Sunday, 15th December 2024

ಪ್ರಧಾನಿ ಸಲಹೆಗಾರರನ್ನಾಗಿ ತರುಣ್ ಕಪೂರ್ ನೇಮಕ

ನವದೆಹಲಿ: ಪೆಟ್ರೋಲಿಯಂ ಮಾಜಿ ಕಾರ್ಯದರ್ಶಿ ತರುಣ್ ಕಪೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಗಾರರನ್ನಾಗಿ ನೇಮಿಸಲಾಗಿದೆ.

ಹಿಮಾಚಲ ಪ್ರದೇಶ ಕೇಡರ್‌ನ 1987-ಬ್ಯಾಚ್‌ನ IAS ಅಧಿಕಾರಿ ತರುಣ್ ಕಪೂರ್ ಅವರು ನವೆಂಬರ್ 30, 2021 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ತರುಣ್ ಕಪೂರ್ ಅವರನ್ನು ಸಂಪುಟ ನೇಮಕಾತಿ ಸಮಿತಿ, ಪ್ರಧಾನ ಮಂತ್ರಿಗಳ ಸಲಹೆ ಗಾರರಾಗಿ, ಪ್ರಧಾನ ಮಂತ್ರಿ ಕಚೇರಿ ಯಲ್ಲಿ(PMO), ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿಯಲ್ಲಿ ಎರಡು ವರ್ಷಗಳ ಅವಧಿಗೆ ನೇಮಕ ಮಾಡಲು ಅನುಮೋ ದಿಸಿದೆ ಎಂದು ಸಿಬ್ಬಂದಿ ಸಚಿವಾಲಯ ಹೇಳಿದೆ.

ಹಿರಿಯ ಅಧಿಕಾರಿಗಳಾದ ಹರಿರಂಜನ್ ರಾವ್ ಮತ್ತು ಅತಿಶ್ ಚಂದ್ರ ಅವರನ್ನು ಪ್ರಧಾನಿ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯ ದರ್ಶಿಗಳಾಗಿ ನೇಮಿಸಲಾಗಿದೆ.