Thursday, 12th December 2024

ಕಾಶ್ಮೀರಿ ಫೈಲ್ಸ್- ಸ್ವತಂತ್ರ ಭಾರತದ ಘೋರ ದುರಂತ

ಅವಲೋಕನ

ಸಿಂಚನ ಎಂ.ಕೆ.,ಮಂಡ್ಯ

ನಮ್ಮ ಮಿತ್ರರು, ಬಂಧುಗಳು ಎಂದೇ ಭಾವಿಸಿದ್ದ ಮುಸಲ್ಮಾನರು ಬೆನ್ನಿಗೆ ಚೂರಿ ಹಾಕಿದರು, ಮತಾಂಧತೆಯ ಅಲೆ ಯಲ್ಲಿ ತೇಲಿ ಮತಾಂಧ ರಾಕ್ಷಸರಿಗೆ ಇಸ್ಲಾಮಿಕ್ ಕಟ್ಟರ್ ವಾದಿಗಳಿಗೆ ಬೆಂಬಲವಾಗಿ ನಿಂತರು. ರಲೀವ್, ಗಲೀವ್, ಚಲೀವ್ (ಮತಾಂತರವಾಗು/ ಸತ್ತು ಹೋಗು/ ಓಡಿ ಹೋಗು) ಎಂಬ ಘೋಷವಾಕ್ಯಗಳನ್ನು ಹೇಳುತ್ತಾ ಬೆದರಿಸಿದರು.

ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೆ ನಿತ್ಯಂ ವಿದ್ಯಾದಾನಂ ಚ
ದೇಹಿಮೆ
ಹೀಗೆ ಪ್ರತಿನಿತ್ಯ ನಮ್ಮ ಶಾಲೆಯಲ್ಲಿ ಪ್ರಾರ್ಥನೆ
ಮಾಡುತ್ತಿದ್ದೆವು. ಆದರೆ ಈಗ ಕಾಶ್ಮೀರದಲ್ಲಿ ಶಾರದೆ
ಎಲ್ಲಿಹಳು!

1990ರಲ್ಲಿ ನಮ್ಮ ಕಾಲದದ ಕಾಶ್ಮೀರಿ ಹಿಂದೂಗಳ ನರಮೇಧವನ್ನು ಒಳಗೊಂಡಂತೆ ಒಟ್ಟು ಏಳು ಬಾರಿ ಈ ದುರಂತ ಜರುಗಿರುವುದು ಕಂಡುಬರುತ್ತದೆ. ಸಾವಿರ ವರ್ಷಗಳ ಗುಲಾಮಗಿರಿಯ ದುರಾದೃಷ್ಟಕರ, ದೌರ್ಭಾಗ್ಯಕರ ಇತಿಹಾಸವನ್ನು ಹೊಂದಿದ್ದರೂ ಮತ್ತೆ ಅದೇ ರೀತಿಯ ಸಮಸ್ಯೆಯನ್ನು ಆಹ್ವಾನಿಸುತ್ತಿದ್ದೇವೆ. ಶತ್ರುಗಳು ನಮ್ಮ ಬಗೆಗಿರುವ ಕೋಪ, ದ್ವೇಷಗಳನ್ನೆ ನೇರವಾಗಿ ತೋರ್ಪಡಿಸಿಕೊಂಡರೂ ನಾವು ಅದನ್ನು ನಂಬದೆ ಎಲ್ಲಾ ಸರಿಯಾಗುವುದೆಂದು ಭಾವಿಸಿದ್ದೆವು.

ಒಂದು ತಿಂಗಳು ಕಾದೆವು, ಎರಡು ತಿಂಗಳು ಕಾದೆವು ಹೀಗೆ ಈ ಕಾಯುವಿಕೆಯಲ್ಲಿ ಈ ದೇಶ ಅತಿ ದೊಡ್ಡ ದುರಂತಕ್ಕೆ ಸಾಕ್ಷಿ
ಯಾಗುತ್ತದೆಂದು ಕಲ್ಪಿಸಿಯೂ ಇರಲಿಲ್ಲ. ನಿನ್ನೆಯವರೆಗೂ ನಮ್ಮ ಮಿತ್ರರಂತಿದ್ದ ಕಾಶ್ಮೀರಿ ಮುಸಲ್ಮಾನರು ಬೆನ್ನಿಗೆ ಚೂರಿ ಹಾಕಿ ಮತಾಂಧತೆಯ ಪರಾಕಾಷ್ಠೆಯನ್ನು ತಲುಪುತ್ತಾರೆಂದು ಕನಸ್ಸಿನಲ್ಲಿಯೂ ಭಾವಿಸಿರಲಿಲ್ಲ.

‘ಜಿಹಾದಿಗಳು ಎಂದಿಗೂ ಜಿಹಾದಿಗಳೇ’ ಎಂಬ ಕಟುಸತ್ಯವನ್ನು ಮರೆತಿದ್ದಕ್ಕೆ ನಮಗೆ ದಂಡನೆ ದೊರೆಯಿತೆ? ಕ್ಷಾತ್ರವನ್ನು ಕಡೆಗ ಣಿಸಿ ಅದರ ಮಹತ್ವವನ್ನು ಕಿರಿದಾಗಿಸಿ ದ್ದಕ್ಕೆ ತಕ್ಕ ಶಿಕ್ಷೆ ದೊರೆಯಿತೆ? ಪಂಡಿತರಾದರೂ ಪಾಮರರ ಕುಕೃತ್ಯಕ್ಕೆ ಬಲಿಯಾಗಿ ಜ್ಞಾನದ ಸಂಪತ್ತನ್ನು ವ್ಯರ್ಥ ಮಾಡಿಕೊಂಡು ಬಿಟ್ಟೆವೇ? ಅಸಮರ್ಥ ನಾಯಕರ ಆಡಳಿತಾವಧಿಯ ಅಲೆಗಳಿಗೆ ಸಿಲುಕಿ ನಮ್ಮ ಗೌರವದ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿಕೊಂಡೆವೇ? ಅಸಮರ್ಥ ನಾಯಕರಿಗಿಂತ ಭ್ರಷ್ಟ ನಾಯಕರ ದಾಳಿಗಳಿಗೆ ಬಲಿಯಾಗಿ ಅವರ ಜಿಹಾದಿಗಳ ಬೆಂಬಲಿತ ಯೋಜನೆಗಳ ದ್ವೇಷದ ಪೆಟ್ಟನ್ನು ತಿಂದೆವೇ? ಅಧ್ಯಾತ್ಮದ ಔನ್ನತ್ಯವನ್ನು ತಲುಪಿದ್ದ ಪವಿತ್ರ ಸ್ಥಳವು ರೌರವ ನರಕವಾಗುತ್ತಿದ್ದನ್ನು ಕಣ್ಣಾರೆಯೆ ಕಂಡರೂ ಏನೂ ಮಾಡಲಾಗದೆ ಅಸಹಾಯಕರಾದೆವೇ? ಜಿಹಾದ್ ಭಯ, ಜೀವ ಭಯ, ಮತಾಂಧತೆ ಭಯ, ಭಯೋತ್ಪಾದನೆ ಭಯಗಳೆಲ್ಲವೂ ಒಡಗೂಡಿ ನಮ್ಮನ್ನು ನಮ್ಮ ಕಾಶ್ಮೀರ ದಿಂದಲೇ ದೂರ ಮಾಡಿದವೇ? ನನ್ನ ಒಡನಾಡಿಗಳ, ಬಂಧು-ಬಳಗದವರ ಜೀವವನ್ನೇ ತೆಗೆದವೇ? ಇದೆಲ್ಲಕ್ಕಿಂತ ಪ್ರಾಣ ಹೋದ ರೂ ಸರಿಯೇ ತಾಯಿ-ತಾಯ್ನಾಡಿನ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಚಾರಿತ್ರ್ಯ-ಸಂಸ್ಕೃತಿಯ ಪರಾಕಾಷ್ಠ ಹಂತವನ್ನು ತಲುಪಿ ರುವ ಹಿಂದೂಗಳಾದ ನಾವು ತಾಯಂದಿರ, ಸಹೋದರಿಯರ ಮಾನಭಂಗವನ್ನು ತಡೆಯಲಾಗದೆ ಹೇಡಿ ಸೈತಾನರ ಹೇಯ ಕೃತ್ಯಗಳನ್ನು ಕಂಡು ಸ್ತಬ್ಧರಾಗಿ ಹೋದೆವೇ? ರಸ್ತೆಯಲ್ಲಿ ಹೋಗುತ್ತಿದ್ದವರನ್ನೂ ಅವರು ಹಿಂದೂ ಎಂಬ ಒಂದೇ ಒಂದು ಕಾರಣಕ್ಕಾಗಿ ಅಮಾನುಷವಾಗಿ ಕೊಂದರು. ತಮಗೆ ವಿದ್ಯಾದಾನ ಮಾಡಿದ ಗುರುಗಳ ಮೇಲೆ ದಾಳಿ ನಡೆಸಿದರು. ಕಾಶ್ಮೀರದ ಪ್ರತಿಭಾವಂತಶಾಲಿ ಯುವಕ-ಯುವತಿಯರನ್ನು ನಿಸ್ತೇಜಗೊಳಿಸಿದರು.

ಕಾಶ್ಮೀರದ ಭವಿಷ್ಯದ ಒಳಿತಿಗಾಗಿ ಶ್ರಮಿಸುತ್ತಿದ್ದ ಶ್ರದ್ಧಾವಂತ ಉದ್ಯೋಗಿಗಳ ಆಶಾಗೋಪುರವನ್ನು ಕೆಡವಿದರು. ಮತಾಂಧತೆ ಯೆಂಬ ಭೀಕರ, ಹೇಡಿ ಅಸವನ್ನು ಪ್ರಯೋಗಿಸಿ ಬೆನ್ನಿಗೆ ಚೂರಿ ಹಾಕಿದರು. ಈ ನೆಲದ ಸಮ್ಮಾನದ ಪ್ರತೀಕವಾಗಿರುವ ಸ್ತ್ರೀ ಸಂಕುಲದ ಮೇಲೆ ಭಯಾನಕ ಅತ್ಯಾಚಾರ ನಡೆಸಿದರು. ಸಭ್ಯತೆ, ಸೌಜನ್ಯತೆ, ಸೌಮ್ಯತೆಗಳೆಂಬ ಸತ್ವ ಜ್ಞಾನದ ಅಸ್ತ್ರ

ವನ್ನು  ಮತಾಂಧತೆ, ಭಯೋತ್ಪಾದಕತೆ, ಅನೈತಿಕತೆ ಅಮಾನವೀಯತೆಗಳೆಂಬ ತಮಸ್ಸಿನ ಅಜ್ಞಾನ ಅಸ್ತ್ರದಿಂದ ಸೋಲಿಸಿ ಕಪಟ ಮೋಸದ ಮೂಲಕ ವಿಜಯ ಸಾಧಿಸಿದರು.

ತಮ್ಮ ಸ್ಮರಣೆಯ ಇಟ್ಟಕೊಳ್ಳಲಾಗದಷ್ಟು ಜನರ ಕೊಲೆ ಮಾಡಿ ಅಪರಾಧಿಗಳಾದರೂ ಅಗೌರವಕ್ಕೆ ಪಾತ್ರವಾಗಿ ಕಂಬಿಯ ಹಿಂದೆ ನಿಲ್ಲದೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜತೆ ನಿಲ್ಲುವ ಗೌರವವನ್ನು ಪಡೆದುಕೊಂಡರು!
ನಾವು ತಿಳಿದುಕೊಂಡೆವು ಕಾಶ್ಮೀರದ ಮುಸಲ್ಮಾನರು ಮತಾಂಧತೆಯಿಂದ ಭ್ರಮಿತರಾಗಿ ಹೀಗೆ ಮಾಡಿದ್ದಾರೆ ಆದರೆ ಸ್ವಲ್ಪ ದಿನಗಳ ನಂತರ ಮತ್ತೆ ನಮ್ಮನ್ನು ಸ್ವಾಗತಿಸುತ್ತಾರೆ ಎಂದು, ಹಾಗೆಯೇ ಸರಕಾರವೂ ಕೂಡ ಸಂಪೂರ್ಣ ಸಹಕಾರ, ಸಹಭಾಗಿತ್ವದೊಂದಿಗೆ ನಮಗೆ ನ್ಯಾಯ ದೊರಕಿಸಿ ಕೊಡುವುದೆಂದು. ಆದರೆ ನ್ಯಾಯವನ್ನು ದೊರಕಿಸಿಕೊಡುವುದಿರಲಿ, ಆ ಕಠೋರ ಸತ್ಯವನ್ನು ಕೇಳಿ ಒಪ್ಪಿಕೊಳ್ಳಲು ಮೂರು ದಶಕಗಳು ಬೇಕಾಯಿತು.

ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಕತ್ತಿನ, ದೇಶಾಭಿಮಾನದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆರ್ಟಿಕಲ್ ೩೭೦ ರದ್ದು ಮಾಡುವ ಮೂಲಕ ನಮಗೂ ಈಗ ಅಸ್ತಿತ್ವವನ್ನು ದೊರಕಿಸಿಕೊಡುತ್ತಿದ್ದಾರೆ. ಹಾಗೆಯೇ ಈಗ ವಿವೇಕ್ ರಂಜನ್ ಅಗ್ನಿಹೋತ್ರಿ ಅವರಂತಹ ಧೈರ್ಯಶಾಲಿ ನಿರ್ದೇಶಕರ ಮೂಲಕ ಈ ದುರಂತ ಸತ್ಯಕಥೆಯು ಚಿತ್ರವಾಗಿ ನಿರ್ಮಾಣಗೊಂಡು
ಗರಿಷ್ಠ ಪ್ರಮಾಣದಲ್ಲಿ ಜನರನ್ನು ತಲುಪುತ್ತಿದೆ.

ತಮ್ಮದೇ ಆದ ಕಾಶ್ಮೀರದ ನೆಲದಿಂದ ಬಲವಂತವಾಗಿ ವಿವಶತೆಯಿಂದ ಹೊರದೂಡಲ್ಪಟ್ಟ ಪಂಡಿತರು ಸೆಕ್ಯುಲರಿಸಮ್‌ನ ಇಟ್ಟಿಗೆಗಳಿಂದ ಮಾಡಲ್ಪಟ್ಟ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವಂತಾಯಿತು. ಇದರಿಂದ ನಾನಾಬಗೆಯ ದೈಹಿಕ, ಮಾನಸಿಕ, ಅಧ್ಯಾತ್ಮಿಕ ಕಾಯಿಲೆಗಳು ಒಂದಾದ ಮೇಲೆ ಒಂದರಂತೆ ಅತಿಕ್ರಮಣ ಮಾಡಿದವು. ಒಂದೇ ಮನೆಯಲ್ಲಿ ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಸೋದರ-ಸೋದರಿಯರು ಎಲ್ಲಾ ಸೇರಿ ೮-೧೦ ಜನರು ಒಂದೇ ಪುಟ್ಟ ಶಿಬಿರದಲ್ಲಿ ವಾಸಿಸಬೇಕಾದ ಘೋರ ವಿವಶತೆ ಕಾಶ್ಮೀರಿ ಹಿಂದೂ ಪಂಡಿತರದ್ದಾಯಿತು.

ಇಂತಹ ಸಂದರ್ಭದ ಬದುಕು ಸಾಮಾಜಿಕ ಸಂಘರ್ಷಕ್ಕೆ ಮಾತ್ರ ಸೀಮಿತವಾಗದೆ ವೈಯಕ್ತಿಕವಾದ ದಾಂಪತ್ಯ ಜೀವನ, ಮುಂದಿನ ಪೀಳಿಗೆಯ ಸೃಜನ ಮುಂತಾದ ಬಗೆಯ ಸಮಸ್ಯೆಗಳಿಗೂ ನಾಂದಿ ಹಾಡುವ ಮೂಲಕ ಕಾಶ್ಮೀರಿ ಹಿಂದೂಗಳ ಭವಿಷ್ಯವನ್ನು ಆತಂಕಕ್ಕೀಡು ಮಾಡಿತು. ಮೈನಾರಿಟಿ ಅಲ್ಲದವರಿಗೆ ಮೈನಾರಿಟಿ ಸ್ಟೇಟಸ್ ನೀಡಿ ಸರಕಾರಿ ಸವಲತ್ತುಗಳನ್ನು ದುರುಪಯೋಗ ಪಡಿಸುವ ಬದಲು ವಾಸ್ತವದಲ್ಲಿ ಮೈನಾರಿಟಿ ಆಗಿ ಹೋಗಿರುವ ಪಂಡಿತರಿಗೆ ಕಾಶ್ಮೀರದಲ್ಲಿ ಮೈನಾರಿಟಿ ಸ್ಟೇಟಸ್ ನೀಡಿ
ಸರಕಾರದ ಸವಲತ್ತುಗಳನ್ನು ನೀಡಬೇಕಾಗಿದೆ. ಮನುಷ್ಯರ ಸ್ವಾಭಾವಿಕ ಪ್ರವೃತ್ತಿಯಾದ ಮಹತ್ತರ ಗುರಿ ಹೊಂದುವಿಕೆ ಹಾಗೂ ತಲುಪುವಿಕೆಯಂತಹ ವಿಕಾಸ ಪಥವೂ ನಮಗೆ ಮುಳ್ಳಿನ ಪಥವಾಯಿತು.

ನಮ್ಮ ಮಿತ್ರರು, ಬಂಧುಗಳು ಎಂದೇ ಭಾವಿಸಿದ್ದ ಮುಸಲ್ಮಾನರು ಬೆನ್ನಿಗೆ ಚೂರಿ ಹಾಕಿದರು, ಮತಾಂಧತೆಯ ಅಲೆಯಲ್ಲಿ ತೇಲಿ ಮತಾಂಧ ರಾಕ್ಷಸರಿಗೆ ಇಸ್ಲಾಮಿಕ್ ಕಟ್ಟರ್ ವಾದಿಗಳಿಗೆ ಬೆಂಬಲವಾಗಿ ನಿಂತರು. ರಲೀವ್, ಗಲೀವ್, ಚಲೀವ್ (ಮತಾಂತರವಾಗು/ ಸತ್ತು ಹೋಗು/ ಓಡಿ ಹೋಗು) ಎಂಬ ಘೋಷವಾಕ್ಯಗಳನ್ನು ಹೇಳುತ್ತಾ ಬೆದರಿಸಿದರು. ಮಸೀದಿಗಳ ಗೋಡೆಗಳಲ್ಲಿ ಮುಂದಿನ ಟಾರ್ಗೆಟ್ ಆಗಿರುವ ಕಾಶ್ಮೀರಿ ಪಂಡಿತರು ಯಾರೆಂದು ತಿಳಿಸುವ ಹಿಟ್ ಲಿಸ್ಟ್ ಹಾಕುತ್ತಾ ಪ್ರತಿಕ್ಷಣ ಹಿಂಸಿಸಿದರು.

ಇಷ್ಟೆ ಭೀಕರತೆ ಗಳು ಬಂದೆರಗಿದರೂ ಭವಿಷ್ಯದ ಸುಭದ್ರತೆ, ಸಕ್ಷಮತೆ, ಸಾಕಾರತೆಗಳ ಬಗೆಗೆ ಚಿಂತಿಸದೆ ಕೆಲವು ಮಹಾನ್ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಉದಾಹರಣೆಗೆ ಅರವಿಂದ್ ಕೇಜ್ರಿವಾಲ್ ರಂತಹ ಮನಸ್ಥಿತಿಯುಳ್ಳವರು ಮತ್ತದೇ ಅಲ್ಪಸಂಖ್ಯಾತರ ಓಲೈಸುವ ರಾಜಕಾರಣ ಮಾಡುವ ಮೂಲಕ ಸತ್ಯವನ್ನು ಎದುರಿಸದೆ ಸುಲಭವಾದ ಆದರೆ ಭವಿಷ್ಯದ ದೃಷ್ಟಿಯಲ್ಲಿ ಅತಿ ಭಯಾನಕವಾಗಬಹುದಾದ ವಿಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ.

ಇಂತಹ ಮಾನಸಿಕತೆಯ ವ್ಯಕ್ತಿಗಳು ನಮ್ಮ ಕಥೆಯನ್ನು ಓದಿದ್ದರೆ ಅಥವಾ ಕಾಶ್ಮೀರಿ ಫೈಲ್ಸ್ ಸಿನೆಮಾವನ್ನು ವೀಕ್ಷಿಸಿದ್ದರೆ ಜಿಹಾದಿಗಳು ಅವರಿಗೆ ಬೆಂಬಲ ನೀಡಿದ್ದವರನ್ನೂ ಕಾಫಿರ್ ಎಂಬ ಕಾರಣಕ್ಕಾಗಿ ಬರ್ಬರವಾಗಿಯೇ ಹತ್ಯೆಗೈದರು ಎಂಬುದು ಮನವರಿಕೆಯಾಗುತ್ತಿತ್ತು. ಇವರಿಗೆ ಕಾಶ್ಮೀರಿ ಫೈಲ್ಸ್ ದೇಶವಾಸಿಗಳಿಗೆ ಹತ್ತಿರವಾಗುತ್ತಿರುವುದನ್ನು, ಕಠೋರ ಸತ್ಯ ಸಂಗತಿಯು ದೇಶಭಕ್ತರ ಹೃದಯವನ್ನು ಛೇದಿಸಿ ಹಿಂದೂಗಳಿಗೆ ನ್ಯಾಯ ದೊರಕಿಸಲು ಜೋರಾಗುತ್ತಿರುವ ಕೂಗನ್ನು ಸಹಿಸಲಾಗುತ್ತಿಲ್ಲ.

ಇದು ಇತಿಹಾಸದ ಅತ್ಯಂತ ದುಃಖಕರ ಮನ ಕಲುಕುವ ಘಟನೆ. ಇದೊಂದು ದೊಡ್ಡ ಐತಿಹಾಸಿಕ ಪ್ರಮಾದ, ಇದಕ್ಕಾಗಿ ಹಿಂದೂಗಳಲ್ಲಿ ಕ್ಷಮೆ ಕೇಳುತ್ತೇವೆ ಹಾಗೂ ಪಶ್ಚಾತ್ತಾಪ ಪಡುತ್ತೇವೆ, ಇನ್ನುಮುಂದೆ ನಾವೆ ಸೌಹಾರ್ದಯುತವಾಗಿ ಗೌರವಪೂರ್ಣ ವಾಗಿ ಬದುಕುತ್ತೇವೆ ಎಂದು ಧೈರ್ಯವಾಗಿ ಹೇಳಲು ಅವರು ಸಿದ್ಧರಿದ್ದಾರೆಯೇ? ಇದೇ ಪ್ರಶ್ನೆ ಕ್ರಿಶ್ಚಿಯನ್ನರಿಗೂ ಕೂಡ.

ಲಾಭಕ್ಕಾಗಿ, ವ್ಯಾಪಾರ-ವ್ಯವಹಾರಕ್ಕಾಗಿ ನಿಮಗೆ ಹಿಂದೂಗಳ ದೇವಸ್ಥಾನ ಬೇಕು, ಹಿಂದೂಗಳ ದೇವರ ನಾಮ ಬೇಕು, ಹಿಂದೂ ಗ್ರಾಹಕರು ಬೇಕು ಆದರೆ ಇಂತಹ ಉದಾರವಾದಿ ಹಿಂದೂಗಳಿಗೆ ಗೌರವ ಕೊಡುವುದು, ಅವರ ಸಂಸ್ಕೃತಿ-ಪರಂಪರೆಯನ್ನು ಸಮ್ಮಾನಿಸುವುದು ಮಾತ್ರ ಬೇಕಿಲ್ಲವೆ? ಸಹಿಷ್ಣುತೆಗಿಂತಲೂ ಸಾವಿರ ಪಟ್ಟು ಮೇಲಾದ ಸ್ವೀಕಾರತೆಯನ್ನೇ ತಮ್ಮ ಧ್ಯೇಯವನ್ನಾಗಿಸಿ ಕೊಂಡಿರುವ ಹಿಂದೂಗಳು ಸತ್ವಯುತ ಮಾನವಧರ್ಮವನ್ನು ರಕ್ಷಿಸಲು ಕ್ಷಾತ್ರಭರಿತ ಆಪತ್ ಧರ್ಮವನ್ನು ಪಾಲಿಸಿಯೇ ಪಾಲಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಿ.

ಏಕೆಂದರೆ ‘ಅಹಿಂಸಾ ಪರಮೋಧರ್ಮಃ ಧರ್ಮ ಹಿಂಸಾ ತತೈವಚ’ ಅರ್ಥಾತ್ ಅಹಿಂಸೆಯೇ ಶ್ರೇಷ್ಠ ಧರ್ಮ, ಆದರೆ ಧರ್ಮ ರಕ್ಷಣೆಗಾಗಿ ಹಿಂಸೆ ಮಾಡುವುದೂ ಕೂಡ ಅದರಷ್ಟೇ ಶ್ರೇಷ್ಠ ಧರ್ಮ. ಪ್ರತ್ಯೇಕತೆ, ಸ್ವೀಕಾರತೆ- ಔದಾರ್ಯತೆಗಳ ಸಂಘರ್ಷ ಎಂದಿಗೆ ಮುಗಿಯುವುದು? ಈ ಕದನಕ್ಕೆ ಅಂತ್ಯವಿರಾಮ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದರೆ ಘರ್ ವಾಪಸಿ ಮಾತ್ರಾನಾ? ಸ್ವಾಮಿ
ವಿವೇಕಾನಂದ: ‘ಒಬ್ಬ ಹಿಂದೂ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟ ಮಾತ್ರವಷ್ಟೆ ಅಲ್ಲ, ಒಬ್ಬನ ವಿರೋಧ ಹೆಚ್ಚಾಯಿತು ಎಂದು!’.

ಸೌದಿ ಅರೇಬಿಯಾ, ಜೆರುಸಲೆಮ್‌ಗಳಲ್ಲಿನ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಿಗಿಂತ ನಮ್ಮಲ್ಲಿನ ಹಿಂದೆ ಯಾವುದೋ ಬಲವಂತದ ಅಥವಾ ಮೋಸದ ಜಾಲದಲ್ಲಿ ಸಿಲುಕಿ ಮತಾಂತರಗೊಂಡ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರೇ ಹೆಚ್ಚು ಕಟ್ಟರ್
ವಾದಿಗಳಾಗಿ ಬೆಳೆಯುತ್ತಿರುವುದೇ ಸ್ವಾಮೀಜಿಯವರ ಈ ಎಚ್ಚರಿಕೆಯ ಸಂದೇಶಕ್ಕೆ ಸಾಕ್ಷಿ. ಸಮಸ್ತ ಜಗತ್ತಿಗೇ ಜ್ಞಾನದ ಬೆಳಕನ್ನು ನೀಡಬಲ್ಲ ಸಾಮರ್ಥ್ಯವಿರುವ ಹಿಂದೂ ಧರ್ಮದವರಾದ ನಾವು ನಮ್ಮಲ್ಲಿರುವ ಸಾಲು-ಸಾಲು ಆಘಾತಕಾರಿ ಆಕ್ರಮಣಗಳ ದೌರ್ಬಲ್ಯವನ್ನು ಕೊಡಹಿ ಹಿಂದುತ್ವದ ಝೇಂಕಾರದಿಂದ ನಮ್ಮ ದಿವ್ಯ ಶಕ್ತಿಯನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಸರ್ವರ ಕಲ್ಯಾಣ ಮಾಡೋಣ.