Saturday, 26th October 2024

ಸೀಜ್ ಮಾಡಿದ ವಾಹನಗಳನ್ನು ಮೇ.3ರವರೆಗೆ ಹಿಂದಿರುಗಿಸುವುದಿಲ್ಲ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:

ಲಾಕ್​​​ಡೌನ್ ಆದೇಶ ಉಲ್ಲಂಘಿಸಿ
ವಿನಾ ಕಾರಣ ಓಡಾಟ ಮಾಡುವ ವಾಹನಗಳನ್ನ ಜಪ್ತಿ ಮಾಡಿದ್ದ ಪೊಲೀಸರು ಏ. ೧೪ ರ ನಂತರ ಹಿಂದಿರುಗಿಸುವುದ್ದಾಗಿ ವಾಹನ ಸವಾರರಿಗೆ ಹೇಳಿದ್ದರು. ಆದರೆ ಮೇ ೩ ರ ವರೆಗೆ ನೀಡಲು ಸಾಧ್ಯವಾಗುವುದಿಲ್ಲ.
ಲಾಕ್​​​​​​​ಡೌನ್ ಏ.೧೪ ಕ್ಕೆ ಮುಕ್ತಾಯವಾಗುತ್ತದೆ ಎಂಬ ಗುಂಗಿನಲ್ಲಿ ವಾಹನ ಸವಾರರು ಇದ್ದರು. ಆದರೆ, ಪ್ರಧಾನಿ ಮೋದಿ ಲಾಕ್ ಡೌನ್ ಮುಂದುವರೆಸಿದ ಕಾರಣ ವಾಹನ ಮಾಲೀಕರಿಗೆ ಬಿಗ್ ಶಾಕ್ ಆಗಿದೆ. ಈಗ ಲಾಕ್ ಡೌನ್ ಮುಂದುವರೆದಿದ್ದು, ಸೀಜ್ ಮಾಡಿದ ವಾಹನಗಳು ಸದ್ಯಕ್ಕೆ ಸಿಗಲ್ಲ ಎಂಬುದು ಸ್ಪಷ್ಟವಾಗಿದೆ.

ನಗರದಲ್ಲಿ ಈಗಾಗಲೇ 29,500 ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಅದರಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕಾರುಗಳು‌ ಇವೆ. ಸೀಜ್ ಆಗಿರುವ ವಾಹನಗಳ ಪೈಕಿ ಸುಮಾರು 10 ಸಾವಿರ ವಾಹನಗಳಿಗೆ ದಾಖಲೆಗಳೇ ಇಲ್ಲ. ಈಗ ದಾಖಲೆಗಳು ಇಲ್ಲದೇ ಇರುವ ವಾಹನಗಳು ಮಾಲಿಕರ ಕೈಗೆ ಸೇರುವುದೇ ಡೌಟ್ ಆಗಿದೆ.ಏಕೆಂದರೆ ಪೊಲಿಸರು 29,500 ವಾಹನಗಳ ಮೇಲೆ NDMA ರಾಷ್ಟ್ರೀಯ ವಿಪತ್ತು ನಿರ್ವಹಣಾ ಆ್ಯಕ್ಟ್ ಹಾಗೂ 96 ಕರ್ನಾಟಕ ಪೊಲೀಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.

ಒಂದು ವೇಳೆ, ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರೆ, ಗಾಡಿ ಮಾಲೀಕರು ಸರಿಯಾದ ಡಾಕ್ಯುಮೆಂಟ್ ಕೊಟ್ಟು ದಂಡ ಕಟ್ಟಿ ವಾಹನ ಪಡೆಯಬಹುದು. ಒಂದು ವೇಳೆ, ದಾಖಲೆ ಇಲ್ಲ ಅಂದರೆ ವಾಹನಗಳನ್ನು ವಾಪಸ್ ಪಡೆಯಲಾಗುವುದಿಲ್ಲ.