ಮಾನ್ವಿ: ಪಟ್ಟಣದ ನೇತಾಜಿ ಪ್ರಾಥಮಿಕ ಫ್ರೌಡಶಾಲೆಯಲ್ಲಿ ನಡೆದ ನಗೆ ಹಬ್ಬ ಕಾರ್ಯಾಕ್ರಮವನ್ನು ಹಾಸ್ಯ ಕಲಾವಿದರಾದ ಹಿಂದೂಮತಿ ಸಾಲಿಮಠ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಯಲ್ಲಿ ಅನೇಕ ಸಾಹಿತಿಗಳು ಬರೆದ ಸಾಹಿತ್ಯವನ್ನು ಅಭ್ಯಾಸ ಮಾಡಿ ಅವುಗಳಲ್ಲಿನ ಹಾಸ್ಯವನ್ನು ತೆಗೆದು ಕೊಂಡು ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡನಗೆ ಹಬ್ಬವನ್ನು ನಡೆಸಿ ಕೊಡುವ ಮೂಲಕ ಅನೇಕ ಹಾಸ್ಯ ಕಲಾವಿ ದರು ಪ್ರಸಿದ್ದಿಯನ್ನು ಪಡೆಯುವುದಕ್ಕೆ ಕನ್ನಡ ಸಾಹಿತ್ಯದಲ್ಲಿನ ಸತ್ವಯುತ್ತವಾದ ಬರವಣಿಗೆಯೆ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿ ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳ ಬಗ್ಗೆ ತಿಳಿಯಬೇಕು ಎನ್ನುವ ದೃಷ್ಟಿಯಿಂದ ನೇತಾಜಿ ಶಿಕ್ಷಣ ಸಂಸ್ಥೆಯವರು ಅನೇಕ ಅರ್ಥ ಪೂರ್ಣವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದಾರೆ.
ಕನ್ನಡಿಗರ ಪ್ರೋತ್ಸಾಹ ದಿಂದ. ಉಪನ್ಯಾಸಕಿಯಾಗಿ, ಸಾಹಿತಿಯಾಗಿ, ಪ್ರವಚನಕಾರರಾಗಿ ಹಾಗೂ ಹಾಸ್ಯ ಕಲಾವಿದೆಯಾಗಲು ಸಾಧ್ಯವಾಗಿದೆ ಈ ಭಾಗವು ದಾಸರು, ಜನಪದ ಕಲಾ ವಿದರು, ಗಾಯಕರು, ಸಾಹಿತಿಗಳ ತವರೂರಾಗಿದೆ ಎಂದು ತಿಳಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬೀರಪ್ಪ ಸಂಭೊಜೀ ಮಾತನಾಡಿ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಪಠ್ಯಾಧಾರಿತ ವಾದ ಶಿಕ್ಷಣಕ್ಕೆ ಸೀಮಿತವಾಗದೆ ನಮ್ಮ ಮಣ್ಣಿನಲ್ಲ ರಳಿದ ಕಲೆಗಳಿಗೆ,ಸಂಸ್ಕೃತಿ,ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಆದ್ಯತೆ ನೀಡಿದಾಗ ಮಾತ್ರ ಮಕ್ಕಳು ಎಲ್ಲಾ ವಿಷಯಗಳಲ್ಲಿ ಪರಿಣಿತಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಹಾಸ್ಯ ಕಲಾವಿದರಾದ ಹಿಂದೂಮತಿ ಸಾಲಿಮಠರವರು ನಗೆ ಹಬ್ಬ ಕಾರ್ಯ ಕ್ರಮದಲ್ಲಿ ಹಾಸ್ಯ ಪ್ರಸಂಗಗಳನ್ನು ಹಾಗೂ ನಗೆ ಚಟಾಕಿಗಳನ್ನು,ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ತಾ.ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಶರ್ಪೂದ್ಧಿನ್,ಪಕ್ಷಿ ಪ್ರೇಮಿ ಸಲ್ಲಾವುದ್ದೀನ್,ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕೆ.ಈ.ನರಸಿಂಹ,ಕಾರ್ಯದರ್ಶೀ ವಿಜಯಲಕ್ಷ್ಮೀ, ಅನುರಾಧ, ಗೀತಾ. ಸೂಗಪ್ಪಗೌಡ. ಸೇರಿದಂತೆ ಶಾಲೆಯ ಮುಖ್ಯಗುರುಗಳು,ಶಿಕ್ಷಕರು,ವಿದ್ಯಾರ್ಥಿಗಳು ಇದ್ದರು,