ ನಮ್ಮನ್ನು ಅಲ್ಲಿಗೆ ಕೊಂಡೊಯ್ಯಲಾರದು. ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಳಾಗಬೇಕು. ಕೊನೆಯದಾಗಿ, ಉತ್ತಮ ಶಿಕ್ಷಣವೊಂದೇ ನಮ್ಮನ್ನು ಭವಿಷ್ಯದಲ್ಲಿ ಉಳಿಸಬಲ್ಲದು, ಉತ್ತಮ ಶಿಕ್ಷಣವೊಂದೇ ಭಾರತದ ಸಾರ್ವಭೌಮತ್ವವನ್ನು ಕಾಪಾಡಬಲ್ಲದು.