Friday, 22nd November 2024

ಭ್ರಷ್ಟಾಚಾರ ಪ್ರಕರಣ: ಆಂಗ್​ ಸಾನ್​ ಸೂಕಿಗೆ 5 ವರ್ಷ ಜೈಲು ಶಿಕ್ಷೆ

#AungSanSuKii

ಬ್ಯಾಂಕಾಕ್: ಮ್ಯಾನ್ಮಾರ್​ ದೇಶದ ಮಾಜಿ ನಾಯಕಿ, ನಾಗರಿಕ ಹೋರಾಗಾರ್ತಿ ಆಂಗ್​ ಸಾನ್​ ಸೂಕಿ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿರುವ ನ್ಯಾಯಾಲಯವು, 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ರಾಜಕೀಯ ಸಹೋದ್ಯೋಗಿಯೊಬ್ಬರಿಂದ ಚಿನ್ನ ಮತ್ತು ಲಕ್ಷಾಂತರ ಡಾಲರ್‌ ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಸೀಕಿ ವಿರುದ್ಧ 2021ರ ಫೆಬ್ರವರಿಯಲ್ಲಿ ಕೇಳಿಬಂದಿತ್ತು.

ಮ್ಯಾನ್ಮಾರ್​ ಸೇನೆಯು ಸೂಕಿ ಬೆಂಬಲಿತ ಸರ್ಕಾರವನ್ನು ಪದಚ್ಯುತಗೊಳಿಸಿ, ತನ್ನ ವಶಕ್ಕೆ ಆಡಳಿತ ಪಡೆದುಕೊಂಡಿತ್ತು. ವಿಚಾರಣೆಯಲ್ಲಿ ತನ್ನ ಮೇಲಿನ ಭ್ರಷ್ಟಾಚಾರ ಆರೋಪವನ್ನು ಸೂಕಿ ತಳ್ಳಿ ಹಾಕಿದ್ದರಾದರೂ ಮ್ಯಾನ್ಮಾರ್​ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿದೆ.

76 ವರ್ಷದ ಸೂಕಿ ಅವರನ್ನು ರಾಜಕೀಯದಿಂದ ದೂರ ಇರಿಸಲು ಅಲ್ಲಿನ ಮಿಲಿಟರಿ ಆಡಳಿತ ಉದ್ದೇಶಿಸಿದೆ. ಅವರು ಯಾವ ತಪ್ಪು ಮಾಡದಿದ್ದರೂ ಶಿಕ್ಷೆ ವಿಧಿಸಿದೆ ಎಂದು ಸೂಕಿ ಬೆಂಬಲಿಗರು ಆರೋಪಿಸಿದ್ದಾರೆ.