Sunday, 15th December 2024

ಶಾಸಕ ಜಿಗ್ನೇಶ್ ಮೇವಾನಿ ಮತ್ತೆ ಬಂಧನ

ನವದೆಹಲಿ : ಪ್ರಧಾನಿ ವಿರುದ್ಧ ಟ್ವೀಟ್ ಮಾಡಿದ್ದ ಆರೋಪದಲ್ಲಿ ಗುಜರಾತ್‌ನ ಸ್ವತಂತ್ರ ಶಾಸಕ ಜಿಗ್ನೇಶ್ ಮೇವಾನಿಗೆ ಕೋಕ್ರಜಾರ್ ನ್ಯಾಯಾಲಯ ಜಾಮೀನು ನೀಡಿದ ಬಳಿಕ ಸೋಮವಾರ ಅಸ್ಸಾಂನಲ್ಲಿ ಮತ್ತೆ ಬಂಧಿಸಲಾಯಿತು.

ಪ್ರಧಾನಿ ಮೋದಿ ಅವ್ರು ಗೋಡ್ಸೆಯನ್ನ ದೇವರೆಂದು ಪರಿಗಣಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಮೇವಾನಿ ಟ್ವೀಟ್‌ಗೆ ಸಂಬಂಧಿಸಿದಂತೆ ಕೋಕ್ರಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಏ.19ರಂದು ಗುಜರಾತ್‌ನ ಪಾಲನ್ಪುರ ಪಟ್ಟಣದಿಂದ ಬಂಧಿಸಲಾಗಿತ್ತು.

ಕೋಕ್ರಜಾರ್ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಭಾವನಾ ಕಾಕೋಟಿ ಅವರಿಗೆ ಹಲವಾರು ಷರತ್ತುಗಳೊಂದಿಗೆ ಜಾಮೀನು ನೀಡಿದ್ದು, ಅಷ್ಟರಲ್ಲಾಗ್ಲೇ ಮತ್ತೊಂದು ಹೊಸ ಪ್ರಕರಣದಲ್ಲಿ ಜಿಗ್ನೇಶ್ ಬಂಧನವಾಗಿದೆ.