Saturday, 23rd November 2024

2018ರ ಹಿಂಸಾಚಾರ: ಶರದ್ ಪವಾರ್‌ಗೆ ಸಮನ್ಸ್

ಮುಂಬೈ: ಪುಣೆ ಜಿಲ್ಲೆಯ ಯುದ್ಧ ಸ್ಮಾರಕದಲ್ಲಿ 2018ರ ಜನವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದಂತೆ ಹೇಳಿಕೆ ದಾಖಲಿಸಿಕೊಳ್ಳಲು ಮೇ 5 ಮತ್ತು 6ರಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಹಾಜರಾಗುವಂತೆ ಕೋರೆಗಾಂವ್-ಭೀಮಾ ವಿಚಾರಣಾ ಆಯೋಗ ಆದೇಶ ನೀಡಿದೆ.

ಸಮಿತಿಯು 2020 ರಲ್ಲಿ ಪವಾರ್‌ಗೆ ಸಮನ್ಸ್ ನೀಡಿತ್ತು, ಆದರೆ ಲಾಕ್ ಡೌನ್ ಕಾರಣದಿಂದ ಶರದ್ ಅವರು ವಿಚಾರಣೆಗೆ ಹಾಜರಾ ಗಿರಲಿಲ್ಲ. ನಂತರ, ಈ ವರ್ಷದ ಫೆಬ್ರವರಿ 23 ಮತ್ತು 24 ರಂದು ಆಯೋಗದ ಮುಂದೆ ಹಾಜರಾಗಲು ಪವಾರ್‌ಗೆ ಮತ್ತೊಂದು ಸಮನ್ಸ್ ನೀಡ ಲಾಯಿತು.

ಮೇ 5 ಮತ್ತು 6 ರಂದು ತನಿಖಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಪಿ ಮುಖ್ಯಸ್ಥರನ್ನು ಕೇಳಲಾಗಿದೆ ಎಂದು ವಕೀಲ ಆಶಿಶ್ ಸತ್ಪುತೆ ತಿಳಿಸಿದ್ದಾರೆ. ಪವಾರ್ ಅವರು ಈ ಹಿಂದೆ ಅಕ್ಟೋಬರ್ 8, 2018 ರಂದು ಆಯೋಗದ ಮುಂದೆ ಅಫಿಡ ವಿಟ್ ಸಲ್ಲಿಸಿದ್ದರು.

ಫೆಬ್ರವರಿ 2020 ರಲ್ಲಿ, ಸಾಮಾಜಿಕ ಕಾರ್ಯಕರ್ತ ವಿವೇಕ್ ವಿಚಾರ್ ಮಂಚ್ ಸದಸ್ಯ ಸಾಗರ್ ಶಿಂಧೆ ಅವರು ಆಯೋಗದ ಮುಂದೆ ಅರ್ಜಿ ಸಲ್ಲಿಸಿದ್ದರು.

ಜನವರಿ 1, 2018 ರಂದು ಕೋರೆಗಾಂವ್-ಭೀಮಾ 1818 ರ ಯುದ್ಧದ ದ್ವಿಶತಮಾನದ ವಾರ್ಷಿಕೋ ತ್ಸವದ ಸಂದರ್ಭದಲ್ಲಿ ಪುಣೆ ಜಿಲ್ಲೆಯ ಯುದ್ಧ ಸ್ಮಾರಕದ ಬಳಿ ಎರಡು ಜಾತಿಗಳ ಮಧ್ಯೆ ಹಿಂಸಾಚಾರ ನಡೆದಿತ್ತು.