Saturday, 23rd November 2024

ಭಾರತೀಯ ವೃತ್ತಿಪರರ ಗ್ರೀನ್‌ ಕಾರ್ಡ್‌ ಅವಧಿ 18 ತಿಂಗಳು ವಿಸ್ತರಣೆ

ವಾಷಿಂಗ್ಟನ್‌ : ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವೃತ್ತಿಪರರಿಗೆ, ಗ್ರೀನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿರುವವರು, ಎಚ್‌-1 ಬಿ ವೀಸಾದಾರರ ಸಂಗಾತಿಗಳು ಸೇರಿದಂತೆ ಕೆಲವು ನಿರ್ದಿಷ್ಟ ಕೆಟಗರಿಯ ವಲಸಿಗರು ತಮ್ಮ ಉದ್ಯೋಗ ಪರವಾನಗಿ ಅವಧಿ ಮುಗಿ ದಿದ್ದರೂ, ಇನ್ನೂ 18 ತಿಂಗಳ ಕಾಲ ಅದನ್ನು ಬಳಸಲು ಬೈಡೆನ್‌ ಆಡಳಿತವು ಅನುಮತಿ ನೀಡಿದೆ.

ಮೇ 4ರಿಂದಲೇ ಈ ನಿಯಮ ಅನ್ವಯವಾಗಿದ್ದು, ಪರವಾನಗಿಯ ಅವಧಿಯು ಮತ್ತೆ 540 ದಿನಗಳವರೆಗೆ ಸ್ವಯಂಚಾಲಿತವಾಗಿ ವಿಸ್ತರಣೆಯಾಗಿದೆ ಎಂದು ಅಮೆರಿಕ ಗೃಹ ಇಲಾಖೆ ತಿಳಿಸಿದೆ.

ಈ ಹಿಂದೆ ಪರವಾನಗಿ ಅವಧಿಯನ್ನು 180 ದಿನಗಳಿಗೆ ವಿಸ್ತರಣೆ ಮಾಡಲಾಗಿತ್ತು. ಈಗ ಹೆಚ್ಚುವರಿ 18 ತಿಂಗಳ ಕಾಲಾವಕಾಶ ಸಿಕ್ಕಿರುವ ಕಾರಣ, ಇಲ್ಲಿರುವ ಉದ್ಯೋಗಿಗಳು ನಿರಾತಂಕವಾಗಿ ತಮ್ಮ ಉದ್ಯೋಗವನ್ನು ಮುಂದುವರಿಸಬಹುದು.