Sunday, 15th December 2024

ಹರಪನಹಳ್ಳಿ ಕಾಂಗ್ರೆಸ್‌ನಲ್ಲಿ ಯಜಮಾನ ಇಲ್ಲದ ಮನೆಯಾಗಿದೆ :  ಅಂಬಾಡಿ ನಾಗರಾಜ್

ಹರಪನಹಳ್ಳಿ : ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಜಮಾನ ಇಲ್ಲದ ಮನೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗಿರುವ ಗುಂಪುಗಾರಿಕೆಯನ್ನು ಪಕ್ಷದ ಹೈಕಮಾಂಡ ಹೋಗಲಾಡಿಸಬೇಕು ಎಂದು ಕೆಪಿಸಿಸಿ ಓಬಿಸಿ ಘಟಕದ ಉಪಾದ್ಯಕ್ಷ ಅಂಬಾಡಿ ನಾಗರಾಜ ಮನವಿ ಮಾಡಿದ್ದಾರೆ.

ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಹರಪನಹಳ್ಳಿಯಲ್ಲಿ ಯಜಮಾನವಿಲ್ಲದ ಮನೆಯಂತಾಗಿದೆ ಕಾಂಗ್ರೆಸ್ ಪಕ್ಷದ ಸ್ಥಿತಿ ಎಂದ ಅವರು ಗುಂಪುಗಾರಿಕೆ ಕಡಿಮೆಯಾಗ ಬೇಕು ಎಂದು ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ಹೋಗುವಂತಾಗ ಬೇಕು ಎಂದು ಅಭಿಪ್ರಾಯ ಪಟ್ಟರು. ಬೆಲೆ ಏರಿಕೆ ಖಂಡಿಸಿ ಜೂನ್ ತಿಂಗಳಲ್ಲಿ ಹೋರಾಟ ಹಮ್ಮಿ ಕೊಳ್ಳುವುದಾಗಿ ತಿಳಿಸಿದ ಅವರು ಆ ಹೋರಾಟಕ್ಕೆ ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ಆಹ್ವಾನಿಸುವುದಾಗಿ  ವರು ಹೇಳಿದರು. ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆದು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಾಗಿದೆ ಎಂದು ಹೇಳಿದರು.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾನು ಒಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಅವಕಾಶ ನೀಡಿದರೆ ಹರಪನಹಳ್ಳಿ ತಾಲೂಕನ್ನು ಸಮಗ್ರ ನೀರಾವರಿ ಮಾಡುವ ಗುರಿ ಹೊಂದಿದ್ದೇನೆ ಎಂದು ಅವರು ತಿಳಿಸಿದರು.

ನಾನು ಮೂಲತಃ ಹಗರಿಬೊಮ್ಮನಹಳ್ಳಿ ಯವನಾಗಿದ್ದು, ಇಲ್ಲಿಯ ಚಿಗಟೇರಿಯ ಮೊಮ್ಮಗ ಎಂದ ಅವರು ಹಗರಿಬೊಮ್ಮನಹಳ್ಳಿಯಲ್ಲಿ ೨೪ ವರ್ಷ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ,ಸಮಾಜ ಸೇವೆ, ವ್ಯಾಪಾರ, ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ನುಡಿದರು. ಕಾಂಗ್ರೆಸ್ ಪಕ್ಷದ ೨೬ ಚುನಾವಣೆಗಳಿಗೆ ದುಡಿದಿದ್ದೇನೆ, ಕೋವಿಡ್ ಸಂದರ್ಭದಲ್ಲೂ ಹಗರಿಬೊಮ್ಮನಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದೇನೆ, ಪಕ್ಷಕ್ಕೆ ದುಡಿದ್ದ÷ಕ್ಕಾಗಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.

ಹಗರಿಬೊಮ್ಮನಹಳ್ಳಿಯಲ್ಲಿ ಪಕ್ಷಕ್ಕಾಗಿ ದುಡಿದಿದ್ದು, ಅಲ್ಲಿ ಎಸ್ಸಿ ಗೆ ಮೀಸಲಾಗಿದ್ದರಿಂದ ಅನಿವಾರ್ಯವಾಗಿ ಹರಪನಹಳ್ಳಿಗೆ ಆಕಾಂಕ್ಷಿಯಾಗಿ ಬರಬೇಕಾಯಿತು, ತಾಲೂಕಿನ ೨೮ ಹಳ್ಳಿಗಳನ್ನು ಈಗಾಗಲೇ ಸುತ್ತಾಡಿದ್ದೇನೆ, ಶೇ.೭೦ ರಷ್ಟು ಕಾರ್ಯಕರ್ತರು ಗೊಂದಲದಲ್ಲಿದ್ದಾರೆ, ತಟಸ್ಥ ದೋರಣೆ ಹೊಂದಿದ್ದಾರೆ ಎಂದು ಅವರು ಹೇಳಿದರು.

ಬರುವ ಮೆ.೧೫ ರಂದು ಹರಪನಹಳ್ಳಿ ಸಮೀಪದ ದೇವರತಿಮಲಾಪುರ ಗ್ರಾಮದ ಲಕ್ಷಿ÷್ಮ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ಉಚಿತ ಸಾಮೂಹಿಕ ವಿವಾಹ ಆಯೋಜಿಸಿದ್ದೇನೆ, ಅಂದು ಸಂಜೆ ೫ ಗಂಟೆಗೆ ರಾಜ್ಯದ ಪ್ರಖ್ಯಾತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಸಾಮೂಹಿಕ ವಿವಾಹಕ್ಕೆ ಹೆಸರು ನೊಂದಾಯಿಸಲು ಕೆಂಪೇಶ್ವರ ಮಠದ ಹತ್ತಿರ ವಿರುವ ನಂದಿಮೆಡಿಕಲ್ಸ್ ಮೇಲ್ಭಾಗದ ನನ್ನ ಜನಸಂಪರ್ಕ ಕಚೇರಿಗೆ ೭೬೮೬೦೮೨೨೨೨ ಸಂಪರ್ಕಿಸಲು ಅವರು ಕೋರಿದರು.