Friday, 20th September 2024

ಏಮ್ಸ್ ನರ್ಸಿಂಗ್ ಯೂನಿಯನ್ ಮುಷ್ಕರ ಇಂದಿನಿಂದ

ನವದೆಹಲಿ: ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನರ್ಸಿಂಗ್ ಯೂನಿಯನ್, ನರ್ಸಿಂಗ್ ಅಧಿಕಾರಿ ಹರೀಶ್ ಕಾಜ್ಲಾ ಅವರನ್ನು ಅಮಾನತು ಗೊಳಿಸಿರುವುದನ್ನು ವಿರೋಧಿಸಿ ಮಂಗಳವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

ಏಮ್ಸ್ ನರ್ಸ್ ಯೂನಿಯನ್ ಅಧ್ಯಕ್ಷ ಹರೀಶ್ ಕಾಜ್ಲಾ ಅವರನ್ನು ಸರಿಯಾದ ಕಾರಣಗಳನ್ನು ಉಲ್ಲೇಖಿಸದೆ ಅಮಾನತು ಗೊಳಿಸುವ ನಿಮ್ಮ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ ಏ.26ರಂದು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಒಕ್ಕೂಟವು ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದೆ.

ನರ್ಸಿಂಗ್ ಯೂನಿಯನ್ ಬರೆದಿರುವ ಪತ್ರದಲ್ಲಿ, ನರ್ಸಿಂಗ್ ಅಧಿಕಾರಿ ಹರೀಶ್ ಕಾಜ್ಲಾ ಅವರನ್ನು ಯಾವುದೇ ರೀತಿಯ ಸೂಕ್ತ ಕಾರಣ ನೀಡದೆ ಸಸ್ಪೆಂಡ್ ಮಾಡಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕಾಜ್ಲಾ ಅವರ ಅಮಾನತುಗೊಳಿಸುವಿಕೆಯನ್ನು ತಕ್ಷಣವೇ ಹಿಂಪಡೆಯಲು ಮತ್ತು ಯೂನಿಯನ್ ಕಾರ್ಯನಿರ್ವಾಹಕರು ಮತ್ತು ಮುಖ್ಯ ಒಟಿಯ ಯೂನಿಯನ್ ಸದಸ್ಯರ ಮೇಲಿನ ನಡೆಯುತ್ತಿರುವ ಎಲ್ಲಾ ರೀತಿಯ ಪ್ರತೀಕಾರದ ಕ್ರಮಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಈ ಮುಷ್ಕರಕ್ಕೆ ಕರೆ ನೀಡಿರುವುದಾಗಿ ತಿಳಿಸಲಾಗಿದೆ.

ವಾಸ್ತವವಾಗಿ, ಒಟಿ ರೋಗಿಗಳ ಸೇವೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ನರ್ಸಿಂಗ್ ಅಧಿಕಾರಿ ಹರೀಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೋಮವಾರ ಅಮಾನತುಗೊಳಿಸಲಾಗಿದೆ.