ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ganeshabhatv@gmail.com
ಭಾರತವು ಒಕ್ಕೂಟ ವ್ಯವಸ್ಥೆಯ ಆಡಳಿತವನ್ನು ಹೊಂದಿದ ದೇಶವಾಗಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ಸ್ಥಳೀಯ ಸರಕಾರಗಳು (ಮುನಿಸಿ
ಪಲ್ ಕಾರ್ಪೋರೇಶನ್/ ಪಂಚಾಯತ್) ಸಂವಿಧಾನವು ಹಾಕಿಕೊಟ್ಟ ಅಧಿಕಾರ ಹಾಗೂ ಮಿತಿಯ ಗೆರೆಯೊಳಗೆ ಸ್ವಾಯತ್ತ ಆಡಳಿತವನ್ನು ನಡೆಯಿ ಸುತ್ತಿವೆ.
ಕೇಂದ್ರ ಸರಕಾರಗಳು ಹಾಗೂ ರಾಜ್ಯ ಸರಕಾರಗಳಿಗೆ ಕಾನೂನನ್ನು ರೂಪಿಸುವ ಅಧಿಕಾರವಿದೆ. ರಕ್ಷಣಾ ವ್ಯವಹಾರ, ವಿದೇಶಾಂಗ ನೀತಿ, ಆರ್ಥಿಕ ನೀತಿ ನಿರೂಪಣೆ ಮೊದಲಾದ ವಿಚಾರಗಳು ಕೇಂದ್ರ ಸರಕಾರದ ಜವಾಬ್ದಾರಿಗಳಾದರೆ, ರಾಜ್ಯದ ಕಾನೂನು ಸುವ್ಯವಸ್ಥೆ, ಆರ್ಥಿಕತೆ, ಆರೋಗ್ಯ ಸುವ್ಯವಸ್ಥೆ, ನೀರಾವರಿ, ರಸ್ತೆ ಮೊದಲಾದ ವಿಷಯಗಳ ನಿರ್ವಹಣೆಯನ್ನು ರಾಜ್ಯ ಸರಕಾರಗಳು ಮಾಡುತ್ತವೆ. ಸ್ಥಳೀಯ ಅವಶ್ಯಕತೆಗಳಿಗೆ ಅನುಸಾರವಾಗಿ ಯೋಜ
ನೆಗಳನ್ನು ರೂಪಿಸಿ ಅವುಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸ್ಥಳೀಯಾಡಳಿತ ಸರಕಾರಗಳದ್ದಾಗಿವೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಶಾಸಕಾಂಗ ಸಂಬಂಧಗಳು ಭಾರತೀಯ ಸಂವಿಧಾನದ ೧೧ ನೇ ಅಧ್ಯಾಯದ ೨೪೫ ರಿಂದ ೨೫೫ ನೇ ವಿಧಿಗಳ ಮೇಲೆ ನಿರೂಪಿಸಲ್ಪಟ್ಟಿವೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಆಡಳಿತಾತ್ಮಕ ಸಂಬಂಧಗಳನ್ನು ಸಂವಿಧಾನದ ೧೧ ನೇ ಅಧ್ಯಾಯದ ೨೫೬ ಹಾಗೂ ೨೫೭ ನೇ ವಿಧಿಗಳ ಪ್ರಕಾರ ನಿರೂಪಿಸಲಾಗಿದೆ. ಸಂವಿಧಾನದ ೨೬೮ ರಿಂದ ೨೯೨ ರ ವರೆಗಿನ ವಿಧಿಗಳು ಕೇಂದ್ರ ಹಾಗೂ ರಾಜ್ಯಗಳ ನಡುವಿನ ಆರ್ಥಿಕ ಸಂಬಂಧಗಳಿಗೆ ರೂಪುರೇಷೆಗಳನ್ನು ಕೊಡುತ್ತದೆ.
ಒಟ್ಟಿನಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಘರ್ಷವಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಅಂತಹ ಸಂಘರ್ಷ ವೇರ್ಪಟ್ಟರೂ ಅದನ್ನು ನ್ಯಾಯಾಲಯಗಳ ಮುಖಾಂತರ ಪರಿಹರಿಸಿ ಕೊಳ್ಳುವ ಅವಕಾಶವೂ ಇದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಮೇಲೆ ತನ್ನ ನೀತಿಗಳನ್ನು ಹೇರುತ್ತಿದೆ, ಸಾಂವಿಧಾನಿಕ ಸಂಸ್ಥೆಗಳನ್ನು ಬಲಹೀನಗೊಳಿಸಲಾಗುತ್ತಿದೆ, ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆಯು ಅಪಾಯದಲ್ಲಿದೆ ಎಂದೆ ರೀತಿಯ ಆರೋಪಗಳನ್ನು ಕೆಲವು ರಾಜಕೀಯ ಪಕ್ಷಗಳು ಮಾಡುತ್ತಿವೆ. ಒಂದು ಬಾರಿ ಶಿವಸೇನೆಯ ಸಂಸದ ಹಾಗೂ ವಕ್ತಾರ ಸಂಜಯ್ ರಾವತ್ ಭಾರತ ದೇಶವೂ ಸೋವಿಯತ್ ರಷ್ಯಾದಂತೆ ನುಚ್ಚುನೂರಾಗಲಿದೆ ಎಂದು ಶಿವಸೇನೆಯ ಮುಖವಾಣಿ ಪತ್ರಿಕೆಯ ಮೂಲಕ ಹೇಳಿಕೆಯನ್ನು ಕೊಟ್ಟಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರವು ಪಶ್ಚಿಮ ಬಂಗಾಲದಲ್ಲಿ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಅನ್ನು ನೇಮಕಾತಿ ಮಾಡಿರುವುದರ ವಿರುದ್ಧವಾಗಿ ಮಾತನಾಡಿ ಕೇಂದ್ರ ಸರಕಾರವು ಪಶ್ಚಿಮ ಬಂಗಾಲ ರಾಜ್ಯದ ಆಂತರಿಕ ವ್ಯವಹಾರ ಗಳಲ್ಲಿ ತಲೆತೂರಿಸುತ್ತಿದೆ ಎಂದು ಆರೋಪ ಮಾಡುತ್ತಾರೆ. ಕಳೆದ ವರ್ಷ ಪಶ್ಚಿಮ ಬಂಗಾಲದಲ್ಲಿ ಸಂಭವಿಸಿದ ಚಂಡಮಾರುತ ಹಾನಿಯನ್ನು ವೀಕ್ಷಿಸಲು ಪಶ್ಚಿಮ ಬಂಗಾಲಕ್ಕೆ ಆಗಮಿಸಿ ಪರಿಹಾರೋಪಾಯಕ್ಕಾಗಿ ಕರೆದಿದ್ದ ಸಮನ್ವಯ ಸಭೆಯಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಲೇ ಇಲ್ಲ!
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರಂತೂ ದಿನಬೆಳಗಾದರೆ ದೇಶದ ಬಗ್ಗೆ ಉತ್ಪ್ರೇಕ್ಷಿತ ನಕಾರಾತ್ಮಕ ವಿಚಾರಗಳನ್ನು ಪ್ರಸ್ತಾಪಿಸುತ್ತಲೇ ಇರುತ್ತಾರೆ. ಭಾರತ ದಲ್ಲೀಗ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ, ಭಾರತದಲ್ಲಿ ಪ್ರಜಾಪ್ರಭುತ್ವ ಇದೆಯೆನ್ನುವುದು ಕೇವಲ ಭ್ರಮೆ ಎಂದು ಹೇಳುವ ಮಟ್ಟಕ್ಕೆ ತಲುಪಿzರೆ ರಾಹುಲ್. ರಾಹುಲ್ ಗಾಂಧಿ ಇತ್ತೀಚೆಗೆ ನೇಪಾಳದಲ್ಲಿ ನಡೆದ ಮದುವೆ ಪಾರ್ಟಿಯಲ್ಲಿ ಭಾಗವಹಿಸಿದ ವೀಡಿಯೋ ವೈರಲ್ ಆಗಿತ್ತು. ಸದಾ ಭಾರತ ವಿರೋಧಿ ಧೋರಣೆಯನ್ನು ವ್ಯಕ್ತಪಡಿಸುತ್ತಿರುವ ನೇಪಾಳದ ಗೆಳತಿ ಅಸುಮ್ನಿನಾ ಉದಾಸ್ನ ವಿವಾಹದಲ್ಲಿ ಭಾಗವಹಿಸಿರುವ ರಾಹುಲ್ ಗಾಂಧಿಯವರ ನಡೆಯೇ ಸಂಶಯ ಮೂಡಿಸುವಂತಿದೆ.
ಕಳೆದ ವರ್ಷ ನೇಪಾಳದ ಪ್ರಧಾನಿಯಾಗಿದ್ದ ಕೆ.ಪಿ.ಶರ್ಮಾ ಓಲಿ ಉತ್ತರಾಖಂಡದ ಕೆಲವು ಭಾಗಗಳನ್ನು ನೇಪಾಳದ ನಕ್ಷೆಯ ಒಳಗೆ ಸೇರಿಸಿ ಬಿಡುಗಡೆ ಮಾಡಿದ ಮ್ಯಾಪ್ ಅನ್ನು ಈ ಸುಮ್ನಿನಾ ಸಮರ್ಥಿಸಿಕೊಂಡಿದ್ದಳು. ಭಾರತದ ಸಿಎಎ ಹಾಗೂ ಎನ್ಆರ್ಸಿಗಳನ್ನು ಸುಮ್ನಿನಾಳ ತಂದೆ ಭೀಮ್ ಉದಾಸಿ ಟೀಕಿಸಿದ್ದರು. ಕೇಂದ್ರ ಸರಕಾರವು ದೇಶೀಯ ಕಂಪನಿಯಾದ ಭಾರತ್ ಬಯೋಟೆಕ್ ಹಾಗೂ ಐಸಿಎಂಆರ್ ಜತೆಯಾಗಿ ತಯಾರಿಸಿರುವ ಕರೋನಾ ವಿರುದ್ಧದ ವ್ಯಾಕ್ಸಿನ್, ಕೋವ್ಯಾ ಕ್ಸಿನ್ ನ ತುರ್ತು ಸಂದರ್ಭದ ಬಳಕೆಗೆ ಅನುಮತಿಯನ್ನು ಕೊಟ್ಟಿರುವುದನ್ನು ಆಕ್ಷೇಪಿಸಿದ್ದ ರಾಹುಲ್ ಗಾಂಧಿ ಹಾಗೂ ಅವರ ಪಕ್ಷದ ನಾಯಕರಾದ ಶಶಿ ತರೂರ್ ಹಾಗೂ ಜೈರಾಮ್ ರಮೇಶ್ ಕೋವ್ಯಾಕ್ಸಿನ್ನ ದಕ್ಷತೆಯನ್ನೇ ಪ್ರಶ್ನಿಸಿದ್ದರು!
ಉತ್ತರಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತಾನು ಬಿಜೆಪಿ ಸರಕಾರವು ಬಿಡುಗಡೆ ಮಾಡಿರುವ ವ್ಯಾಕ್ಸಿನ್ ಅನ್ನು ಸ್ವೀಕರಿ ಸುವುದಿಲ್ಲ ಎಂದಿದ್ದರು! ನಂತರ ಅವರು ಗುಟ್ಟಾಗಿ ವ್ಯಾಕ್ಸಿನ್ ಅನ್ನು ತೆಗೆದುಕೊಂಡಿದ್ದರು ಅನ್ನುವುದು ಬೇರೆ ವಿಷಯ. ಕೇಂದ್ರ ಸರಕಾರ ಹಾಗೂ ದೆಹಲಿಯ ಲೆಫ್ಟಿನೆಂಟ್ ಜನರಲ್ಗಳು ದೆಹಲಿ ರಾಜ್ಯ ಸರಕಾರವನ್ನು ಸರಿಯಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸದಾ ಆರೋಪ ಮಾಡುತ್ತಿರುತ್ತಾರೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ. ಕರೋನಾ ಎರಡನೆಯ ಅಲೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಸಾಕಷ್ಟು ಆಕ್ಸಿಜನ್ ಸಂಗ್ರಹ ವಿದ್ದರೂ, ಆಕ್ಸಿಜನ್ ಕೊರತೆಯಿದೆ, ಕೇಂದ್ರ ಸರಕಾರವು ಆಕ್ಸಿಜನ್ ಪೂರೈಸುತ್ತಿಲ್ಲ ಎಂದು ಸುಳ್ಳು ಹೇಳಿದ್ದರು ಕೇಜ್ರಿವಾಲ್.
ಕೊನೆಗೆ ಸುಪ್ರೀಂ ಕೋರ್ಟ್ ದೆಹಲಿಯ ಆಕ್ಸಿಜನ್ ಆಡಿಟ್ ಮಾಡಲು ಆದೇಶಿಸಿದಾಗ ತಮ್ಮಲ್ಲಿ ಸಾಕಷ್ಟು ಆಕ್ಸಿಜನ್ ಇದೆ ಎಂಬುದನ್ನು ಒಪ್ಪಿಕೊಂಡಿದ್ದರು
ಕೇಜ್ರಿವಾಲ್. ಕಳೆದ ವರ್ಷ ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಕರೋನಾ ಸಮನ್ವಯನ್ನು ನಡೆಸುತ್ತಿದ್ದಾಗ ಕೇಜ್ರಿವಾಲ್ ಸಭಾ ನಿಯಮಕ್ಕೆ ವಿರುದ್ಧವಾಗಿ ಸಭೆಯ ಲೈವ್ ವೀಡಿಯೋವನ್ನು ವಿವಿಧ ಟಿವಿ ಚಾನೆಲ್ ಗಳಲ್ಲಿ ಪ್ರಸಾರಗೊಳ್ಳುವಂತೆ ಮಾಡಿದ್ದರು. ನರೇಂ ದ್ರ ಮೋದಿ ಕೇಜ್ರಿವಾಲ್ ನಡೆಯನ್ನು ಆಕ್ಷೇಪಿಸಿದಾಗ ಕೊನೆಗೆ ಕೇಜ್ರಿವಾಲ್ ಕ್ಷಮೆಯನ್ನು ಕೇಳಿದ್ದರು.
ಇತ್ತೀಚೆಗೆ ಪ್ರಧಾನಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಯುತ್ತಿರುವ ಸಂದರ್ಭದಲ್ಲೂ ಕೇಜ್ರಿವಾಲ್ ಕೈಗಳನ್ನು ಆಗಾಗ ಮೇಲೆ ಕೆಳಗೆ ಚಾಚುತ್ತಾ, ಪದೇ ಪದೇ ಆಕಳಿಸಿ ಸಭೆಯ ಸಭ್ಯತೆಗೆ ಚ್ಯುತಿಯನ್ನು ತಂದಿದ್ದರು. ಇತ್ತಿಚೆಗೆ ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದಿರುವ ಆಪ್ ಸರಕಾರವು ನಿಷೇಽತ ಭಯೋತ್ಪಾದನಾ ಸಂಸ್ಥೆಯಾದ ಖಾಲಿಸ್ತಾನದ ಬೆಂಬಲಿಗರ ಕುರಿತಾಗಿ ಮೃದು ಧೋರಣೆಯನ್ನು ಪಾಲಿಸುತ್ತಿದೆ.
ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳ ಮೂಲಕ ಕೇರಳ ಸರಕಾರವನ್ನು ಬಲಹೀನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೇರಳದ ಮುಖ್ಯ ಮಂತ್ರಿ ಪಿಣ
ರಾಯಿ ವಿಜಯನ್ ಹೇಳಿಕೆ ಕೊಡುತ್ತಿರುತ್ತಾರೆ. ಡ್ರಗ್ ಪ್ರಕರಣ, ಚಿನ್ನದ ಅಕ್ರಮ ಸಾಗಣಿಕೆ ಪ್ರಕರಣಗಳನ್ನು ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ವಿಚಾರಿಸುತ್ತಿರುವುದು ವಿಜಯನ್ನ ಕಣ್ಣು ಕೆಂಪಾಗಿಸಿದೆ. ಕೇರಳದಲ್ಲಿ ನಡೆದ ಚಿನ್ನಕಳ್ಳ ಸಾಗಾಣಿಕೆಯ ಪ್ರಕರಣದ ತನಿಖೆ ನಡೆಯಿಸಿರುವುದು, ದೇಶದ ವಿವಿಧ ಭಾಗಗಳಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣ, ಭೂಹಗರಣ ಹಾಗೂ ಆರ್ಥಿಕ ಅವ್ಯವಹಾರಗಳ ತನಿಖೆ ನಡೆಯಿಸುವುದನ್ನು ರಾಜ್ಯಗಳ ಆಂತರಿಕ ವಿಷಯಗಳ ಮೇಲಿನ ಹಸ್ತಕ್ಷೇಪ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ.
ಕೆಲವು ರಾಜ್ಯ ಸರಕಾರಗಳು ಕೇಂದ್ರದ ಯೋಜನೆಗಳನ್ನು ಧಿಕ್ಕರಿಸುತ್ತಿವೆ. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಹುಮತದಿಂದ ಅನುಮೋದನೆ ಗೊಂಡ ಕಾಯಿದೆಗಳನ್ನೂ ತಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿವೆ. ಪೆಟ್ರೋಲ್ ಡೀಸೆಲ್ ಗಳ ಮೇಲೆ ರಾಜ್ಯಸರಕಾರಗಳು ವಿಧಿಸಿ ರುವ ತೆರಿಗೆ ಯನ್ನು ಕಡಿತಗೊಳಿಸಬೇಕು ಎಂದು ಪ್ರಧಾನಿಗಳು ಮಾಡಿಕೊಂಡ ಮನವಿಯನ್ನು ಮಹಾರಾಷ್ಟ್ರ, ರಾಜಸ್ಥಾನ್, ಛತ್ತೀಸ್ ಗಡ್, ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳು ತಿರಸ್ಕರಿಸಿವೆ.
ಕೇಂದ್ರ ಸರಕಾರವು ರೈತರ ಹಿತಾಸಕ್ತಿಯಿಂದ ಜಾರಿಗೊಳಿಸಿರುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವು ಇನ್ನೂ ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ನಿಧಾನಿಸಿದುದರ ಪರಿಣಾಮವಾಗಿ ಆ ರಾಜ್ಯದ ಸುಮಾರು ೭೦ ಲಕ್ಷ ಸಂಖ್ಯೆಯ ರೈತರಿಗೆ ವಾರ್ಷಿಕವಾಗಿ ಸಿಗುವ ತಲಾ ೬ ಸಾವಿರ ರುಪಾಯಿಗಳು ತಪ್ಪಿ ಹೋಗಿ ಪಶ್ಚಿಮ ಬಂಗಾಲದ ರೈತರಿಗೆ ಒಟ್ಟಾಗಿ ಸುಮಾರು ೪೨೦೦ ಕೋಟಿ ರುಪಾಯಿಗಳಷ್ಟು ನಷ್ಟವಾಗಿತ್ತು. ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗುವ ಈ ಯೋಜನೆಯು ತನ್ನ ರಾಜ್ಯ ಸರಕಾರದ ಮೂಲಕ ಸಂದಾಯವಾಗಬೇಕು ಎನ್ನುವುದು ಮಮತಾ ಹಠವಾಗಿತ್ತು.
ಬಡವರಿಗೆ ವಾರ್ಷಿಕವಾಗಿ ರುಪಾಯಿ ಐದು ಲಕ್ಷದವರೆಗಿನ ಉಚಿತ ಚಿಕಿತ್ಸೆ ನೀಡುವ ಪ್ರಧಾನ್ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯ ಕ್ರೆಡಿಟ್ ಅನ್ನು ಪ್ರಧಾನ ಮಂತ್ರಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಮಮತಾ ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಯು ಜಾರಿಯಾಗುವುದನ್ನು ತಡೆಹಿಡಿದಿದ್ದಾರೆ. ಇದೇ ರೀತಿ ಕೇಂದ್ರದ ಬಹುತೇಕ ಯೋಜನೆಗಳನ್ನು ಪಶ್ಚಿಮ ಬಂಗಾಳದಲ್ಲಿ ಹೆಸರು ಬದಲಿಸಿ ಜಾರಿ ಮಾಡಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಅಲ್ಲಿ ಬಾಂಗ್ಲಾರ್ ಗ್ರಾಮೀಣ್ ಸಡಕ್ ಯೋಜನ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು ಬಾಂಗ್ಲಾರ್ ಗೃಹ ಪ್ರಕಲ್ಪ, ಬೇಟಿ ಬಚಾವೋ, ಬೇಟೀ ಪಡಾವೋ ಯೋಜನೆಯನ್ನು ಕನ್ಯಾಶ್ರೀ ಎಂದೂ ಬದಲಿಸಲಾಗಿದೆ.
ವಿಪಕ್ಷಗಳು ಆಡಳಿತ ನಡೆಯಿಸುತ್ತಿರುವ ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಛತ್ತೀಸ್ಗಢ, ಝಾರ್ಖಂಡ್, ತೆಲಂಗಾಣ ಹಾಗೂ ಪಂಜಾಬ್
ರಾಜ್ಯಗಳು ಸಿಬಿಐ ತನಿಖೆಯ ಸಾಮಾನ್ಯ ಸಮ್ಮತಿಯನ್ನು ರದ್ದುಪಡಿಸಿಕೊಂಡಿವೆ. ಸಿಬಿಐ ತನಿಖಾ ಸಂಸ್ಥೆಯ ಮೇಲಿನ ಅಪನಂಬಿಕೆಯೇ ಈ ರಾಜ್ಯಗಳ
ಈ ನಡೆಯ ಹಿಂದಿರುವ ಕಾರಣವಾಗಿದೆ. ಆದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದ ಆಧಾರದಲ್ಲಿ ನಡೆಯುವ ಸಿಬಿಐ ತನಿಖೆಯನ್ನು ನಿರ್ಬಂಽಸುವ ಹಕ್ಕು ರಾಜ್ಯಗಳಿಗೆ ಇಲ್ಲ.
ರಾಜ್ಯಸರಕಾರಗಳು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಕೆಲಸಮಾಡುತ್ತಿರುವುದಕ್ಕೆ ಇನ್ನೊಂದು ಉದಾಹರಣೆ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ
ವಿಚಾರಣೆಗೆ ಬಂದ ಬಿಹಾರದ ಪೋಲಿಸ್ ಅಧಿಕಾರಿಯನ್ನು ಮಹಾರಾಷ್ಟ್ರ ಸರಕಾರ ನಡೆಯಿಸಿಕೊಂಡ ರೀತಿ. ಸುಶಾಂತ್ ಸಿಂಗ್ನ ಅನುಮಾನಾಸ್ಪದ ಸಾವಿನ ತನಿಖೆ ನಡೆಯಿಸಲು ೨೦೨೦ ರ ಆಗ ೨ ರಂದು ಬಿಹಾರದ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಮುಂಬಯಿಗೆ ವಿಮಾನದ ಮೂಲಕ ಬಂದಿಳಿದಾಗ ಕರೋನಾ ನೆಪವೊಡ್ಡಿ ಬೃಹತ್ ಮುಂಬೈ ಕಾರ್ಪೋರೇಶನ್ನ ಅಧಿಕಾರಿಗಳು ಐಪಿಎಸ್ ತಿವಾರಿಯವರನ್ನು ಬಲವಂತವಾಗಿ ಕ್ವಾರಂಟೈನ್ನಲ್ಲಿ ಇಟ್ಟರು.
ತಿವಾರಿ ಅವರ ಸುಶಾಂತ್ ಸಾವಿನ ತನಿಖೆಯನ್ನು ತಡೆಗಟ್ಟುವುದೇ ಮಹಾರಾಷ್ಟ್ರ ಸರಕಾರದ ಈ ನಡೆಯ ಹಿಂದಿನ ಕಾರಣವಾಗಿತ್ತು. ಮಹಾರಾಷ್ಟ್ರ ಸರಕಾರದ ಈ ವರ್ತನೆ ಒಕ್ಕೂಟ ವ್ಯವಸ್ಥೆಗೆ ಭೂಷಣವೇ? ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಹಿನ್ನಡೆಗೆ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನು ಟೀಕಿಸಲೂ ಹಿಂಜರಿಯಲಿಲ್ಲ. ಕಳೆದ ಆರೇಳು ವರ್ಷಗಳಲ್ಲಿ ಚುನಾವಣೆಗಳನ್ನು ಸೋತ ರಾಜಕೀಯ ಪಕ್ಷಗಳು ಎಲೆಕ್ಟ್ರಾನಿಕ್ ವೋಟಿಂಗ್ ಮಶೀನ್ಗಳ ದುರ್ಬಳಕೆಯಾಗಿದೆ ಎಂದು ಆರೋಪಿಸು ವುದು ಸರ್ವೇ ಸಾಮಾನ್ಯವಾಗಿದೆ. ಇವಿಎಂ ಎಂದರೆ ಎವೆರಿ ವೋಟ್ ಫಾರ್ ಮೋದಿ ಎಂದು ರಾಹುಲ್ ಗಾಂಧಿಯವರು ಬಹಳಷ್ಟು ಬಾರಿ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷವು ಮತಯಂತ್ರವನ್ನು ದುರ್ಬಳಕೆ ಮಾಡಿ ಕೊಂಡು ಚುನಾವಣೆಗಳನ್ನು ಗೆಲ್ಲುತ್ತಿದೆ ಎನ್ನುವುದು ಇವರೆಲ್ಲರ ಆರೋಪ. ಆದರೆ ಚುನಾವಣಾ ಆಯೋಗವು ಇವಿ ಎಂಗಳನ್ನು ಭೇದಿಸಲು ಸವಾಲನ್ನು ಹಾಕಿ ಅವಕಾಶವನ್ನು ಕೊಟ್ಟಾಗ ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಇವಿಎಂ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ್ಲ. ವಿವಿಪ್ಯಾಟ್ ಅನ್ನು ಅಳವಡಿಸಿದರೂ ಪ್ರತಿಪಕ್ಷಗಳ ಆರೋಪ ನಿಂತಿಲ್ಲ. ಇಲೆಕ್ಟ್ರಾನಿಕ್ ವೋಟಿಂಗ್ ಮತ ಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ವೋಟಿಂಗ್ ಮಾಡಬೇಕೆಂದು ಕಾಂಗ್ರೆಸ್ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿದ್ದವು. ಆದರೆ ೨೦೨೦ ರಲ್ಲಿ ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್ನ ಚುನಾವಣೆಗಳು ಕರೋನಾ ಕಾರಣದಿಂದ ಬ್ಯಾಲೆಟ್ ಪೇಪರ್ ಮುಖಾಂತರ ನಡೆದಿದ್ದು ಈ ಚುನಾವಣೆಯಲ್ಲೂ ಭಾರತೀಯ ಜನತಾ ಪಕ್ಷವು ಭಾರೀ ಮುನ್ನಡೆಯನ್ನು ಸಾಧಿಸಿರುವುದು,
ಮತ ಯಂತ್ರ ದುರ್ಬಳಕೆಯ ಆರೋಪವನ್ನು ನಿರಾಧಾರಗೊಳಿಸಿದೆ.
ಇದೇ ರೀತಿ ಬಂಗಾಲ ಚುನಾವಣೆಯನ್ನು ಟಿಎಂಸಿ, ಕೇರಳವನ್ನು ಕಮ್ಯುನಿ ಪಕ್ಷ ಹಾಗೂ ಇತ್ತೀಚೆಗೆ ಪಂಜಾಬ್ ಅನ್ನು ಆಮ್ ಆದ್ಮಿ ಪಾರ್ಟಿ ಗೆದ್ದಿದ್ದು ಇದೇ ಇವಿಎಂಗಳ ಮೂಲಕವೇ! ರಾಮಮಂದಿರ ನಿರ್ಮಾಣದ ಪರವಾಗಿ ತೀರ್ಪು ಕೊಟ್ಟದ್ದಕ್ಕೆ, ರಫೆಲ್ ಯುದ್ಧ ವಿಮಾನ ಖರೀದಿಯ ವಿಷಯದಲ್ಲಿ ಸರಕಾರವು ಪಾರ್ದರ್ಶಕವಾಗಿದೆ ಎಂದು ತೀರ್ಪುಕೊಟ್ಟದ್ದಕ್ಕೆ ಸುಪ್ರೀಂ ಕೋರ್ಟ್ ಅನ್ನೇ ಸರಕಾರದ ಕೈಗೊಂಬೆ ಎಂದು ತೆಗಳುವ ರಾಜಕೀಯ
ನಾಯಕರು ನಮ್ಮ ನಡುವೆ ಇzರೆ. ದೇಶವಿರೋಧಿ ಘೋಷಣೆಗಳನ್ನು ಕೂಗುವ ದೇಶದ್ರೋಹಿ ಶಕ್ತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬೆಂಬಲ ವನ್ನು ಕೊಡುವ ದೊಡ್ಡ ತಂಡವೇ ನಮ್ಮ ದೇಶದಲ್ಲಿದೆ.
ದೇಶದ ಮೂಲೆಮೂಲೆಗಳಲ್ಲಿ ರಕ್ತಪಾತವನ್ನು ನಡೆಸುತ್ತಿರುವ ನಕ್ಸಲಿಯರನ್ನು ಬೆಂಬಲಿಸುವ ವಿಚಾರವಾದಿಗಳು ನಮ್ಮ ಕಣ್ಣಮುಂದಿದ್ದಾರೆ. ಕಾಶ್ಮೀರವು ಯಾವತ್ತೂ ಭಾರತದ ಭಾಗವಾಗಿರಲಿಲ್ಲ ಎಂದು ಹೇಳಿಕೆ ನೀಡಿ ಪ್ರತ್ಯೇಕತಾವಾದಿಗಳು ಹಾಗೂ ಪಾಕಿಸ್ತಾನಿ ಉಗ್ರವಾದಿಗಳ ಕೃತ್ಯಗಳನ್ನು ಸಮರ್ಥಿಸುವ ಅರುಂಧತಿ ರಾಯ್ನಂತವರು ಇಲ್ಲಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಆಗಿಲ್ಲ, ವಿರೋಧ ಪಕ್ಷಗಳು ಆಳ್ವಿಕೆ ನಡೆಯಿಸುತ್ತಿರುವ ರಾಜ್ಯ ಸರಕಾರಗಳನ್ನು ಕೇಂದ್ರ ಸರಕಾರವು ವಿಸರ್ಜಿಸಿಲ್ಲ, ವಿರೋಧ ಪಕ್ಷಗಳ ನಾಯಕರನ್ನು ಮೀಸಾ ಕಾಯ್ದೆಯಡಿ ಜೈಲಿ ಗಟ್ಟಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿಲ್ಲ, ಆದರೂ ಕೇಂದ್ರವು ಒಕ್ಕೂಟ ವ್ಯವಸ್ಥೆಯನ್ನು ಉಲ್ಲಂಘಿಸುತ್ತಿದೆ ಎನ್ನುವ ಆರೋಪ ಮಾತ್ರ ನಿಂತಿಲ್ಲ