Saturday, 14th December 2024

ಸೀಲ್ ಡೌನ್ ಬಗ್ಗೆ ಜನತೆಗೆ ಭಯಬೇಡ: ಪೊಲೀಸ್ ಆಯುಕ್ತರು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಸೀಲ್ ಡೌನ್ ಬಗ್ಗೆ ಸರಕಾರವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಾರ್ವಜನಿಕರು ಭಯಬೀಳಬೀಡಿ, ಮುಂಜಾಗ್ರತಾ ಕ್ರಮವಾಗಿ ಎರಡೇ ವಾಡ್೯ ಗಳಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಎಲ್ಲಿಯೂ ಸೀಲ್ ಡೌನ್ ಮಾಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟಪಡಿಸಿದರು.

ನಗರದಲ್ಲಿ ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಜಾರಿಯಾಗಲಿದೆ ಎನ್ನುವ ಚರ್ಚೆ ಪ್ರಾರಂಭವಾಗಿತ್ತು. ಈ ಕುರಿತು ನಗರ ಪೋಲಿಸ್ ಆಯುಕ್ತರಾದ ಭಾಸ್ಕರ್ ರಾವ್ ತುರ್ತು ಸುದ್ದಿ ಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಸೀಲ್ ಡೌನ್ ಬಗ್ಗೆ ಸರಕಾರವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಾರ್ವಜನಿಕರು ಭಯಬೀಳಬೀಡಿ, ಮುಂಜಾಗ್ರತಾ ಕ್ರಮವಾಗಿ ಎರಡೇ ವಾಡ್೯ಗಳಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಎಲ್ಲಿಯೂ ಸೀಲ್ ಡೌನ್ ಮಾಡುವುದಿಲ್ಲ. ಸೀಲ್ ಡೌನ್ ಮಾಡಿರುವ ಜಾಗದಲ್ಲಿ ಸರಕಾರವು ಅಗತ್ಯ ವಸ್ತುಗಳನ್ನು ಪೂರೈಸಲಿದೆ. ಎರಡು ವಾಡ್೯ಗಳಲ್ಲಿ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಸೀಲ್ ಡೌನ್ ಮಾಡಲಾಗಿದೆ. ಹಾಗಂತ ಇಡೀ ಬೆಂಗಳೂರು ಸೀಲ್ ಡೌನ್ ಆಗಿಲ್ಲ ಎಂದು ಹೇಳಿದರು.

ಅಲ್ಲದೆ, ಎಲ್ಲಾ ಕಡೆ ಅಗತ್ಯ ವಸ್ತುಗಳಾದ ದಿನಸಿ, ಮಾಂಸ, ಮೆಡಿಕಲ್, ತರಕಾರಿ ಅಂಗಡಿಗಳು ಓಪನ್ ಇರುತ್ತವೆ. ಸಾವಿಗೆ ಹೋಗುವವರಿಗೆ ಮಾತ್ರ ಪಾಸ್ ಕೊಡುತ್ತೇವೆ. ಸಿಟಿಯಿಂದ ಹೊರಗೆ ಮತ್ತು ಒಳಗೆ ಬರುವವರ ತಪಾಸಣೆ ಆಗುತ್ತಿದೆ. ಕೆಲವರು ಸುಳ್ಳು ಮಾಹಿತಿ ನೀಡಿ ಪಾಸ್ ಪಡೆದಿರುವುದು ತಿಳಿದುಬಂದಿದೆ ಅಂತವರ ಮೇಲೆ ಪ್ರಕರಣ ದಾಖಲಾಗಿದೆ. ಪಾದರಾಯನಪುರ ವಾಡ್೯ನಲ್ಲಿ ಮನೆ ಬಳಿಗೆ ಆಹಾರ ಪದಾರ್ಥಗಳನ್ನು ಸರಕಾರ ಒದಗಿಸುತ್ತಿದೆ. ಮಾಧ್ಯಮಗಳು ಈ ಮಾಹಿತಿಯನ್ನು ಜನರಿಗೆ ಮನ ಮುಟ್ಟುವಂತೆ ಹೇಳಬೇಕು ಎಂದರು.

ಇನ್ನು ಪಾಸ್ ಇಲ್ಲದೆ ಅನಾವಶ್ಯಕವಾಗಿ ಓಡಾಡುತ್ತಿದ್ದ ೨೧೭೦೦ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದರು.