Sunday, 15th December 2024

ಅಘೋರಿಗಳದು ಅಧ್ಯಾತ್ಮಿಕ ದಾರಿಯಲ್ಲಿನ ವಿಭಿನ್ನ ನಡೆ

‘ವಿಶ್ವವಾಣಿ ಕ್ಲಬ್‌ಹೌಸ್’ ಶ್ರೋತೃಗಳನ್ನು ಘೋರಲೋಕದ ಸಂಚರಕ್ಕೊಯ್ದ ಸಂತೋಷ ಕುಮಾರ ಮೆಹೆಂದಳೆ

ವಿಶ್ವವಾಣಿ ಕ್ಲಬ್‌ಹೌಸ್: ಅಘೋರಿಗಳೆಂದರೆ ನಮ್ಮಂತೆಯೇ ಮನುಷ್ಯರು. ಎಲ್ಲರಂತಿದ್ದರೂ ಬದುಕಿನ ಶೈಲಿಯಲ್ಲಿ ವಿಭಿನ್ನ. ಜೀವನದಲ್ಲಿ ಏನನ್ನು ಬೇಜಕಾದರೂ ಸಾಧಿಸಬಹುದೆನ್ನುವ ಧನಾತ್ಮಕತೆಯನ್ನು ಅವರಲ್ಲಿ ಕಾಣ ಬಹುದು. ಅಘೋರ ಎಂದರೆ ಅಂಧಃಕಾರರಹಿತ, ನಿರ್ಭಯ. ಸಹ್ಯವಲ್ಲದ ಪರಿಸರದಲ್ಲಿಯೂ ಸಹ್ಯವಾಗಿರುವವನು ಎಂದು ಸಾಹಿತಿ ಸಂತೋಷ ಕುಮಾರ ಮೆಹೆಂದಳೆ ಹೇಳಿದ್ದಾರೆ.

ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಅರಿವಿನ ಉಪನ್ಯಾಸ ನೀಡಿ, ಅಘೋರಿಗಳೇಂದರೆ ಅವರ ಮಾಂಸ ಭಕ್ಷಣೆ, ನಗ್ನ ದೇಹ, ರಕ್ತಾಭಿಷೇಕ, ಶವ ಸಂಭೋಗ… ಹೀಗೆ ಕೆಲವು ವಿಚಿತ್ರ ಕಲ್ಪನೆಗಳು ಮನಸ್ಸಿಗೆ ಬರುತ್ತವೆ. ಸಾಮಾನ್ಯವಾಗಿ ಶಿವನ ವಾಸಸ್ಥಾನಗಳಲ್ಲಿ ಕಾಣುವ ಇವರಿಗೂ ನಮಗೂ ತೀರಾ ವ್ಯತ್ಯಾಸ ಕಾಣುವು ದಿಲ್ಲ ಎಂದು ಹೇಳಿದರು.

ಅಘೋರಿಗಳಲ್ಲೂ ವ್ಯತ್ಯಾಸ
ಆಘೋರಿ, ನಾಗಾಸಾಧುಗಳು, ನಗ್ನಮುನಿಗಳು, ದಿಗಂಬರ ನಾಗಾಗಳು, ಶೈವರು, ಸಿದ್ಧರು, ನಾಥಪಂಥಿಯರು ಹೀಗೆ ಅನೇಕ ಬಗೆಯ ಅಘೋರಿಗಳಿದ್ದು, ಅವರಲ್ಲಿನ ವಿಚಾರಗಳು, ಪದ್ಧತಿ, ಆಚರಣೆ ಎಲ್ಲವೂ ಬೇರೆಯೇ ಆಗಿರುತ್ತದೆ. ಆದರೆ, ಸಣ್ಣ ಪ್ರಮಾಣದಲ್ಲಿ ವ್ಯತ್ಯಾಸಗಳಿರುತ್ತದೆ. ಅನೇಕ ಕಡೆ ಕಾಣಿಸಿಕೊಳ್ಳುವ ಸಾಧುಗಳು ಕೇಸರೀ ಬಣ್ಣದ ಬಟ್ಟೆ ಸುತ್ತಿಕೊಂಡಿರುತ್ತಾರೆ. ಆದರೆ ಸಂಪೂರ್ಣ ಪ್ರಮಾಣದ ಅಘೋರಿಗಳಾಗಿರುವುದಿಲ್ಲ. ಸಂಪೂರ್ಣ ಪ್ರಮಾಣ ದಲ್ಲಿ ಅಘೋರಿಗಳಾದವರು ಕಪ್ಪು ಬಣ್ಣದ ಬಟ್ಟೆ ಧರಿಸಿರುತ್ತಾರೆ. ನಮ್ಮಲ್ಲಿ ಮಠಗಳಿದ್ದಂತೆ ಅವರಲ್ಲಿ ಅಖಾಡ ಗಳಿವೆ. ಇವರು ಮಾತನಾಡುವ ಜಾಯರೀ ಭಾಷೆ ನಮಗೆ ಅರ್ಥವಾಗದಿದ್ದರೂ ಮಾನಸಿಕವಾಗಿ ನಮ್ಮನನ್ನು ಆಕರ್ಷಿತಗೊಳಿಸುತ್ತದೆ.

ಸಾಧನೆ ಎನ್ನುವ ವಿಷಯದಲ್ಲಿ ಅವರು ತೆರೆದುಕೊಂಡ ರೀತಿಯನ್ನು ಪ್ರಶ್ನೆ ಮಾಡುವುದು ಕಷ್ಟ. ಅವರು ಮಾಡುವ ಸಾಧನೆಯಿಂದ ಸಮಾಜಕ್ಕೆ ಏನು ಉಪಯೋಗವೆಂದು ವಿಚಾರ ಮಾಡುವುದಕ್ಕಿಂತ ಅವರು ಪಾಲಿಸಿಕೊಂಡು ಹೋಗುವ ನಿರಂತರತೆ ಶ್ಲಾಘಿಸಬಹುದು. ಈ ಬಾಬಾಗಳು ಎಷ್ಟೇ ಗಾಂಜಾ ಸೇದಿದರೂ, ಹೆಣವನ್ನು ಹೊರತೆಗೆಗೆಯುತ್ತಿದ್ದರೂ ಯಾವುದೇ ಕಾರಣಕ್ಕೂ ಪೊಲೀಸ್ ಕೇಸ್ ಆಗುವುದಿಲ್ಲ. ಇದಕ್ಕೊಂದು ಕಥೆಯೇ ಇದೆ. ಸುಮಾರು ನೂರು ವರ್ಷಗಳ ಹಿಂದೆ ಘೋರಿಗಳು ಜೀವಂತ ಮಾನವ ಬಲಿಯನ್ನು ನೀಡುತ್ತಿದ್ದರು. ಆದರೆ ಸರಕಾರ ಇದನ್ನು ಮಾಡಬೇಡಿ ರೆಂದು ಪ್ರಾರ್ಥಿಸಿದ್ದರಿಂದ ಹೂತಿಟ್ಟ ಹೆಣವನ್ನು ಹೊರತೆಗೆದು ಪೂಜಿಸಲಾಗುತ್ತದೆ.

ಕುಂಡಲಿನಿ ಅಧ್ಯಾತ್ಮ
ಕುಂಡಲಿನಿಯ ಕುರಿತಾಗಿ ಮಾತನಾಡಿದ ಸಂತೋಷ್, ಅಧ್ಯಾತ್ಮಿಕ ದಾರಿಯನ್ನು ತೋರಿಸುವ ಬಗೆಯಿದು. ಈ ಸಿದ್ಧಿಯಿಂದ ಧನಾತ್ಮಕವಾದ ಶಕ್ತಿ
ನಿಮ್ಮದಾಗುತ್ತದೆ ಎನ್ನುವುದು ಸತ್ಯ. ಈ ಪ್ರಯೋಗಗಳಲ್ಲಿ ನಿರತವಾಗಿರುವ ಅಘೋರಿಗಳು ಯಾರೂ ವಾಮಮಾರ್ಗಿಗಳಲ್ಲ. ಆದರೆ ಬೆಂಗಳೂರಿನಲ್ಲಿಯೂ
ಏಳು ದಿನಗಳಲ್ಲಿ ಕುಂಡಲಿನಿ ಶಕ್ತಿ ಪಡೆಯಿರಿ ಎಂದು ಕೆಲವು ಕಡೆ ಬರೆದಿರುತ್ತದೆ. ಅದೊಂದು ಕಷ್ಟಕರಾವಾದ ವಿದ್ಯೆ. ಇಂತಹ ಬೋರ್ಡುಗಳು ನಗೆಪಾ ಟಲಿಗೆ ಎಡೆಮಾಡಿಕೊಡುತ್ತದೆ. ಜಗತ್ತಿನಲ್ಲಿರುವ ೬೭ ಭಾಷೆಗಳು ಮತ್ತು ಅದರಲ್ಲಿರುವ ಗ್ರಂಥ- ತಂತ್ರಗಳಲ್ಲಿ ಕುಂಡಲಿಯ ಪ್ರಸ್ತಾಪವಿದೆ ಎಂದು ಶ್ರೋತೃ ಗಳಿಗೆ ವಿವರಿಸಿದರು.ಶವ ಸಂಭೋಗದ ಮಾಹಿತಿ ಕುಂಡಲಿ ಜಾಗೃತಗೊಳಿಸಿಕೊಳ್ಳುವುದಕ್ಕೆ ಶವ ಸಂಭೋಗವೂ ಮುಖ್ಯಕಾರಣ.

೨೦೧೮-೧೯ರಲ್ಲಿ ಪ್ರಯಾಗದಲ್ಲಿ ಈ ಶವಸಂಭೋಗವನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿತ್ತು. ಅದು ವಾರಣಾಸಿಯ ತಂಬೂರಾ ಎನ್ನುವ ಹಳ್ಳಿ. ಈ ಕ್ರಿಯೆಗಳನ್ನು ನೋಡುವುದಕ್ಕೆ ನನಗೊಬ್ಬ ದ್ವಿಚಾರಿ ಸಹಾಯಕನಿದ್ದ. ದ್ವಿಚಾರಿಗಳು ಒಂದಿಷ್ಟು ಕಾಲ ಅಘೋರಿ ಮತ್ತು ಕೆಲ ಕಾಲ ಸಂಸಾರಸ್ಥ ರಾಗಿರುತ್ತಾರೆ.

ಆತ ಕರೆದುಕೊಂಡು ಹೋಗಿದ್ದ ಜಾಗ ಸಂಪೂರ್ಣ ಬೂದಿಯಿಂದ ತುಂಬಿತ್ತು. ಒಳಗೊಂದು ಕಟ್ಟೆಯ ಮೇಲೆ ಒಂದಿಷ್ಟು ತಲೆಬುರುಡೆ, ಏನೇನೋ ದ್ರವ
ಕಾಣುತ್ತಿತ್ತು. ಅಲ್ಲಿ ಬಂದವರನ್ನು ಸಂಪೂರ್ಣವಾಗಿ ಪರಿಶೀಲಿಸಿ ಒಳಗೆ ಬಿಡುತ್ತಿದ್ದರು. ಒಳಗಿನ ಕಟ್ಟೆಯ ಮೇಲೊಂದು ಹೆಂಗಸಿನ ಶವವಿದ್ದು, ಅದರ ಸುತ್ತ ಎಲ್ಲರೂ ಬೆತ್ತಲೆಯಾಗಿ ನಿಂತಿದ್ದರು. ಕೆಲವು ವಾದ್ಯಗಳನ್ನು ಬಾರಿಸುತ್ತ ಗಾಂಜಾ ಸೇದುತ್ತಿದ್ದರು. ಆ ಸಮಯಕ್ಕೆ ನಾಯಕನೊಬ್ಬ ಬಂದು ನಿಲ್ಲು ತ್ತಿದ್ದಂತೆ ಅಲ್ಲಿದ್ದವರೆಲ್ಲರೂ ಆತನ ಮರ್ಮಾಂಗವನ್ನು ಮುಟ್ಟಿ ನಮಸ್ಕರಿಸುತ್ತಿದ್ದರು. ಹೆಣಕ್ಕೆ ಮಂತ್ರಾಭಿಷೇಕ ಮಾಡಿ ಶುದ್ಧ ಮಾಡಿ ಶವದ ಕಾಲನ್ನು ಅಗಲಿಸಿ ಅದರ ಮಧ್ಯೆ ಕುಳಿತುಕೊಂಡು ಒಬ್ಬರಾದ ಮೇಲೆ ಒಬ್ಬರು ಸಂಭೋಗ ಮಾಡುತ್ತಾರೆ. ಅಲ್ಲಿ ರಕ್ತಾಭಿಷೇಕವೂ ನಡೆದಿರುತ್ತದೆ ಎಂಬ ಸೂಕ್ಷ್ಮ ವಿಚಾರವನ್ನೂ ಸಂತೋಷ್, ಶ್ರೋತೃಗಳಿಗೆ ತಿಳಿಸಿದರು.

ನಂತರದ ಭೀಕರತೆ
ಸಂಭೋಗದ ನಂತರ ಆ ಶವವನ್ನು ಬಲಿಗಾಗಿ ಬಳಸಿತ್ತಾರೆ. ನಂತರ ಮರ್ಮಾಂಗವನ್ನು ಮಚ್ಚಿನಿಂದ ತುಂಡರಿಸಿ ಬೆಂಕಿಗೆ ಹಾಕಿ, ಬಳಿಕ ಆ ಹೆಣವನ್ನು
ಸುಡುತ್ತಾರೆ. ಆಗಲೂ ಮಂತ್ರ ಪಠಣ ನಡೆಯುತ್ತಲೇ ಇರುತ್ತದೆ. ಅರ್ಧ ಸುಟ್ಟ ದೇಹವನ್ನು ಕೊಡಲಿಯಿಂದ ಹೊಡೆದು ಮಾಂಸ ಭಕ್ಷಣೆ ಮಾಡಲಾಗುತ್ತದೆ ಎಂದು ಹೇಳಿದರು.

ಮಾನವ ಕಲ್ಯಾಣಕ್ಕಾಗಿ ಹೆಣದ ಪೂಜೆ
ಇವಳ ಕೈಯಲ್ಲೊಂದು ಕೊಡಲಿಯಿತ್ತು. ಎತ್ತರದ ಗೋಡೆಯ ಮೇಲೆ ಹೆಣವಿತ್ತು. ಎಲ್ಲ ಪೂಜೆಯ ಸಾಮಗ್ರಿಗಳ ಜತೆ ಒಂದಿಷ್ಟು ಸಾರಾಯಿ, ದಾಸವಾಳದ ಹೂವು, ಬೆಂಕಿ, ಮಣ್ಣಿನಿಂದ ತೆಗೆದ ಶುದ್ಧವಾದ ಹೆಣ. ಆ ಹೆಣಕ್ಕೆ ಜೀವವಿರುವವರಿಗೆ ಮಾಡುವಂತೆಯೇ ಶೃಂಗಾರ ಮಾಡಿ, ಮಂತ್ರ ಹೇಳಿ ಕೊಡಲಿಯಿಂದ ನೆಲದ ಮೇಲೆ ಗೆರೆ ಹಾಕುವ ಸಂಸ್ಕಾರ ನಡೆಯುತ್ತಿತ್ತು. ಸಂಜೆ ಆರು ಗಂಟೆಗೆ ಅವಳು ಹೆಣದ ಮೇಲೆ ಕುಳಿತು ಹೆಣದ ಕಿವಿಯಲ್ಲಿ ಮಂತ್ರ ಹೇಳುತ್ತಿದ್ದಳು.

ನಂತರ ಅಲ್ಲಿ ಬಂದವರಿಗೆ ಭಸ್ಮ ನೀಡುತ್ತಿದ್ದಳು. ಆ ವಿಧಾನವನ್ನು ಲೇಖಕರು, ‘ಈ ರೀತಿ ಮಾಡುವುದರಿಂದ ಸಾಧನೆಯಾಗುತ್ತ?’ ಎಂದು ಕೇಳಿದ್ದಕ್ಕೆ, ಆ ಮಹಿಳೆ, ಶವಸಂಸ್ಕರಣೆ ಸಾಧನೆಯಂತೂ ಅಲ್ಲ. ನಾವು ಮಾನವ ಕಲ್ಯಾಣಕ್ಕಾಗಿ ಮಾಡುವ ಅಧ್ಯಾತ್ಮಿಕ ಕಾರ್ಯಾಚರಣೆ. ಸತ್ತ ೪೮ ಗಂಟೆಗಳ ಕಾಲ ಆತ್ಮ ಇಲ್ಲೇ ಇದ್ದು ನಂತರ ಪರಲೋಕಕ್ಕೆ ಹೋಗುತ್ತದೆ. ನಾವು ಹೆಣದ ಕಿವಿಯಲ್ಲಿ ಅನೇಕ ವಿಚಾರಗಳನ್ನು ಮೇಲಿನ ಲೋಕಕ್ಕೆ ತಲುಪಲೆಂದು ಹೇಳುತ್ತೇವೆ ಎಂದು ಹೇಳಿದ್ದಳಂತೆ.

ಅಘೋರಿಗಳ ಭಸ್ಮಧಾರಣೆ
ವಾರಾಣಸಿಯಿಂದ ಪ್ರಯಾಗದವರೆಗೆ ಸಿಗುವ ಅಘೋರಿಗಳು ಚಿತಾಭಸ್ಮವನ್ನೇ ಧರಿಸುತ್ತಾರೆ. ಕಾಶಿಯ ದಂಡೆಗಳ ಮೇಲೆ ಉಚಿತವಾಗಿ ಹೆಣ ಸುಟ್ಟು ತಲೆ ಬಿರಿಯುವ ಮೊದಲು ಅದನ್ನು ತೆಗದುಕೊಂಡು ಸ್ವಚ್ಛಗೊಳಿಸಿ, ಹೆಣದ ಮೇಲಿನ ಚರ್ಮದಿಂದ ಬಿಳಿ ಬಣ್ಣದ ಬೂದಿಯನ್ನು ತೆಗೆದಿರುತ್ತಾರೆ. ನಂತರ ಸ್ನಾನ ಮಾಡಿ ಆ ಬೂದಿಯನ್ನು ಇಡೀ ಮೈಗೆ ಹಚ್ಚಿಕೊಳ್ಳುತ್ತಾರೆ. ದೇಹವನ್ನು ಕೊಡವುತ್ತ ಮತ್ತೆ ಬೂದಿಯನ್ನು ಪೂಜಿಸಿ ನೀರಿನಲ್ಲಿ ಕಲಸಿ ಮೈಗೆ ಹಚ್ಚುತ್ತಾರೆ. ಅದು ಎರಡು ಮೂರು ತಿಂಗಳುಗಳ ಕಾಲ ದೇಹದ ಮೇಲೆ ಇರುತ್ತದೆಯಂತೆ. ಅಷ್ಟು ದಿನ ಸ್ನಾನ ಮಾಡುವ ಅವಶ್ಯಕತೆ ಇಲ್ಲವಂತೆ.

ನಮ್ಮ ಜತೆ ವಾಸಿಸುತ್ತಿಲ್ಲವೇಕೆ?
ಅಪರ ಕರ್ಮ ಕ್ರಿಯೆ, ಅಮಾನುಷ ದಿನಚರಿ ದರ್ಶನ, ಅಲ್ಲೇ ನಗ್ನನರ್ತನ, ವೈಲ್ಡ್ ಸೆಕ್ಸ್ ಎಲ್ಲವನ್ನೂ ಮಾಡುತ್ತ ಜನರ ನಡುವೆಯೇ ಊರುಕೇರಿ ಗಳಲ್ಲಿಯೇ ಇರಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದೆ. ಆಗ ಅವರು, ನಾವೇನಾದರೂ ನಡುರಾತ್ರಿ ಶಂಖವನ್ನು ಊದುತ್ತ, ಶವ ಸಂಭೋಗ ಮಾಡುತ್ತ ಇದ್ದರೆ ಊರಿನವರು ನಮಗೆ ಜಾಗವನ್ನಾದರೂ ಹೇಗೆ ಕೊಟ್ಟಾರು? ಎಂದು ಮರು ಪ್ರಶ್ನಿಸುತ್ತಾರೆ. ಅವರು ಹೇಳುವುದರಲ್ಲೂ ಒಂದು ಸತ್ಯವಿದೆ.