Friday, 25th October 2024

ದಾಯಾದಿ ಮತ್ಸರದ ಕರಾಳ ಕಥೆ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಯಹೂದಿಗಳ ಹತ್ಯಾಕಾಂಡಕ್ಕೆ ಚರ್ಚ್ ಪರೋಕ್ಷವಾಗಿ ಬೆಂಬಲವನ್ನು ನೀಡಿತು. ಮೇಲುನೋಟಕ್ಕೆ ಏಸುಕ್ರಿಸ್ತನು ಹುಟ್ಟಿನಿಂದ ಯಹೂದಿ ಅಲ್ಲವೆ! ಹಾಗಾಗಿ ಯಹೂದಿಗಳು ನಮಗೆ ದೈವಸಮಾನರು ಎಂದು ಹಾಡಿಹೊಗಳುತ್ತಿದ್ದರು. ಆದರೆ ಒಳಗೊಳಗೆ ಅವರನ್ನು ಕಡು ದ್ವೇಷಿಸುತ್ತಿದ್ದರು.

ಏಕದೇವೋಪಾಸನೆಯನ್ನು ನಡೆಸುವ ಜಗತ್ತಿನ ಮೂರು ಪ್ರಧಾನ ಧರ್ಮಗಳೆಂದರೆ ಯಹೂದಿ ಧರ್ಮ, ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮ. ಈ ಮೂರು ಧರ್ಮಗಳು ಮಧ್ಯ ಪ್ರಾಚ್ಯದಲ್ಲಿ ಹುಟ್ಟಿದವು.

ಈ ಮೂರೂ ಧರ್ಮಗಳು ಒಂದರೊಡನೆ ಮತ್ತೊಂದು ನಿಕಟ ಸಂಪರ್ಕವನ್ನು ಪಡೆದಿವೆ. ಯಹೂದಿ ಸಂಪ್ರದಾಯದ ನಡುವಿ ನಿಂದ ಕ್ರೈಸ್ತ ಧರ್ಮವು ಹುಟ್ಟಿತು. ಇಸ್ಲಾಂ ಧರ್ಮವು ಕ್ರೈಸ್ತ ಮತ್ತು ಯಹೂದಿ ಧರ್ಮಗಳೆರಡರಿಂದ ಜನ್ಮವನ್ನು ಪಡೆಯಿತು. ಮೂರೂ ಧರ್ಮಗಳ ನಂಬಿಕೆಯು ಭಿನ್ನವಾಗಿವೆ.

ಆದರೆ ಮೂರೂ ಧರ್ಮಗಳ ನಡುವೆ ದಟ್ಟವಾದ ಸಾಂಸ್ಕೃ ತಿಕ ಸಾಮಾನ್ಯ ಲಕ್ಷಣಗಳಿವೆ. ಈ ಮೂರೂ ಧರ್ಮಗಳು ಅಬ್ರಹಾಂ ನನ್ನು ತಮ್ಮ ಮೂಲ ಪುರುಷ ಎಂದು ಒಪ್ಪುತ್ತವೆ. ವಾಸ್ತವದಲ್ಲಿ ಈ ಮೂರೂ ಧರ್ಮಗಳನ್ನು ಸೋದರ ಧರ್ಮಗಳು ಎನ್ನಬ ಹುದು. ಆದರೆ ಈ ಮೂರೂ ಧರ್ಮಗಳ ನಡುವೆ ಹೊತ್ತಿಕೊಂಡಿರುವ ದಾಯಾದಿ ಮತ್ಸರವು ಎರಡು ಸಾವಿರ ವರ್ಷ ಗಳಾದರೂ ಇಂದಿಗೂ ಉರಿಯುತ್ತಿರುವುದು ಅತ್ಯಂತ ಖೇದನೀಯ ವಿಚಾರವಾಗಿದೆ. ಮನುಷ್ಯನು ಇತಿಹಾಸದಿಂದ ಯಾವ ಪಾಠವನ್ನೂ ಕಲಿಯುವುದಿಲ್ಲ ಎನ್ನುವುದಕ್ಕೆ ಈ ದಾಯಾದಿ ಮತ್ಸರವು ಒಂದು ಜ್ವಲಂತ ಉದಾಹರಣೆಯಾಗಿದೆ.

ಕ್ರೈಸ್ತರು ಯಹೂದಿಗಳನ್ನು ಉಗ್ರವಾಗಿ ದ್ವೇಷಿಸಲು ಕಾರಣ, ಅವರು ಏಸುಕ್ರಿಸ್ತನ ಸಾವಿಗೆ ಕಾರಣರಾದರು ಎಂಬ ತಪ್ಪು ತಿಳಿವಳಿಕೆ. ವಾಸ್ತವದಲ್ಲಿ ಏಸುವಿಗೆ ಮರಣ ದಂಡನೆಯನ್ನು ನೀಡಿದ್ದು ರೋಮನ್ನರಲ್ಲ. ಆದರೆ ಇಂದಿಗೂ ಏಸುವಿನ ಮರಣಕ್ಕೆ ಯಹೂದಿಗಳೇ ಕಾರಣ ಎಂಬ ಭಾವನೆಯು ಕ್ರೈಸ್ತರಲ್ಲಿ ಬಲವಾಗಿ ಬೇರೂರಿದೆ. ಕ್ರೈಸ್ತರು ಯಹೂದಿಗಳನ್ನು ದ್ವೇಷಿಸುವ ಪರಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ವಿಶ್ವದ ಎರಡನೆಯ ಮಹಾ ಯುದ್ಧದ ಅವಧಿ ಯಲ್ಲಿ ಜರ್ಮ ನಿಯ ಹಿಟ್ಲರನು ಯಹೂದಿಗಳ ಸಾಮೂಹಿಕ ಹತ್ಯೆಯನ್ನು ನಡೆಸಿದ್ದು ಮಾನವ ಇತಿಹಾಸದಲ್ಲಿಯೇ ಒಂದು ಕರಾಳ ಅಧ್ಯಾಯ. ಆದರೆ ಈ ಹತ್ಯೆಯು ಇಂದಿಗೂ ಮುಂದುವರೆಯುತ್ತಿದೆ.

ವೈದ್ಯಕೀಯ ಇತಿಹಾಸದಲ್ಲಿ ಯಹೂದಿ ವೈದ್ಯರನ್ನು ಯೋಜಿತವಾಗಿ ಕೊಂದಿರುವಂತಹ ಮತ್ತೊಂದು ಉದಾಹರಣೆಯೇ ಸಿಗುವುದಿಲ್ಲ. ಕ್ರಿ.ಶ .1161. ಮಧ್ಯೆ ಯೂರೋಪಿನಲ್ಲಿ ಬೊಹೆಮಿಯ ಎಂಬ ದೇಶ. ಅಲ್ಲಿನ ಯಹೂದಿ ವೈದ್ಯನೊಬ್ಬನ ವಿಷ ಪ್ರಯೋಗವನ್ನು ಮಾಡಿ ಬೊಹೆಮಿಯ ನಾಗರಿಕರನ್ನು ಕೊಲ್ಲಲಿದ್ದಾನೆ ಎನ್ನುವ ಸುದ್ದಿಯು ಹರಡಿತು. ಕೂಡಲೇ ಬೊಹೆಮಿಯ ನಾಗರಿಕರು, ದೇಶದಲ್ಲಿದ್ದ ಎಲ್ಲ ಯಹೂದಿ ವೈದ್ಯರನ್ನು ಎಳೆದುಕೊಂಡು ಬಂದರು. ಒಂದೆಡೆ ಕೂಡಿ ಹಾಕಿ ಅವರಿಗೆ ಬೆಂಕಿ ಯನ್ನು ಹಚ್ಚಿದರು.

೮೬ ಯಹೂದಿ ವೈದ್ಯರು ಬೆಂದು ಬೂದಿಯಾದರು. ಯೂರೋಪಿನಲ್ಲಿ 1345-1351ರ ನಡುವೆ ಉಗ್ರ ಸ್ವರೂಪದ ಪ್ಲೇಗ್ ಪಿಡುಗು ಕಾಣಿಸಿಕೊಂಡಿತು. ಪ್ಲೇಗಿಗೆ ಕಾರಣ ಯೆರ್ಸೀನಿಯ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯ. ಪ್ಲೇಗ್ ಮೂಲತಃ ಪ್ರಾಣಿಜನ್ಯ ಕಾಯಿಲೆ. ದಂಶಕ ವರ್ಗದ ಪ್ರಾಣಿಗಳಲ್ಲಿ, ಅದರಲ್ಲೂ ಪ್ರಧಾನವಾಗಿ ಇಲಿಗಳಲ್ಲಿ ಕಂಡುಬರುವ ಕಾಯಿಲೆ. ಚಿಗಟ (ಕೀಟ)ವು ರೋಗಗ್ರಸ್ತ ಇಲಿ ಯನ್ನು ಕಚ್ಚಿ ಅದರ ರಕ್ತವನ್ನು ಹೀರಿದಾಗ, ಯೆರ್ಸೀನಿಯ ಬ್ಯಾಕ್ಟೀರಿಯ ಚಿಗಟದ ಒಡಲನ್ನು ಸೇರುತ್ತದೆ. ಈ ಚಿಗಟವು ಆರೋಗ್ಯ ವಂತ ಇಲಿಯನ್ನು ಕಚ್ಚಿದಾಗ, ಯೆರ್ಸೀನಿಯ ಆರೋಗ್ಯವಂತ ಇಲಿಯ ಒಡಲನ್ನು ಸೇರಿ ಅದರ ಸಾವಿಗೆ ಕಾರಣ ವಾಗುತ್ತದೆ.

ಸತ್ತ ಇಲಿಯ ಮೈ ತಣ್ಣಗಾಗುತ್ತಿರುವಂತೆಯೇ, ಅದರ ಮೈಮೇಲಿರುವ ಚಿಗಟವು ಸಮೀಪದಲ್ಲಿ ನಡೆದು ಹೋಗುತ್ತಿರಬಹುದಾದ ಮನುಷ್ಯನ ಒಡಲಿಗೆ ಜಿಗಿಯುತ್ತದೆ. ರಕ್ತವನ್ನು ಹೀರುತ್ತದೆ. ಆಗ ಯೆರ್ಸೀನಿಯವು ಮನುಷ್ಯನ ಒಡಲನ್ನು ಸೇರಿ, ಅವನಲ್ಲಿ ಪ್ಲೇಗ್ ಕಾಯಿಲೆಯನ್ನು ಉಂಟು ಮಾಡುತ್ತದೆ. ಅಂದಿನ ವೈದ್ಯರಿಗೆ ಪ್ಲೇಗ್ ಬಗ್ಗೆ ಏನೂ ಗೊತ್ತಿರಲಿಲ್ಲ. ಹಾಗಾಗಿ ಯೂರೋಪಿನ 25%-60%ರಷ್ಟು ಜನರು ಪ್ಲೇಗ್ ಸೋಂಕಿನ ಕಾರಣ ಸತ್ತರು.

ಕ್ರೈಸ್ತರು ಪ್ಲೇಗಿಗೆ ಕಾರಣ ಯಹೂದಿಗಳೆಂದರು. ಯಹೂದಿ ವೈದ್ಯರು, ಜನಸಾಮಾನ್ಯರು ಬಳಸುವ ಬಾವಿಗಳಲ್ಲಿ ವಿಷವನ್ನು ಬೆರೆಸುತ್ತಿದ್ದಾರೆಂದು, ಆ ವಿಷಯುಕ್ತ ನೀರನ್ನು ಕುಡಿದು ಕ್ರೈಸ್ತರು ಸಾಯುತ್ತಿದ್ದಾರೆಂದು ಗುಲ್ಲೆಬ್ಬಿಸಿದರು. ಇಲ್ಲಿ ಯಹೂದಿಗಳ ಆಚರಣೆಯೇ ಅವರ ಸಾವಿಗೆ ಕಾರಣವಾದದ್ದು ಒಂದು ದೊಡ್ಡ ವಿಪರ್ಯಾಸವಾಗಿದೆ. ಪ್ಲೇಗ್ ಪಿಡುಗಿನಿಂದ ಯಹೂದಿಗಳಿಗಿಂತ ಕ್ರೈಸ್ತರು ಹೆಚ್ಚಿನ ಪ್ರಮಾಣದಲ್ಲಿ ಸಾಯುತ್ತಿದ್ದರು. ಇದಕ್ಕೆ ಕಾರಣವೇ ಬೇರೆ ಇತ್ತು. ಯಹೂದಿಗಳು ಕ್ರೈಸ್ತರಿಗಿಂತ ಹೆಚ್ಚು ವೈಯಕ್ತಿಕ ಸ್ವಚ್ಛತೆ ಹಾಗೂ ಗೃಹ ನೈರ್ಮಲ್ಯವನ್ನು ಪರಿಪಾಲಿಸುತ್ತಿದ್ದರು.

ಅವರು ಕ್ರೈಸ್ತರ ಹಾಗೆ ಸಾರ್ವಜನಿಕ ಜಲಮೂಲಗಳ ಬದಲು ತಮ್ಮದೇ ಬಾವಿಗಳಿಂದ ನೀರನ್ನು ತರುತ್ತಿದ್ದರು. ಜೊತೆಗೆ ಯಹೂದಿ ಗಳ ವಸತಿ ಸ್ಥಳವು ನಗರದ ಮುಖ್ಯ ಭಾಗದಿಂದ ಹೊರ ಅಂಚಿನಲ್ಲಿ ಇರುತ್ತಿದ್ದವು. ಸ್ವಚ್ಛತೆಯು ಇರುವ ಕಡೆಗೆ ಇಲಿಗಳು ಬರುವು ದಿಲ್ಲ. ಹಾಗಾಗಿ ಯಹೂದಿಗಳ ಮನೆಗಳಲ್ಲಿ ಪ್ಲೇಗ್‌ಗ್ರಸ್ತ ಇಲಿಗಳು ಸಾಯುವುದು ಅಪರೂಪವಾಗಿತ್ತು. ಹಾಗಾಗಿ ಪ್ಲೇಗಿನಿಂದ ಸತ್ತವರ ಸಂಖ್ಯೆಯು ಕಡಿಮೆಯಿತ್ತು. ಈ ವೈಜ್ಞಾನಿಕ ಸತ್ಯವು ವೈದ್ಯರಿಗಾಗಲಿ, ಕ್ರೈಸ್ತರಿಗಾಗಲಿ ಅಥವಾ ಸರಕಾರಕ್ಕಾಗಲಿ ಗೊತ್ತಿರ ಲಿಲ್ಲ.

ಹಾಗಾಗಿ ಬಲಾಢ್ಯ ಕ್ರೈಸ್ತರು ಅಮಾಯಕ ಯಹೂದಿಗಳಿಗೆ ಚಿತ್ರಹಿಂಸೆಯನ್ನು ನೀಡಿ, ತಾವೇ ಕುಡಿಯುವ ನೀರಿನ ಬಾವಿಗಳಲ್ಲಿ ವಿಷವನ್ನು ಬೆರೆಸಿರುವುದಾಗಿ, ಬಲವಂತದ ಹೇಳಿಕೆಯನ್ನು ಪಡೆಯುತ್ತಿದ್ದರು. ಕೂಡಲೇ ಆ ಬಡಾವಣೆಯಲ್ಲಿದ್ದ ಅಷ್ಟೂ ಯಹೂದಿಗಳನ್ನು ಕೊಂದು ಹಾಕುತ್ತಿದ್ದರು. ಯಹೂದಿಗಳ ಹತ್ಯಾಕಾಂಡಕ್ಕೆ ಚರ್ಚ್ ಪರೋಕ್ಷವಾಗಿ ಬೆಂಬಲವನ್ನು ನೀಡಿತು. ಮೇಲುನೋಟಕ್ಕೆ ಏಸುಕ್ರಿಸ್ತನು ಹುಟ್ಟಿನಿಂದ ಯಹೂದಿ ಅಲ್ಲವೆ! ಹಾಗಾಗಿ ಯಹೂದಿಗಳು ನಮಗೆ ದೈವಸಮಾನರು ಎಂದು ಹಾಡಿಹೊಗಳುತ್ತಿದ್ದರು. ಆದರೆ ಒಳಗೊಳಗೆ ಅವರನ್ನು ಕಡು ದ್ವೇಷಿಸುತ್ತಿದ್ದರು. ಯಹೂದಿಗಳು ಸ್ವಭಾವತಃ ಬುದ್ಧಿವಂತರು.

ಚಾಣಾಕ್ಷರು. ವ್ಯಾಪಾರ ವಹಿವಾಟುಗಳ ಸೂಕ್ಷ್ಮವನ್ನು ಅರಿತವರು. ಹಾಗಾಗಿ ಅವರು ಸಹಜವಾಗಿಯೇ ಶ್ರೀಮಂತರಾಗಿರು
ತ್ತಿದ್ದರು. ಇದು ಕ್ರೈಸ್ತರ ಹೊಟ್ಟೆಕಿಚ್ಚಿಗೆ ಕಾರಣ ವಾಗಿರಬಹುದು. ಜತೆಗೆ ಏಸುವಿನ ಸಾವಿಗೆ ಯಹೂದಿಗಳೇ ಕಾರಣ ಎಂಬ ಮೂಢ
ನಂಬಿಕೆಯು ಯಹೂದಿಗಳ ಮಾರಣಹೋಮಕ್ಕೆ ಇಂಬು ಕೊಟ್ಟಿತೆಂದು ಕಾಣುತ್ತದೆ.

ಯಹೂದಿಗಳ ಮೇಲೆ ಮೊದಲ ಆಕ್ರಮಣವು ಏಪ್ರಿಲ್ 1348ರಂದು ಫ್ರಾನ್ಸ್ ದೇಶದ ಟೌಲೋ ನಗರದಲ್ಲಿ ನಡೆಯಿತು. ಕ್ರೈಸ್ತರು ಯಹೂದಿಗಳ ಬಡಾವಣೆಗೆ ನುಗ್ಗಿದರು. 40 ಯಹೂದಿಗಳನ್ನು ಅವರವರ ಮನೆಗಳಲ್ಲಿಯೇ ಕೊಂದರು. ನಂತರ ಈ ಅಂಧ ಕಗ್ಗೊಲೆಯು ಸ್ಪೇನ್ ದೇಶದ ಬಾರ್ಸಿಲೋನ ಹಾಗೂ ಇತರ ಸಮೀಪದ ನಗರಗಳಿಗೆ ಹರಡಿತು. ಜನವರಿ 9, 1939ರಂದು ಇಡೀ ಬಾಸೆಲ್ ನಗರದಲ್ಲಿದ್ದ ಯಹೂದಿಗಳನ್ನು ಸುಟ್ಟುಹಾಕಿದರು.

ಮಾರ್ಚ್ 21, 1939ರಂದು ಜರ್ಮನಿಯ ಎಫರ್ಟ್ ನಗರದಲ್ಲಿ 100-3000 ಯಹೂದಿಗಳ ಮಾರಣಹೋಮವಾಯಿತು. 14 ಫೆಬ್ರವರಿ 1939ರಂದು, ಅಂದರೆ ವ್ಯಾಲೆಂಟೈನ್ಸ್ ದಿನದಂದು, ಸ್ಟ್ರಾಸ್‌ಬರ್ಗ್ ಹತ್ಯಾಕಾಂಡವು ನಡೆದು 2000  ಯಹೂದಿಗಳನ್ನು ಕೊಂದರು. ಸ್ಟ್ರಾಸ್‌ಬರ್ಗ್ ನಗರದ ಕ್ರೈಸ್ತರು ಸುಟ್ಟ ಯಹೂದಿಗಳ ಮನೆಯೊಳಗೆ ಇದ್ದಿರಬಹುದಾದ ಬೆಲೆಬಾಳುವ ವಸ್ತುಗಳನ್ನು ಹುಡುಕಿ ಹುಡುಕಿ ಕೊಳ್ಳೆ ಹೊಡೆದರು. ಈ ಅವಧಿಯಲ್ಲಿ ಒಟ್ಟು 510 ಯಹೂದಿ ಸಮುದಾಯಗಳ ಮಾರಣ ಹೋಮವು ನಡೆಯಿತು.

ಕ್ರೈಸ್ತರು ತಮ್ಮನ್ನು ಕೊಲ್ಲಲು ಬರುತ್ತಿದ್ದಾರೆ ಎನ್ನುವ ಸುದ್ಧಿಯನ್ನು ಕೇಳಿ ಅನೇಕ ಯಹೂದಿಗಳು ತಮ್ಮನ್ನು ತಾವೇ ಕೊಂದುಕೊಂಡರು. ಮೈನ್ಜ್ ನಗರದ ೩೦೦೦ ಯಹೂದಿಗಳು ಕ್ರೈಸ್ತರೊಡನೆ ಬಹಳ ಹೊತ್ತು ಹೋರಾಡಿದರಾದರೂ, ಕ್ರೈಸ್ತ ಆಕ್ರಮಣಕಾರರ ಸಂಖ್ಯೆ ಹೆಚ್ಚಾಗಿ ಅವರು ಸೋತರು. ಸ್ಪೇಯರ್ ನಗರದಲ್ಲಿ ಯಹೂದಿಗಳನ್ನು ಕೊಂದು, ಅವರ ಶವಗಳನ್ನು ಮರದ ಬಿಯರ್ ಡ್ರಮ್‌ಗಳಲ್ಲಿ ತುಂಬಿ ರೈನ್ ನದಿಯಲ್ಲಿ ತೇಲಿ ಬಿಟ್ಟರು.

1351ರ ವೇಳೆಗೆ ಯಹೂದಿ ಹತ್ಯಾಕಾಂಡದ 351 ಪ್ರಕರಣಗಳು ಯೂರೋಪಿನಲ್ಲಿ ನಡೆದುಹೋದವು. 1610ರಲ್ಲಿದ್ದ ವಿಯನ್ನ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಅನ್ವಯ, ಯಹೂದಿ ವೈದ್ಯರು ಪ್ರತಿ ಹತ್ತನೆಯ ಕ್ರೈಸ್ತನನ್ನು ವಿಷ ಪ್ರಾಶನದ ಮೂಲಕ ಕೊಲ್ಲಬೇಕೆನ್ನುವ ಕಾನೂನು ಇತ್ತಂತೆ! ಜರ್ಮನ್ ದೇವತಾಶಾಸಜ್ಞ ಮಾರ್ಟಿನ್ ಲ್ಯೂಥರ್(1483-1546) ಸಹ ಯಹೂದಿ ಗಳನ್ನು ನಮ್ಮನ್ನು ಕೊಲ್ಲಲು ಸಾಧ್ಯವಾಗುವುದಾದರೆ, ಅವರು ಬಹಳ ಸಂತೋಷದಿಂದ ನಮ್ಮನ್ನೆಲ್ಲ ಕೊಂದು ಬಿಡುತ್ತಾರೆ.

ತಮ್ಮನ್ನು ತಾವು ವೈದ್ಯರೆಂದು ಕರೆಸಿಕೊಳ್ಳುವ ಅವರು ಆಗಾಗ್ಗೆ ಕ್ರೈಸ್ತರನ್ನು ಕೊಲ್ಲುತ್ತಾರೆ ಎಂದು ತನ್ನ ಕಲ್ಪನೆಯನ್ನು ಹರಿಯ ಬಿಟ್ಟು ಯಹೂದಿಗಳ ಪ್ರಾರ್ಥನಾ ಮಂದಿರವನ್ನು (ಸೈನಗಾಗ್) ಸುಟ್ಟುಹಾಕುವಂತೆ ಕರೆಕೊಟ್ಟ. ಮಧ್ಯಯುಗದ ಅನೇಕ
ಪೋಪ್-ಗಳು, ಯಹೂದಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯಬಾರದು ಎಂದು ಕ್ರೈಸ್ತರಿಗೆ ತಾಕೀತು ಮಾಡುತ್ತಿದ್ದರು. ವುರ್ಟೆಂಬರ್ಗ್-ನ ಪಾದ್ರಿಯು ಸೈತಾನನು ಸಹಾಯ ಮಾಡುವ ಯಹೂದಿ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯುವುದಕ್ಕಿಂತ ಏಸುವಿನೊಡನೆ ಸಾಯುವುದು ಲೇಸು ಎಂದು ಸಾರಿದ.

ಜರ್ಮನಿಯು ತನ್ನ ದೇಶದಲ್ಲಿದ್ದ ಎಲ್ಲ ಯಹೂದಿ ವೈದ್ಯರ ನೋಂದಣಿಯನ್ನು ಹಿಂದಕ್ಕೆ ಪಡೆಯಿತು. ಇದರ ಫಲವಾಗಿ ಜರ್ಮನಿಯಲ್ಲಿ ವೈದ್ಯರ ಕೊರತೆಯು ತೀವ್ರವಾಯಿತು. ಇದನ್ನು ಸರಿದೂಗಿಸಲು ಜರ್ಮನ್ ಸರಕಾರವು ವೈದ್ಯಕೀಯ ಶಿಕ್ಷಣದ ಅವಧಿಯನ್ನು ಎರಡು ವರ್ಷ ಕಡಿಮೆ ಮಾಡಿತು. ಅಮೆರಿಕವು ಎರಡನೆಯ ಮಹಾಯುದ್ಧದ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಬಯಸಿದ ಯಹೂದಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಿತು.

ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ ಧರ್ಮವನ್ನು ಕಡ್ಡಾಯವಾಗಿ ಬರೆಯುವಂತೆ ಒತ್ತಡವನ್ನು ಹೇರಿತು. ಕಾರ್ನೆಲ್ ಮತ್ತು ಯೇಲ್ ವಿಶ್ವವಿದ್ಯಾಲಯಗಳು ಯಹೂದಿ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗುರುತಿಸುವ ಅಸಂವಿಧಾನಿಕ ವ್ಯವಸ್ಥೆಯನ್ನು ರೂಪಿಸಿದವು. ಕೊಲಂಬಿಯ ವಿಶ್ವವಿದ್ಯಾಲಯದ ನರ ರೋಗ ವಿಭಾಗದಲ್ಲಿದ್ದ ಎಲ್ಲ ಯಹೂದಿಗಳು ರಾಜೀನಾಮೆಯನ್ನು ಕೊಡಬೇಕಾಯಿತು. ಈ 21ನೆಯ ಶತಮಾನದಲ್ಲೂ ಸಹ, ಕ್ರೈಸ್ತರು ಯಹೂದಿ ವೈದ್ಯರ ಮೇಲಿನ ಸಲ್ಲದ ಆರೋಪಗಳನ್ನು
ಹೊರಿಸುತ್ತಿರುವರು ಎನ್ನುವುದು ವಾಸ್ತವ ಸತ್ಯವಾಗಿದೆ.

1988ರಲ್ಲಿ ಚಿಕಾಗೋವಿನಲ್ಲಿ ಯಹೂದಿ ವೈದ್ಯರು ಏಡ್ಸ್ ವೈರಸ್ಸಿನ ಚುಚ್ಚುಮದ್ದನ್ನು ನೀಡುತ್ತಿದ್ದಾರೆ ಎಂದರೆ, 1997ರಲ್ಲಿ ಪ್ಯಾಲಸ್ಟೈನ್ ದೇಶವು, ಯಹೂದಿ ವೈದ್ಯರು ತಮ್ಮ ಮಕ್ಕಳಿಗೆ ಎಚ್.ಐ.ವಿ ಇಂಜಕ್ಷನ್ ನೀಡುತ್ತಿದ್ದಾರೆ ಎಂದು ಬೊಬ್ಬಿಟ್ಟಿತು. ಇಂದಿಗೂ ಸಹ, ಕ್ಷುಲ್ಲಕ ಕಾರಣ ಗಳಿಗಾಗಿ ಯಹೂದಿ ಜನಾಂಗದವರ ಮೇಲೆ ಆಕ್ರಮಣವನ್ನು ಮಾಡಿ ಅವರನ್ನು ಕೊಲ್ಲುತ್ತಿರು ವುದು ಅಮಾನವೀಯ ವಿಚಾರವಾಗಿದೆ. ಸಾವಿರಾರು ವರ್ಷಗಳಿಂದಲೂ ಕ್ರೈಸ್ತರು ತಮ್ಮ ಮೇಲೆ ಆಕ್ರಮಣವನ್ನು ಮಾಡು ತ್ತಿದ್ದರೂ, ಯಹೂದಿಗಳು ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಳ್ಳದಿರುವುದು ಆಶ್ಚರ್ಯಕರ ವಿಷಯವಾಗಿದೆ.