Wednesday, 30th October 2024

ನೀತಿ ಆಯೋಗಕ್ಕೆ ಉಪಾಧ್ಯಕ್ಷರಾಗಿ ಸುಮನ್ ಬೆರಿ ಅಧಿಕಾರ ಸ್ವೀಕಾರ

ನವದೆಹಲಿ: ಸರ್ಕಾರದ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಚಿಂತಕರ ಚಾವಡಿ ನೀತಿ ಆಯೋಗಕ್ಕೆ ಉಪಾಧ್ಯಕ್ಷರಾಗಿ ಅರ್ಥಶಾಸ್ತ್ರಜ್ಞ ಸುಮನ್ ಬೆರಿ ಅಧಿಕಾರ ವಹಿಸಿಕೊಂಡಿದ್ದಾರೆ.

ಬೆರಿ, ಈ ಹಿಂದೆ ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾಗಿ, ರಾಯಲ್ ಡಚ್ ಶೆಲ್‍ನ ಜಾಗತಿಕ ಮುಖ್ಯ ಅರ್ಥ ಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ, ಅಂಕಿಅಂಶ ಆಯೋಗ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‍ನ ಹಣಕಾಸು ನೀತಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು.

ರಾಜೀವ್ ಕುಮಾರ್ ಅವರ ನಿರ್ಗಮನದಿಂದ ತೆರವಾಗುತ್ತಿರುವ ಸ್ಥಾನಕ್ಕೆ ಅನುಭವಿ ಅರ್ಥಶಾಸ್ತ್ರಜ್ಞ ಮತ್ತು ಸಂಶೋಧನಾ ನಿರ್ವಾಹಕ ಬೆರಿ ಅವರನ್ನು ನಿಯೋಜಿಸಲಾಗಿದೆ.

ಮೊದಲಿನ ಉಪಾಧ್ಯಕ್ಷರಾಗಿದ್ದ ವಿ.ಸಿ.ಅರವಿಂದ್ ಪನಗಾರಿಯಾ ಶೈಕ್ಷಣಿಕ ಕ್ಷೇತ್ರಕ್ಕೆ ಮರಳಲು ನೀತಿ ಆಯೋಗಕ್ಕೆ 2017ರ ಆಗಸ್ಟ್‍ನಲಿ ರಾಜೀನಾಮೆ ನೀಡಿದ್ದರು. ಅಂದಿನಿಂದ ರಾಜೀವ್ ಕುಮಾರ್ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.