Saturday, 23rd November 2024

ಇನ್ಫೋಸಿಸ್ ಫೌಂಡೇಷನ್ ನಿಂದ ಜೀವನಾವಶ್ಯಕ ವಸ್ತುಗಳ ವಿತರಣೆ

ಬೆಂಗಳೂರು:

ರಾಜ್ಯದ ಹಾಗೂ ದೇಶದ ಜನರ ಸಂಕಷ್ಟದ ಕಾಲದಲ್ಲಿ ಸಹಾಯ ಹಸ್ತ ಚಾಚುವಲ್ಲಿ ಮುಂಚೂಣಿಯಲ್ಲಿರುವ ಇನ್ಪೋಸಿಸ್‌ ಫೌಂಡೇಶನ್‌ ವತಿಯಿಂದ ಇಂದು ಬೆಂಗಳೂರು ನಗರದ ಸಾವಿರಾರು ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು.

ಕರೋನಾ ಕರ್ಪ್ಯೂನಿಂದ ತೊಂದರೆಗೀಡಾಗಿರುವ ಕಾರ್ಮಿಕರು, ನಿರ್ಗತಿಕರು ಹಾಗೂ ಕೊಳೆಗೇರಿ ನಿವಾಸಿಗಳು ಸೇರಿದಂತೆ ಸಂತ್ರಸ್ತರಿಗೆ ಇಂದು ಸರ್ಜಾಪುರ ಪೋಲೀಸ್‌ ಠಾಣೆಯ ಬಳಿ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು. ಇನ್ಪೋಸಿಸ್‌ ಫೌಂಡೇಶನ್‌ ನ ಮ್ಯಾನೇಜರ್‌ ಚಂದ್ರು ಹಾಗೂ ಅವರ ತಂಡ ಸಾವಿರಕ್ಕೂ ಹೆಚ್ಚು ಜನರಿಗೆ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವಂತಹ ಬಾಕ್ಸನ್ನು ವಿತರಿಸಿದರು. ಈ ಕಾರ್ಯದಲ್ಲಿ ಸರ್ಜಾಪುರ ಪೋಲೀಸ್‌ ಠಾಣೆಯ ಸಿಬ್ಬಂದಿಗಳು ಕೈಜೋಡಿಸಿದ್ದು ವಿಶೇಷವಾಗಿತ್ತು.

ಅಲ್ಲದೆ, ಮನೆ ಮನೆಗೂ ತೆರಳಿ ಜೀವನಾವಶ್ಯಕ ವಸ್ತುಗಳನ್ನು ಒಳಗೊಂಡಿರುವ ಬಾಕ್ಸ್‌ಗಳನ್ನೂ ವಿತರಿಸಲಾಯಿತು. ಸಾವಿರಕ್ಕೂ ಹೆಚ್ಚು ಜನರು ಈ ವಸ್ತುಗಳನ್ನು ಪಡೆದುಕೊಂಡರು. ಕರೋನಾ ಲಾಕ್‌ ಡೌನ್‌ ಪ್ರಾರಂಭದಿಂದಲೂ ಇನ್ಪೋಸಿಸ್‌ ಫೌಂಡೇಶನ್‌ ರಾಜ್ಯಾದ್ಯಂತ ಅಗತ್ಯ ಸಾಮಗ್ರಿಗಳನ್ನು ವಿತರಿಸುತ್ತಿದೆ.