Saturday, 26th October 2024

ಲಾಕ್ ಡೌನ್ ನಡುವೆ ಮಸೀದಿಯಲ್ಲಿ ಪ್ರಾರ್ಥನೆ: ಬಂಧನ

ಶಿರಸಿ :
ಲಾಕ್ ಡೌನ್ ಎಚ್ಚರಿಕೆಯ ನಡುವೆಯೂ ಜಿಲ್ಲೆಯ ಮುಂಡಗೋಡಿನ ಎರಡು ಮಸೀದಿಗಳಲ್ಲಿ ಗುಂಪು ಗುಂಪಾಗಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ೧೫ ಮಂದಿಯನ್ನು ಮಸೀದಿಯಲ್ಲಿಯೇ ದಸ್ತಗಿರಿ ಮಾಡಿ, ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.‌

ಮುಂಡಗೋಡಿನ ಹುನಗುಂದ ಗ್ರಾಮದ ಜಾಮೀಯಾ ಮಸೀದಿ ಹಾಗೂ ವೀರಾಪುರದ ನೂರಾನಿ ಮಸೀದಿಯಲ್ಲಿ ಕೆಲ ಮುಸ್ಲಿಂಮರು ಒಬ್ಬರ ಪಕ್ಕದಲ್ಲಿ ಒಬ್ಬರು ಕುಳಿತು ಕೊರೊನಾ ಹರಡುವ ರೀತಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ, ಪೊಲೀಸರು ದಾಳಿ ನಡೆಸಿ ಪ್ರಾರ್ಥನೆ ಮಾಡುತ್ತಿದ್ದವರನ್ನು ದಸ್ತಗೀರಿ ಮಾಡಿ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹುನಗುಂದದ ಅಬ್ದುಲ್ ಮುನಾಫ್, ಮಕ್ತುಮಸಾಬ, ಅಬ್ದುಲ್ ಖಾದರ್ ಅಬ್ದುಲ್ ರೇಹಮಾನ್ ಮುಲ್ಲಾ, ಅಬ್ದುಲ್ ಖಾದರ್ ಅಬ್ದುಲ್ ಗಫಾರ್ ಮುಲ್ಲಾ, ಫೀರ ಅಹ್ಮದ್, ದಾದಾಪೀರ ಮತ್ತು ಹಜರತ ಅಲಿ ಹಾಗೂ ವೀರಾಪುರದ ಅಬ್ದುಲ್ ರಜಾಕ್, ಇಮ್ತಿಯಾಜ್, ಮಲ್ಲಿಕ ರೆಹಾನ್, ಮಹಮ್ಮದ್ ರಫಿಕ್, ಮಹಮ್ಮದ್ ಬಸೀರುಲ್, ಮುಸ್ತಾಕ್, ಮಹಮ್ಮದ್ ಗೌಸ್ ಆರೋಪಿಗಳಾಗಿದ್ದಾರೆ.