ನವದೆಹಲಿ: ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಯಾರನ್ನು ಬಲವಂತ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಲಸಿಕೆ ನೀತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಕೋರ್ಟ್, ಸಂಪೂರ್ಣ ನೀತಿ ಅಸಮಂಜಸ ಮತ್ತು ಅನಿಯಂತ್ರಿತವಾಗಿದೆ ಎಂದು ಹೇಳಲು ಬರುವುದಿಲ್ಲ ಎಂದಿದೆ. ಸಾರ್ವಜನಿಕರ ಒಳಿತಿಗಾಗಿ ವಿಶಾಲ ದೃಷ್ಟಿಕೋನದಿಂದ ಸರ್ಕಾರವು ಕೆಲವು ನೀತಿಯನ್ನು ರೂಪಿಸ ಬಹುದು ಮತ್ತು ಷರತ್ತು ಗಳನ್ನು ವಿಧಿಸಬಹುದು ಎಂದು ಕೋರ್ಟ್ ತಿಳಿಸಿದೆ.
ಲಸಿಕೆ ಹಾಕಿಸಿಕೊಳ್ಳದ ವ್ಯಕ್ತಿಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸುವ ಕುರಿತಂತೆ ಕೆಲವು ರಾಜ್ಯ ಸರ್ಕಾರಗಳು, ಸಂಸ್ಥೆಗಳು ವಿಧಿಸಿರುವ ಷರತ್ತುಗಳು ಸರಿಯಾ ದುದಲ್ಲ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಪರಿಸ್ಥಿತಿಗಳಲ್ಲಿ ಅವುಗಳನ್ನು ಹಿಂಪಡೆ ಯಬೇಕು ಎಂದೂ ಹೇಳಿದೆ.
ಕೋವಿಡ್-19 ಲಸಿಕೆಯಿಂದಾಗುವ ಅಡ್ಡ ಪರಿಣಾಮಗಳ ಕುರಿತ ದತ್ತಾಂಶವನ್ನು ಸಾರ್ವಜನಿಕಗೊಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ