Saturday, 23rd November 2024

ಆರ್‌ಸಿಬಿ ಸಾಂಘಿತ ಪ್ರದರ್ಶನ, ಸನ್‌ರೈಸರ‍್ಸ್’ಗೆ ಸೋಲು

ಮುಂಬೈ: ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಅಗತ್ಯವಾದ ಆಟ ಪ್ರದರ್ಶಿಸಿದ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡ ಐಪಿಎಲ್‌ನ ೫೪ನೇ ಪಂದ್ಯದಲ್ಲಿ ಸನ್‌ರೈಸರ‍್ಸ್ ಹೈದರಾಬಾದ್‌ ತಂಡವನ್ನು ನಿರಾಯಾಸವಾಗಿ ಸೋಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಬೆಂಗಳೂರು ತಂಡಕ್ಕೆ ಆರಂಭ ದಲ್ಲೇ ಆಘಾತ. ವಿರಾಟ್‌ ಕೊಹ್ಲಿ ಮೊದಲ ಎಸೆತಕ್ಕೆ ಔಟಾದರು. ಆದರೆ, ಈ ಆಘಾತದಿಂದ ಬೇಗನೇ ಚೇತರಿಸಿಕೊಂಡಿತು. ನಾಯಕ ಫಾಫ್‌ ಡು ಪ್ಲೆಸಿಸ್ ಹಾಗೂ ಮೂರನೇ ಕ್ರಮಾಂಕದಲ್ಲಿ ಆಡಿದ ರಜತ್‌ ಪಾಟೀದಾರ್‌ ಎರಡನೇ ವಿಕೆಟ್ ಜತೆಯಾಟದಲ್ಲಿ ೧೦೫ ರನ್ನುಗಳ ಜತೆಯಾಟ ನೀಡಿದರು.ಬಳಿಕ ಮ್ಯಾಕ್ಸ್ವೆಲ್‌ ೩೩ ರನ್‌ ಬಾರಿಸಿದರು.

ಆದರೆ, ತಂಡದ ಮೊತ್ತ ೧೯೦ ದಾಟಲು ನೆರವಾಗಿದ್ದು, ವಿಕೆಟ್‌ ಕೀಪರ್‌ ದಿನೇಶ್ ಕಾರ್ತಿಕ್ ಅವರು ಕೊನೆಯ ಓವರಿನಲ್ಲಿ ಆಡಿದ ಸ್ಪೋಟಕ ಆಟ. ನಾಲ್ಕು ಸಿಕ್ಸರ್‌ ಹಾಗೂ ಒಂದು ಬೌಂಡರಿ ನೆರವಿನಿಂದ ಕೇವಲ ಎಂಟು ಎಸೆತದಲ್ಲಿ ೩೦ ರನ್‌ ಬಾರಿಸಿದರು. ಈ ಮೂಲಕ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್ ಸಿಬಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳನ್ನು ಪೇರಿಸಿತ್ತು.

ಬೆಂಗಳೂರು ನೀಡಿದ 193 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ 125 ರನ್ ಗಳಗೆ ಆಲೌಟ್ ಆಗಿದೆ.

ಆರ್ ಸಿಬಿ ಪರ ಫಾಫ್ ಡುಪ್ಲೆಸಿಸ್ ಅಜೇಯ 73, ರಜತ್ ಪಾಟಿದಾರ್ 48, ಗ್ಲೇನ್ ಮ್ಯಾಕ್ಸ್ ವೆಲ್ 33, ದಿನೇಶ್ ಕಾರ್ತಿಕ್ ಅಜೇಯ 30 ರನ್ ಗಳಿಸಿದರು. ಸನ್ ರೈಸರ್ಸ್ ಹೈದರಾಬಾದ್ ಪರ ರಾಹುಲ್ ತ್ರಿಪಾಠಿ 58, ಮಾರ್ಕ್ರಾಮ್ 21, ನಿಕೋಲಸ್ ಪೂರನ್ 19 ರನ್ ಬಾರಿಸಿದ್ದಾರೆ. ಆರ್ ಸಿಬಿ ಪರ ವನಿಂದು ಹಸರಂಗ 5, ಹೆಜಲ್ವುಡ್ 2, ಮ್ಯಾಕ್ಸ್ ವೆಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಸನ್‌ರೈಸರ‍್ಸ್ ಹೈದರಾಬಾದ್‌ ತಂಡದ ಇನ್ನಿಂಗ್ಸ್ ಅಂತ್ಯಕ್ಕೆ ವೇಗಿ ಹ್ಯಾಜಲ್‌ವುಡ್‌ ಹಾಗೂ ಸ್ಪಿನ್ನರ್‌ ವನಿಂದು ಹಸರಂಗ ಅವರ ಸ್ಪೆಲ್‌ ಕಾರಣವಾಯಿತು. ಹಸರಂಗ ೧೮ ರನ್ನಿಗೆ ಐದು ವಿಕೆಟ್‌ ಕಿತ್ತರೆ, ಹ್ಯಾಜಲ್‌ವುಡ್‌ ಎರಡು ವಿಕೆಟ್‌ ಕಬಳಿಸಿದರು.