Saturday, 23rd November 2024

ಶಾಸಕ ರವಿರಾಣಾ, ಪತ್ನಿಗೆ 14 ದಿನ ಕಾಲ ನ್ಯಾಯಾಂಗ ಬಂಧನ

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ತೀಓವ್ರ ಗದ್ದಲ ಎಬ್ಬಿಸಿರುವ ಹನುಮಾನ್‌ ಚಾಲೀಸಾ ಪಠಣೆ ವಿವಾದ ತಿರುವು ಪಡೆದು ಕೊಂಡಿದೆ.

ಪಕ್ಷೇತರ ಶಾಸಕ ರವಿರಾಣಾ ಹಾಗೂ ಅವರ ಪತ್ನಿ ಸಂಸದೆ ನವನೀತ್‌ ರಾಣಾರ ವಿರುದ್ದ ಮಹಾರಾಷ್ಟ್ರ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದು, ಬಾಂದ್ರಾ ಮ್ಯಾಜಿಸ್ರ್ಟೇಟ್‌ ನ್ಯಾಯಾಲಯ ಇಬ್ಬರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಸಂಸದೆ ನವನಿತ್‌ರನ್ನು ಬೈಕುಲ್ಲಾ ಜೈಲಿನಲ್ಲಿ ಇರಿಸಲಾಗಿದ್ದು ಪತಿ ರವಿ ರಾಣಾರನ್ನು ತಲೀಜಾ ಜೈಲ್ಲಿನಲ್ಲಿ ಇರಿಸಲಾಗಿದೆ. ಈ ಮೊದಲು ದಂಪತಿಗಳನ್ನು ಅರ್ಥರ್‌ ರೋಡಿನ ಜೈಲಿನಲ್ಲಿ ಇರಿಸಲು ನಿರ್ಧರಿಸ ಲಾಗಿತ್ತು.

ರಾಣಾ ದಂಪತಿಗಳು ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ನಿವಾಸದೆದುರು ಹನುಮಾನ್‌ ಚಾಲೀಸಾ ಪಠಿಸುವುದಾಗಿ ಹೇಳಿದ್ದರು ಇದಕ್ಕೆ ರಾಜ್ಯಾದ್ಯಂತ ತೋವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಪ್ರಧಾನಿ ಮೋದಿ ಮುಂಬೈ ಭೇಟಿ ಹಿನ್ನೆಲೆಯಲ್ಲಿ ನಿರ್ಧಾರ ಕೈ ಬಿಟ್ಟ ರಾಣಾ ದಂಪತಿಯನ್ನಿ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಪೊಲೀಸರು ಬಂಧಿಸಿದ್ದರು.