Sunday, 15th December 2024

ಹೆಚ್ಚು ಜನ ಮೋದಿಯನ್ನು ಮೆಚ್ಚಿಕೊಳ್ಳುವುದು ಏಕೆ ?

ವಿಶ್ಲೇಷಣೆ

ಡಾ.ಕೆ.ಪಿ.ಪುತ್ತೂರಾಯ

drputhuraya@yahoo.co.in

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವರ ವಿರೋಧಿಗಳು ದ್ವೇಷ ಹಬ್ಬಿಸಲು ಯತ್ನಿಸಿದಷ್ಟೂ ಹೆಚ್ಚು ಜನ ಮೋದಿಯವರನ್ನೇ ಮೆಚ್ಚಿಕೊಳ್ಳು
ತ್ತಿರೋದು, ಕೆಲವರಿಗೆ ನುಂಗಲಾರದ ತುತ್ತಾದರೂ, ಸಹಿಸಕೊಳ್ಳಲೇ ಬೇಕಾದ ಸತ್ಯ ಸಂಗತಿಯಾಗಿದೆ. ಇವರ ಮೇಲಿನ ವಿರೋಧಗಳು ಹೆಚ್ಚಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೋದಿ ಪಾಳಯವನ್ನು ಸೇರುತ್ತಿದ್ದಾರೆ.

ಅವರ ಒಂದೊಂದು ಸಾಧನೆಗಳು ಅನಾವರಣಗೊಳ್ಳುತ್ತಿದ್ದಂತೆ ಅವರ ಆರಾಧಕರ ಸಂಖ್ಯೆ ಏರುತ್ತಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಯವರನ್ನು ನರಹಂತಕನೆಂದು ಕರೆದ ಇವರ ರಾಜಕೀಯ ವಿರೋDiಗಳು ಇವನೊಬ್ಬ ದೇಶ್ ಕಾ ಚೋರ್ ಎಂದು ಜರೆಯುತ್ತಾ ಇವರ ವಿರುದ್ಧ ಬಳಸದ ಪದಗಳೇ ಇಲ್ಲ. ಹೊರಿಸದ ಅಪಾದನೆಗಳೇ ಇಲ್ಲ! ಕರೋನಾ ಹರಡುವಿಕೆಯಿಂದ ಹಿಡಿದು ಆಸ್ಪತ್ರೆಗಳಲ್ಲಿ ಆಮ್ಲಜನಕದ, ವೈದ್ಯರ, ಬೆಡ್‌ಗಳ ಕೊರತೆಗೆ, ಇವೆಲ್ಲ ಲಭ್ಯವಾದರೂ, ರೋಗಿಗಳ ಸಾವಿಗೆ ಮೋದಿಯನ್ನೇ ಹೊಣೆಯಾಗಿಸಿದರು.

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಗೂ, ಭ್ರಷ್ಟಾಚಾರಗಳಿಗೂ ಎಲ್ಲಾ ಹಿಂದೂ ಮುಸ್ಲಿಮ್ ಕದನಗಳಿಗೂ ಇವರೇ ಕಾರಣವೆಂದರು. ತಾವು ಅಧಿಕಾರ ದಲ್ಲಿದ್ದಾಗ ಮಾಡಬೇಕಾದುದನ್ನು ಮಾಡಲಾಗದವರು, ಮೋದಿ ಮಾಡಿದ್ದ ನ್ನೆಲ್ಲಾ ಸಹಿಸಿಕೊಳ್ಳಲಾಗದೆ, ಎಲ್ಲವನ್ನೂ ತಪ್ಪು ಎಂದರು. ಎಂತಹ ಕುರುಡನಿಗೂ ಕಾಣಬಲ್ಲ ಅದೆಷ್ಟೋ ಸತ್ಕಾರ್ಯಗಳು, ಪ್ರಗತಿಪರ ಅಭಿವೃದ್ಧಿ ಕೆಲಸಗಳು ದೇಶದಲ್ಲಿ ನಡೆದಿದ್ದರೂ, ಅದ್ಯಾವುದೂ ಇವರ ಕಣ್ಣಿಗೆ
ಗೋಚರಿಸಲೇ ಇಲ್ಲ. ತಪ್ಪಿದ್ದಲ್ಲಿ ತಪ್ಪು ಎಂದು ಹೇಳುವ ಆದರೆ ಒಪ್ಪಿಗೆಯ ಕೆಲಸ ಮಾಡಿದ್ದಲ್ಲಿ ಒಪ್ಪಿಕೊಳ್ಳುವ ಹೃದಯ ವೈಶಾಲ್ಯತೆ ಪ್ರಬುದ್ಧ ರಾಜಕಾರಣಿಗಳ ಲಕ್ಷಣವಲ್ಲವೇ? ಮಾಡಿದ್ದೆಲ್ಲವೂ ಅಕ್ರಮ, ಅನ್ಯಾಯ, ಅಪರಾಧಗಳೇ ಆಗಿದ್ದಲ್ಲಿ ಮತ್ತೆ ಮೋದಿಯವರು ಹೇಗೆ ಆರಿಸಿ ಬಂದರು?
ಇವರೆಷ್ಟೆ ಬೊಬ್ಬೆ ಹಾಕಿದರೂ, ಕುತಂತ್ರಗಳನ್ನು ಹೆಣೆದರೂ ಮೋದಿಯವರ ಜನಪ್ರಿಯತೆ ದಿನೇ ದಿನೇ ವೃದ್ಧಿಯಾಗುತ್ತಿದೆ.

ಮೋದಿಯವರದು ಅಪರೂಪದ ವ್ಯಕ್ತಿತ್ವ, ಬಿಡುವಿಲ್ಲದ ಅವರ ದಿನಚರಿ. ಅವರ ಜೀವನ ಶೈಲಿ, ಕಾರ್ಯ ಶೈಲಿ ಮತ್ತು ಯೋಚನಾ ಶೈಲಿ ಅಸಾಧಾರಣ ವಾದುದು. ಮೋದಿಯವರು  ಜಗತ್ತಿನ ಅಗ್ರೇಸರ ನಾಯಕರಲ್ಲಿ ಒಬ್ಬರಾಗಿದ್ದಾರೆ. ಗುಣಕ್ಕೆ ಮತ್ಸರವಿಲ್ಲ; ಹೀಗಾಗಲು ಕಾರಣಗಳೇನೆಂಬುದನ್ನು
ತಿಳಿ ಯೋಣ. ಮೋದಿಯವರ ಶಾರೀರಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯ ಇವರನ್ನು ದಣಿವರಿಯದ ನಾಯಕ ನನ್ನಾಗಿ ಮಾಡಿದೆ. ಸದಾ ಲವಲವಿಕೆಯಿಂದ ತುಂಬಿರುವ ಇವರು ಒಂದು ದಿನ ಅಸ್ವಸ್ಥರಾಗಿದ್ದಿಲ್ಲ; ಆಸ್ಪತ್ರೆ ಸೇರಿದ್ದಿಲ್ಲ.

ಯಾವುದೇ ಸಭೆ ಸಮಾರಂಭದಲ್ಲೂ ಇತರ ಎಷ್ಟೋ ರಾಜಕಾರಣಿಗಳಂತೆ ಆಕಳಿಸಿದ್ದಿಲ್ಲ; ನಿದ್ದೆ ಮಾಡಿದ್ದಿಲ್ಲ, ಇದಕ್ಕೆ ಕಾರಣ ಇವರು ಸೇವಿಸುವ ಸರಳ ಸಾತ್ವಿಕ ಸಸ್ಯಹಾರ ಹಾಗೂ ನಿಯಮಿತ ವ್ಯಾಯಾಮ ಮತ್ತು ಶಿಸ್ತುಬದ್ಧ ಜೀವನ. ಇವರೊಬ್ಬ ಕರ್ಮಯೋಗಿ. ೭೦ರ ಹರೆಯದಲ್ಲೂ ಸಮಯ ವ್ಯರ್ಥ ಮಾಡುವವರಲ್ಲ. ದಿನದಲ್ಲಿ ೨೦ ಗಂಟೆಗಳ ಕಾಲ ದುಡಿಯುವ ಇವರು ಒಂದು ದಿನ ಕೂಡಾ ರಜೆ ತೆಗೆದುಕೊಂಡಿದ್ದಿಲ್ಲ.

ದೇಶ ಪ್ರೇಮವೇ ಇವರ ಉಸಿರು. ದೇಶ ಸೇವೆಯೇ ಇವರ ಬದುಕು. ದೇಶಕ್ಕಾಗಿ ಇವರಿಗಿರುವ ಬದ್ಧತೆ ಪ್ರಶ್ನಾತೀತ. ಭಾರತೀಯ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಅರಿತವರು ಹಾಗೂ ಎತ್ತಿ ಹಿಡಿದವರು. ಮೋದಿಯವರ ಉಡುಪುಗಳು ಕೂಡ ಆಕರ್ಷಣೀಯ ಹಾಗೂ ಸಂದಭಚಿತ. ಇವರು ಕೇಸರಿ ಉಡುಪಿನಲ್ಲಿ ಸನ್ಯಾಸಿಯಂತೆ ಕಂಡರೆ, ಮಿಲಿಟರಿ ಬಟ್ಟೆಯಲ್ಲಿ ಸೈನಿಕನಂತೆ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ದೈವಭಕ್ತನ ರೂಪ. ಯಾವುದೇ ಸಂದರ್ಭದಲ್ಲೂ ಇವರ ದೈಹಿಕ ಭಾಷೆ ಪ್ರಶಂಸನೀಯ. ಆ ಠೀವಿ, ಗತ್ತು ಘನತೆ, ಗಾಂಭೀರ್ಯ ಹೆಚ್ಚಿನ ನಾಯಕರಿಗಿಲ್ಲ. ಮಾತನಾಡಲು ಇವರು ಎದ್ದು ನಿಂತರೆ ಸಾಕು, ಎಲ್ಲರ ಚಿತ್ತ ಇವರೆಡೆಗೆ. ಇವರದು ಸೂಕ್ಷ್ಮ ದೃಷ್ಟಿ; ತೀಕ್ಷ್ಣದೃಷ್ಟಿ. ಇವರ ಮಾತುಗಳು ಕೆಲವೊಮ್ಮೆ ಕಾವ್ಯಮಯ. ಇವರೊಬ್ಬ ಅದ್ಭುತ
ವಾಗ್ಮಿ. ಇವರ ಮಾತುಗಳು ಅರ್ಥಪೂರ್ಣ. ಎಂದೂ ತಪ್ಪು ಮಾಹಿತಿಗಳನ್ನು ನೀಡಿದವರಲ್ಲ; ಇಲ್ಲವೇ ನಾನು ಹಾಗೆ ಹೇಳಿಲ್ಲ ಎಂದವರಲ್ಲ.

ಇವರಲ್ಲಿರುವ ಹಾಸ್ಯ ಪ್ರಜ್ಞೆಯೂ ಮೆಚ್ಚುವಂಥದೇ. ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ಕೊಂಚ ಜ್ಞಾನವನ್ನು ತನ್ನದಾಗಿಸಿಕೊಂಡಿರುವ ಇವರು ಎಲ್ಲಿಗೆ
ಹೋದರೂ ಆಯಾಯ ಸ್ಥಳೀಯ ಭಾಷೆಯಿಂದಲೇ ಭಾಷಣ ವನ್ನು ಪ್ರಾರಂಭಿಸುತ್ತಾರೆ. ಆ ಪ್ರದೇಶದ ವಿಶೇಷತೆಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ ಅಧ್ಯಯನ ಮಾಡಿ ಮಾತನಾಡುವ ಪರಿ, ಕೇಳುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಕರ್ನಾಟಕಕ್ಕೆ ಬಂದಾಗ ಬಸವಣ್ಣ, ಮಧ್ವಾಚಾರ್ಯ, ಸರ್ವಜ್ಞನನ್ನು
ಉಲ್ಲೇಖಿಸುವರು. ಆದಿ ಶಂಕರಾಚಾರ್ಯ, ರಾಮಾನುಜಾಚಾರ್ಯರ ಸಿದ್ಧಾಂತಗಳ ಬಗ್ಗೆ ಉಪನ್ಯಾಸವನ್ನೇ ನೀಡಬಲ್ಲರು. ಸಂಸ್ಕೃತವನ್ನು ಚೆನ್ನಾಗಿ ಅರಿತುಕೊಂಡಿರುವ ಇವರು ಅಲ್ಲಲ್ಲಿ ಆಗಾಗ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಿರುತ್ತಾರೆ.

ಆಂಗ್ಲ ಭಾಷೆಯಲ್ಲೂ ಇವರ ಪ್ರಭುತ್ವ ಅಸಾಧಾರಣ. ಒಂದು ಕಾಲದಲ್ಲಿ ವೀಸಾವನ್ನು ನಿರಾಕರಿಸಿದ ಅಮೆರಿಕ ಮತ್ತೆ ಇವರನ್ನು ಛಿb Z ಹಾಸಿ, ಸ್ವಾಗತಿಸಿದ ರೀತಿ, ಅಲ್ಲಿ ಅವರು Sಜಿಞಛಿ oಟ್ಠಿZಛಿ ಮಾಡಿದ ಭಾಷಣಗಳು, ಸ್ವಾಮಿ ವಿವೇಕಾನಂದರನ್ನು ನೆನಪಿಗೆ ತರುವಂಥದ್ದು. ತನ್ನ ಬಂಧು ಬಳಗದವರಿಗೆ ಯಾವುದೇ ವಿಶೇಷ ಸೌಕರ್ಯ ಸೌಲಭ್ಯವನ್ನು ಒದಗಿಸದ ಮೋದಿಯವರಿಗೆ, ಎಲ್ಲಾ ಭಾರತೀಯ ಪ್ರಜೆಗಳು ಸರಿಸಮಾನ. ಇವರದು ಏಕ
ನೀತಿ-ಏಕರೀತಿ-ಏಕಪ್ರೀತಿ; ಸಮದೃಷ್ಟಿ-ಪ್ರೇಮದೃಷ್ಟಿ-ವಿಶಾಲದೃಷ್ಟಿ-ವಿಕಾಸದೃಷ್ಟಿ. ಇವರಿಗೆ ವೈಯುಕ್ತಿಕ ಹಿತಾಸಕ್ತಿ ಇಲ್ಲ.

ಮೇ ಪ್ರಧಾನ ಮಂತ್ರಿ ನಹೀ, ಪ್ರಧಾನ್ ಸೇವಕ್ ಹೂ ಎಂಬ ಮಾತು ದಿಟ. ಸತತ ೬೦-೭೦ ವರ್ಷಗಳ ಕಾಲ ತರತರಹದ ಸಂಕಷ್ಟಗಳ ಸುಳಿಯಲ್ಲಿ ಸಿಕ್ಕಿ ಬಿದ್ದಿದ್ದ ಭಾರತದಲ್ಲಿ ಭಾರಿ ಬದಲಾವಣೆಗಳನ್ನು ತಂದವರು. ಇವುಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ: ಕಳೆದ ೧೭ ವರ್ಷಗಳಿಂದ ನೆನೆಗು
ದಿಗೆ ಬಿದ್ದಿದ್ದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಗೆ ನಿರ್ದಿಷ್ಟ ರೂಪುರೇಷೆಯನ್ನು ನೀಡಿ, ೨೦೧೭ರ ಜುಲೈ ೧ರಿಂದ ಐತಿಹಾಸಿಕ ಸುಧಾರಣೆಯನ್ನು ತಂದರು. ಪರಿಣಾಮವಾಗಿ ೧೭ ಬಗೆಯ ಪರೋಕ್ಷ ತೆರಿಗೆಗಳು ಒಂದೇ ತೆರಿಗೆಯಾಗಿ ಮಾರ್ಪಾಟುಗೊಂಡವು.

ಜಮ್ಮು ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ವಿಧಿ ೩೭೦ನ್ನು ರದ್ದುಗೊಳಿಸಿ ಇಸ್ಮಾಮಿಕ್ ಅಧಿಪತ್ಯದಿಂದ ಮುಕ್ತಗೊಳಿಸಿದವರು. ಒಖಅ ಮತ್ತು ಅಂಂ ಕಾನೂನಿನಿಂದ ಭಾರತೇತರ ಅಕ್ರಮ ಮುಸಲ್ಮಾನರನ್ನು ದೇಶದಿಂದ ಹೊರ ಹಾಕಿದರು. ಹಿಂದಿನ ಯಾವ ರಾಜಕಾರಣಿಗಳ ಗಮನಕ್ಕೂ ಬಾರದ ಸ್ವಚ್ಛ್ ಭಾರತ್ ಕನಸನ್ನು ಕಂಡು ಅದನ್ನು ನನಸಾಗಿಸಿದರು. ಹೆಣ್ಣು ಮಕ್ಕಳ ಗೌರವವನ್ನು ಕಾಪಾಡಲು ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಿ ಬಯಲು ಶೌಚಾಲಯಗಳಿಗೆ ಅಂತ್ಯ ಹಾಡಿದರು. ತ್ರಿವಳಿ ತಲಾಖ್‌ನಿಂದ ಮುಸ್ಲಿಮ್ ಮಹಿಳೆ ಯರಿಗೆ ಮುಕ್ತಿ ಕೊಡಿಸಿದರು. ಮಹಿಳಾ ಸಬಲೀಕರಣಕ್ಕೆ ಕಾರಣರಾದರು.

ಆಹಾರ ಸುರಕ್ಷತೆಯ ಯೋಜನೆ, ಬಡವರಿಗೆ ಮನೆ, ಜನ್‌ಧನ್ ಯೋಜನೆ, ಆರೋಗ್ಯ ಯೋಜನೆ ಮುಂತಾದ ಹಲವಾರು ಯೋಜನೆಗಳನ್ನು ಕಾರ್ಯಗತ ಗೊಳಿಸಿ, ಬಡ ಭಾರತೀಯನಿಗೂ ಬ್ಯಾಂಕ್‌ಗಳಲ್ಲಿ ಖಾತೆ ಹೊಂದುವಂತೆ ಮಾಡಿದರು. ದೇಶದಲ್ಲಿ ಭ್ರಷ್ಟಾಚಾರವನ್ನು ತಡೆಹಿಡಿದರು. ಒಟ್ಟಿನಲ್ಲಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡುವಲ್ಲಿ ಜಯಶೀಲರಾಗುತ್ತಿರುವ ನಮ್ಮ ಪ್ರಧಾನಿ ನಮ್ಮ ಹೆಮ್ಮೆ! ಬಲಿಷ್ಠ ಭಾರತವನ್ನು ಕಟ್ಟುವ, ಭಾರತವನ್ನು ಸೂಪರ್ ಪವರ್ ಮಾಡುವ ಮೋದಿಯವರ ಕನಸು ಈಗ ಸಾಕಾರಗೊಳ್ಳುತ್ತಿದೆ.

ನಮ್ಮ ಹಿರಿತನವನ್ನು ಈಗ ಜಗತ್ತೇ ಒಪ್ಪಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಜಾಗತಿಕವಾಗಿ ಇದ್ದ ಕೀಳರಿಮೆ, ಅವಲಂಬನೆ ಇತಿ ಹಾಸವಾಗಿ ಮಾತ್ರ ಉಳಿದಿದೆ. ಕೆಲ ವರ್ಷಗಳ ಹಿಂದೆ ಭಾರತ ಹೇಗಿತ್ತು, ಈಗ ಹೇಗಿದೆ ಮುಂದೆಯೂ ಮೋದಿಯವರೇ ಮುಂದುವರೆದರೆ ಇನ್ನೆಷ್ಟು ಸದೃಢ, ಸುರಕ್ಷಿತ, ಸ್ವಾವಲಂಬಿ
ದೇಶವಾಗುವುದೆಂಬ ಕಲ್ಪನೆ ಈಗ ಬಹುತೇಕ ಭಾರತೀಯರಲ್ಲಿ ಮೂಡುತ್ತಿದೆ. ಆದುದರಿಂದಲೇ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾ ಬೇಕೆನ್ನುವವರ ಆಶಯ ದೇಶದ ಹಿತದೃಷ್ಟಿಯಿಂದ ಒಂದು ಸದಾಶಯವೇ ಹೌದು.