ಯಶೋ ಬೆಳಗು
ಯಶೋಮತಿ ಬೆಳಗೆರೆ
yashomathy@gmail.com
ಅದೆಲ್ಲ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನು ಆ ಅಭಿವ್ಯಕ್ತಿಯೊಳಗೆ ನನ್ನನ್ನು ಎರಕ ಹೊಯ್ದುಕೊಳ್ಳತೊಡಗಿದೆ. ನನ್ನೆಲ್ಲ ಕೆಲಸಗಳಲ್ಲಿ ಹೆಚ್ಚಿನ ಶ್ರದ್ಧೆ ವಹಿಸ ತೊಡಗಿದೆ. ಮಾತು ಮೃದುವಾದವು. ಕಾಟನ್ ಸೀರೆಗಳು ವಾರ್ಡ್ ರೋಬನ್ನು ಅಲಂಕರಿಸಿದವು. ಹೆರಳಿಗೆ ಕತ್ತರಿ ಪ್ರಯೋಗ ನಿಂತು ನೀಲವೇಣಿಯಾದೆ.
ನನ್ನ ವಾಟ್ಸಾಪ್ ಮೆಸೇಜಿನ ತುಂಬ ಅಮ್ಮನನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಮೆಸೇಜುಗಳೇ. ಒಂದೇ ಥರದ ಮೆಸೇಜುಗಳನ್ನು ನೋಡುತ್ತಾ, ಓದುತ್ತಾ ಅದೆಲ್ಲ ಕ್ಲೀಷೆ ಅನ್ನಿಸತೊಡಗಿತು. ತನ್ನಮ್ಮನ ಬಗ್ಗೆ ತನ್ನದೇ ಭಾವನೆ ಗಳನ್ನು ವ್ಯಕ್ತಪಡಿಸಲಾಗದಷ್ಟು copy cat ಗಳಾಗಿ ಹೋಗಿದ್ದಾರೆ ಜನ. ವರುಷಕ್ಕೊಮ್ಮೆ ಬರುತ್ತಿದ್ದ ಗೌರಿ-ಗಣೇಶನ ನೆಪದಲ್ಲಿ ನೆನಪಾಗುತ್ತಿದ್ದ ತಾಯಿ, ತವರುಮನೆಯೆಲ್ಲ ಈಗ ಮೂರು ತಿಂಗಳ ಮೊದಲೇ ಅಮ್ಮನ ದಿನವಾಗಿ ಮೆರವಣಿಗೆ ಯಾಗುತ್ತಿದೆ.
ದಿನಬೆಳಗಾದರೆ ಸಂಡೇ ಮಂಡೇ ಜತೆಗೀಗ ಲೆಕ್ಕವಿಡಲಾಗದಷ್ಟು ಡೇಗಳನ್ನೂ ಟಠಿಛಿ ಮಾಡಿಟ್ಟುಕೊಳ್ಳುವಂಥ ದಿನಗಳು. ಬದಲಾವಣೆಗೆ ಹೊಂದಿಕೊಳ್ಳುವ ಅನಿವಾರ್ಯದ ನಡುವೆ ನಮ್ಮತನ ಮರೆಯಾಗದಿರಲಿ. ತಾಯಾದ ಕೂಡಲೇ ಅವಳೆಲ್ಲಾ ಆಕಾಂಕ್ಷೆಗಳನ್ನೂ ಬಲಿ ಕೊಡದೆ, ಅವಳ ಎಲ್ಲ ಸರಿ-ತಪ್ಪುಗಳ ನಡುವೆಯೇ ಅವಳನ್ನು ಪ್ರೀತಿಸೋಣ. ಅವತ್ತು ಪತ್ರಿಕೆಯ ಕೆಲಸ ಮುಗಿಸಿ, ರವಿ ಮನೆಗೆ ಡ್ರಾಪ್ ಮಾಡುವಷ್ಟರಲ್ಲಿ ರಾತ್ರಿ ಹತ್ತು ಗಂಟೆ. ಅಷ್ಟರಲ್ಲಾಗಲೇ ಎಲ್ಲರೂ ನಿದ್ರೆಗೆ ಜಾರಿ ಮನೆಪೂರ್ತಿ ನಿಶ್ಶಬ್ದ.
ನಿಮ್ಮನೇಲಿ ಆಗಲೇ ಎಲ್ರೂ ನಿದ್ರೆ ಮಾಡ್ತಿದ್ದಾರೆ ಅನ್ಸತ್ತೆ. ಅಮ್ಮ ನಿಂಗೆ ಊಟ ಎತ್ತಿಟ್ಟಿರ್ತಾರಲ್ವಾ? ಎಂದು ಕೇಳುತ್ತಾ, ನಾನು ಹೀಗೆ ತಡವಾಗಿ ಬರುವಾಗೆಲ್ಲ ನಮ್ಮಮ್ಮ ನನಗೇ ಅಂತ ಒಂದು ತಟ್ಟೆಯಲ್ಲಿ ಊಟವೆಲ್ಲ ಸಿದ್ಧವಿಟ್ಟು ಅದರ ಮೇಲೊಂದು ತಟ್ಟೆಯನ್ನು ಮುಚ್ಚಿ, ರವಿ, ನಿದ್ರೆಗೆಡದೆ ಊಟ ಮಾಡಿ ಬೇಗ ಮಲಗು ಎಂದು ಅದರ ಮೇಲೊಂದು ಪುಟ್ಟ ಚೀಟಿಯಿಟ್ಟಿರುತ್ತಿದ್ದಳು.. ಎಂದು ಹೇಳಿದಾಗ, ನಮ್ಮನೆಯಲ್ಲಿ ಅಂಥzಲ್ಲ ಏನಿಲ್ಲ. ಬೇಕೆಂದಾಗ ಬಿಸಿ ಮಾಡಿಕೊಂಡು ನಾವೇ ಬಡಿಸಿಕೊಂಡು ತಿಂದು ಮಲಗುತ್ತೇವಷ್ಟೆ ಅಂದುಕೊಂಡು, Good night sir ಎಂದು ಹೇಳಿ ಮನೆಗೆ ನಡೆದುಹೋಗಿದ್ದೆ.
Ravi was obsessed with his mother. ಅಮ್ಮನೆಂದರೆ ಎಲ್ಲರಿಗೂ ಇರುವಂತೆ ಅಲ್ಲಲ್ಲ ಅದಕ್ಕಿಂತ ಒಂದು ಪಾಲು ಹೆಚ್ಚೇ ಪ್ರೀತಿ ತನ್ನಮ್ಮನ ಮೇಲೆ. ತಾರಸಿಯ ಮೇಲೆ ಒಗೆದು ಒಣಗಲು ಹಾಕಿದ್ದ ಅವರಮ್ಮನ ಕಾಟನ್ ಸೀರೆಯ ಘಮದಿಂದ ಹಿಡಿದು, ಕುಡಿಯುವ ನೀರಿನಲ್ಲಿ ಘಮಘಮಿಸುವಂತೆ ಹಾಕಿಡುತ್ತಿದ್ದ ಚಿಟಿಕೆಯಷ್ಟು ಪಚ್ಚ ಕರ್ಪೂರದವರೆಗೂ ಎಲ್ಲದರಲ್ಲೂ ಅವರಿಗೆ ಅಮ್ಮನೇ ದಿ ಬೆಸ್ಟ್ ಯಾವಾಗಲೂ. ನಮ್ಮಮ್ಮ ಮಾಡುತ್ತಿದ್ದ ಅಡುಗೆಯೆದುರು ಉಳಿದದ್ದೆಲ್ಲ ನೀವಾಳಿಸಿ ಎಸೆಯಬೇಕು ಎನ್ನುವಷ್ಟು ಪ್ರೀತಿ. ಬೆಳಗಿನ ಶುಭ್ರ ಮುಂಜಾವಿನಲ್ಲಿ ಅಮ್ಮ ತಂಬೂರವನ್ನು ಶ್ರುತಿಗೊಳಿಸಿ ಮಂದ್ರ ದನಿಯಲ್ಲಿ ಹಾಡಿ ಕೊಳ್ಳುತ್ತಿದ್ದ ಗಮಕಗಳು, ಅಮ್ಮನ ದಟ್ಟ ಉದ್ದ ಜಡೆ, ಹಣೆಗಿಟ್ಟುಕೊಳ್ಳುತ್ತಿದ್ದ ಸಾದು, ಅವಳ ಕೆಲಸಗಳಲ್ಲಿರುತ್ತಿದ್ದ ಮಟ್ಟಸತನ… ಹೀಗೆ ಪ್ರತಿಯೊಂದರಲ್ಲೂ ತನ್ನಮ್ಮ ಎಲ್ಲರಿ ಗಿಂತ ಬಹಳ ವಿಶೇಷ ಅನ್ನುವ ಪ್ರೀತಿ ತುಂಬಿದ ಮೆಚ್ಚುಗೆ.
ಹೀಗಾಗಿ ಯಾರಾದರೂ ತನ್ನಮ್ಮನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಬಹಳ ವ್ಯಗ್ರರಾಗುತ್ತಿದ್ದರು. ಗಂಡಿಗೆ ಸರಿಸಮನಾಗಿ ಅಶ್ಲೀಲವಾಗಿ ಮಾತನಾಡುವ ಹೆಣ್ಣುಮಕ್ಕಳೆಂದರೆ, ದೊಡ್ಡದನಿಯಲ್ಲಿ ಕಿರುಚಾಡುವ, ಜಗಳಗಂಟಿಯರೆಂದರೆ ಅವರನ್ನು ತಮ್ಮ ಆಪ್ತವಲಯದಿಂದ ದೂರವಿಟ್ಟು ಬಿಡುತ್ತಿದ್ದರು. ಅದೆಲ್ಲ ಮಾತು ಗಳನ್ನು ಕೇಳುತ್ತಾ ಕೇಳುತ್ತಾ ನಾನು ಆ ಅಭಿವ್ಯಕ್ತಿಯೊಳಗೆ ನನ್ನನ್ನು ಎರಕ ಹೊಯ್ದುಕೊಳ್ಳತೊಡಗಿದೆ. ನನ್ನೆಲ್ಲ ಕೆಲಸಗಳಲ್ಲಿ ಹೆಚ್ಚಿನ ಶ್ರದ್ಧೆ ವಹಿಸತೊಡಗಿದೆ. ಮಾತು ಮೃದುವಾದವು. ಕಾಟನ್ ಸೀರೆಗಳು ವಾರ್ಡ್ ರೋಬನ್ನು ಅಲಂಕರಿಸಿದವು. ಹೆರಳಿಗೆ ಕತ್ತರಿ ಪ್ರಯೋಗ ನಿಂತು ನೀಲವೇಣಿಯಾದೆ. ಹಣೆಯ ಕುಂಕುಮ ದೊಡ್ಡದಾಗಿ ನಗಲಾರಂಭಿಸಿತು. ಹೆರಳಲ್ಲಿ ಮಲ್ಲಿಗೆ ದಂಡೆ. ಅದೆಲ್ಲ ಅವರಿಗೆ ಅದೆಷ್ಟು ಇಷ್ಟವಾಗುತ್ತಿತ್ತೆಂದರೆ ಅವರಮ್ಮನಿಗೆ ಇಷ್ಟವಿದ್ದ ಬಣ್ಣದ ಸೀರೆಗಳನ್ನು ಆರಿಸಿ ಆರಿಸಿ ಕೊಡಿಸುತ್ತಿದ್ದರು. ಈ ಅಂಕಣದಲ್ಲಿರುವ ನನ್ನ ಭಾವಚಿತ್ರದಲ್ಲಿ ಉಟ್ಟಿರುವ ಸೀರೆ ಅವರಮ್ಮನಿಗೆ ಬಹಳ ಪ್ರಿಯವಾದ ಅರಿಶಿಣ-ಕುಂಕುಮದ ಬಣ್ಣದ ಮೈಸೂರು ಸಿಲ್ಕಿನದ್ದು.
ನನ್ನ ಜನ್ಮದಿನಕ್ಕೆ surprise ಆಗಿ ನೀಡಿದ ಉಡುಗೊರೆ. ಅವರಮ್ಮ ಧರಿಸುತ್ತಿದ್ದ ಏಳುಕಲ್ಲಿನ ಸುತ್ತೋಲೆಯನ್ನೂ ಕೊಡಿಸಿದ್ದರು. ಅವರಿಗಿಷ್ಟವೆಂದು ಅವರಮ್ಮ
ನಂತೆಯೇ ನೀರಿನಲ್ಲಿ ಚಿಟಿಕೆ ಪಚ್ಚಕರ್ಪೂರ ಹಾಕಿಡುತ್ತಿದೆ. ಗೋಧೂಳಿ ಸಮಯದಲ್ಲಿ ಮನೆಯೆಲ್ಲ ಸಂಬ್ರಾಣಿಯ ತೆಳುವಾದ ಹೊಗೆಯಿಂದ ಘಮಘಮಿಸು ವಂತಿಡುತ್ತಿದ್ದೆ. ಯಾರ ಒತ್ತಾಯವೂ ಇಲ್ಲದೇ ನನ್ನನ್ನು ನಾನು ಅವರಿಚ್ಛೆಗೆ ತಕ್ಕಂತೆ ಬದಲಿಸಿಕೊಳ್ಳುತ್ತಾ ವಿಭಿನ್ನವಾದ ವ್ಯಕ್ತಿತ್ವದೊಳಗೆ ಬಂಧಿಯಾಗತೊಡಗಿದೆ. ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಹಣೆಯ ಬಿಂದಿ ಚಿಕ್ಕದಾದರೂ ಅವರಿಗದು ಇಷ್ಟವಾಗುತ್ತಿರಲಿಲ್ಲ. ಅವರ ಬರಹದ ಯಾವುದೋ ಸಾಲಿನೊಳಗದು ಸೇರಿ ಕಚೇರಿಯಲ್ಲಿ ಎಲ್ಲರ ಕುತೂಹಲ ಕೆರಳುವಂತಾಗುತ್ತಿತ್ತು.
ದಿನಗಳೆದಂತೆ ಮಾನಸಿಕ ಒತ್ತಡದಿಂದಾಗಿ ಕೂದಲು ಉದುರಲು ಆರಂಭವಾಗಿದ್ದರಿಂದ ಅದನ್ನು ಅವರಿಗೆ ತಿಳಿಸದೆಯೇ ಮೊಟಕುಗೊಳಿಸಿಬಿಟ್ಟಿದ್ದೆ. ಇದರಿಂದ ಅವರಿಗೆ ಅದೆಷ್ಟು ಸಿಟ್ಟು ಬಂದಿತ್ತೆಂದರೆ ಕೆನ್ನೆಗೆರಡು ತಪರಾಕಿಗಳು ಬಿದ್ದಿದ್ದವು. ಮೊದಲೇ ಮಾನಸಿಕ ಒತ್ತಡದಲ್ಲಿದ್ದ ನನಗೆ ಇದರಿಂದ ಇನ್ನಷ್ಟು ಬೇಸರವಾಗಿ ಕುಗ್ಗಿಹೋಗಿದ್ದೆ. ಆದರೆ ಅದರ ಹಿಂದಿನ ಪ್ರೀತಿಯ ಅರಿವಾಗಿ ಅವರನ್ನು ಇನ್ನಷ್ಟು ಅರ್ಥಮಾಡಿಕೊಳ್ಳುತ್ತಾ, ಅದರಂತೆ ನಡೆಯುವ ಪ್ರಯತ್ನ ಮಾಡಲಾರಂಭಿಸಿದೆ. ಸೂರ್ಯನ ಸುತ್ತ ತಿರುಗುವ ಭೂಮಿಯಂತೆ ಅವರ ಹೊರತಾಗಿ ಅನ್ಯ ಜಗತ್ತೇ ಇರದಂತೆ ನನ್ನನ್ನು ನಾನು ಸಂಪೂರ್ಣವಾಗಿ ಅವರಿಗಾಗಿ ಮುಡಿಪಾಗಿಸಿ ಕೊಂಡುಬಿಟ್ಟಿದ್ದೆ.
ಆದರೆ ಅವರಿಗೆ ನನ್ನ ಹಾಗಿರಲು ಸಾಧ್ಯವಿರಲಿಲ್ಲ. ಕೊಂಚ ಎಚ್ಚರ ತಪ್ಪಿದರೂ ಸಾಕಷ್ಟು ಅನಾಹುತಗಳಾಗುವ ಸಂಭವವಿದ್ದುದರಿಂದ ತಮ್ಮ ಬರವಣಿಗೆಯ ಜತಗೆ
ಅದೆಲ್ಲದರೆಡೆಗೆ ಅವರು ಗಮನ ಹರಿಸುವುದು ಅನಿವಾರ್ಯವಾಗಿತ್ತು. ಆಗೆಲ್ಲ ಬಹಳ ಒಂಟಿತನ ಕಾಡಲಾರಂಭಿಸುತ್ತಿತ್ತು. ಆಗಲೇ ಅವರಿಗೆ ಮೂರು ಮಕ್ಕಳಿದ್ದು ದರಿಂದ ಮತ್ತೊಂದು ಮಗು ಬೇಡವೆಂದೇ ನಿರ್ಧಸಿದೆ. ಹೀಗಾಗಿ ಯಾರಾದರೂ ಬಡಮಕ್ಕಳನ್ನು ಜತೆಗಿಟ್ಟುಕೊಂಡು ಅವರಿಗೆ ವಿದ್ಯಾಭ್ಯಾಸ ಕೊಟ್ಟು ಬೆಳೆಸುವ ಹಂಬಲವಿತ್ತು. ಅದೇ ಸಮಯಕ್ಕೆ ತನ್ನ ಅಕ್ಕನ ಮಕ್ಕಳನ್ನು ಕರೆದುಕೊಂಡು ಸಾಹೇಬ್ರೇ, ಬಹಳ ಬುದ್ಧಿವಂತ ಮಕ್ಕಳಿವರು. ಕೇಂದ್ರೀಯ ವಿದ್ಯಾಲಯದಲ್ಲಿ ಎಲ್ಲ ವಿಷಯಗಳಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಆದರೆ ತಿನ್ನೋಕೇ ಗತಿಯಿಲ್ಲ.
(ಇದೇ ಶಬ್ದ ಹೇಳಿದ್ದ) ಅವರ marks card ಎಲ್ಲ ನೀವೇ ನೋಡಿ ಬೇಕಾದರೆ. ಇವರಿಗೆ ನಿಮ್ಮ ಶಾಲೆಯಲ್ಲಿ ಒಂದು ಸೀಟು ಕೊಟ್ಟು ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರೆ ನನ್ನ ಜನ್ಮವಿರುವವರೆಗೂ ನಿಮ್ಮ ಹೆಸರೇಳಿ ದೀಪ ಹಚ್ಚುತ್ತೇನೆ ಎಂದು ಅವರ ಕಾಲು ಹಿಡಿದು ಬೇಡಿಕೊಳ್ಳುತ್ತಿದ್ದ. ಅದೇ ಸಮಯಕ್ಕೆ ಅವರಿಗೆ ಕಾಫಿ ಕೊಡಲು ತುಂಬಿದ ಕಾಫಿ ಕಪ್ಪುಗಳೊಂದಿಗೆ ಅವರ ಕ್ಯಾಬಿನ್ನಿನೊಳಗೆ ಹೋದಾಗ, ರವಿ ವಿಷಯ ವಿವರಿಸಿ, ನೋಡು ಮಕ್ಕಳು ಬುದ್ಧಿವಂತರಿದ್ದಾರೆ.
ನಿನ್ನ ಕೆಲಸ ಕಾರ್ಯಗಳಿಗೂ ಸಹಾಯವಿದ್ದಂತಾಗುತ್ತದೆ. ಅವರಿಗೊಂದು ನೆಲೆ ಸಿಕ್ಕಂತಾಗುತ್ತದೆ. ಯೋಚನೆ ಮಾಡಿ ತಿಳಿಸು ಎಂದಾಗ, ಯೋಚಿಸೋದೇನು ಬಂತು, ಧಾರಾಳವಾಗಿ ಅವರು ನಮ್ಮ ಮನೆಯಲ್ಲಿರಲಿ. ಹೇಗಿದ್ದರೂ ನಾನೂ ಒಬ್ಬಳೇ ಇರುತ್ತೀನಲ್ವಾ? ನನಗೂ ಜತೆ ಇದ್ದಂತಾಗುತ್ತದೆ. ನಾಳೆಯೇ ಬಂದು ಬಿಡಲಿ ಎಂದೆ. ಬಹಳ ಉಪಕಾರವಾಯ್ತು ಎಂದು ಎರಡೂ ಮಕ್ಕಳು ನನ್ನ ಕಾಲಿಗೂ ನಮಸ್ಕರಿಸಿ, ಮರುದಿನ ತಮ್ಮ ಬಟ್ಟೆ-ಪುಸ್ತಕಗಳೊಂದಿಗೆ ಮನೆ ಸೇರಿ ಕೊಂಡರು. ಪಿಂಟೂ ಅ ಕಚೇರಿಯ ಮೇಲಿದ್ದ ಸಣ್ಣ ಕೋಣೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯಾಯಿತು.
ಬಂದ ಎರಡನೇ ದಿನಕ್ಕೇ ಶುರುವಾಯಿತು ಅವರ ಬೇಡಿಕೆ. ಆಂಟೀ, ನಾವೇನೋ ನಿಮ್ಮ ಜತೆ ಊಟ ಮಾಡಿ ನೆಮ್ಮದಿಯಾಗಿದ್ದೇವೆ. ಆದರೆ ಪಿಂಟೂ ಮಾಮ ಒಬ್ಬನೇ. ಅವನಿಗೆ ಅಡುಗೆ ಮಾಡಿಕೊಳ್ಳಲೂ ಬರುವುದಿಲ್ಲ. ಹೊಸ ಊರು ಬೇರೆ. ಅದೂ ಅಲ್ಲದೆ ದಿನಾ ಹೊಟೇಲ್ನಲ್ಲಿ ಊಟ ಮಾಡುವಷ್ಟು ಹಣ ಕೂಡ ನಮ್ಮ ಬಳಿಯಿಲ್ಲ. ನೀವು ಒಪ್ಪಿಗೆ ಕೊಟ್ಟರೆ ನಮ್ಮ ಊಟದ ಸ್ವಲ್ಪ ಉಳಿಸಿ ಅವನಿಗೂ ಕೊಡ್ತೀವಿ ಅಂದಾಗ, ಅಯ್ಯೋ, ಅದಕ್ಯಾಕೆ ನೀವು ಅರೆಹೊಟ್ಟೆ ತಿನ್ನುತ್ತೀರಾ? ಇನ್ನೊಬ್ಬನಿಗೆ ಹೆಚ್ಚಾಗಿ ಕೊಟ್ಟರೆ ನನಗೆ ಬಡತನವೇನೂ ಬರುವುದಿಲ್ಲ. ಅಡುಗೆ ಮಾಡುವಾಗ ಅವನಿಗೂ ಸೇರಿಸಿಯೇ ಅಡುಗೆ ಮಾಡಿಬಿಡೋಣ ಅಂದೆ.
ಆಯ್ತು ಆಂಟೀ.. ನೀವು-ಅಂಕ ನಮ್ಮ ಪಾಲಿನ ದೇವರು ಎಂದು ಕೈಮುಗಿದು ತಮ್ಮ ಕೋಣೆ ಸೇರಿಕೊಂಡರು. ರವಿ ಕಚೇರಿಯಲ್ಲುಳಿದಾಗ ಅವರ ದೇಖರೇಖಿಗಾಗಿ
ನಾನೂ ಅ ಉಳಿಯುತ್ತಿದ್ದುದರಿಂದ ಮನೆ ಪೂರ್ತಿ ಅವರದ್ದೇ ಅನ್ನುವಂತಾಗಿ ಹೋಗಿತ್ತು. ಒಮ್ಮೆ ಸಂಜೆ ಮನೆಗೆ ಬರುವಷ್ಟರಲ್ಲಿ ಸೋಫಾ ಮೇಲೆ ಯಜಮಾನ
ನಂತೆ ಕುಳಿತು ಊಟ ಮಾಡುತ್ತಿದ್ದಾನೆ ಪಿಂಟು. ಇದೇನಿದು ನನಗೇ ತಿಳಿಸದೆ ಮನೆಯೊಳಗೆ ಬಂದಿ ದ್ದಾನಲ್ಲ? ಅಂದುಕೊಂಡು ಅವರೆಡೆಗೆ ನೋಡಿದಾಗ,
ಬೆಳಗ್ಗೆಯಿಂದ ಏನೂ ತಿಂದಿಲ್ಲವಂತೆ ಆಂಟೀ ನೀವು ಬ್ಯುಸಿ ಇರ್ತೀರ… ಅದಕ್ಕೇ ನಿಮ್ಮನ್ನು ಡಿಸ್ಟರ್ಬ್ ಮಾಡೋದು ಬೇಡ ಅಂದುಕೊಂಡು ಇಲ್ಲೇ ಬಂದು ಊಟ ಮಾಡಿಕೊಂಡು ಹೋಗುವಂತೆ ಹೇಳಿದೆ ಎಂದು ಸಮಝಾಯಿಷಿ ನೀಡಿದರು.
ಮಾರನೆಯ ದಿನ ಬೆಳಗ್ಗೆ ನಾನು ಏಳುವಷ್ಟರ ತಮಗೆ-ತಮ್ಮ ಮಾಮನಿಗೆ ತಿಂಡಿ ಮಾಡಿಕೊಂಡು, ಬಳಸಿದ ಪಾತ್ರೆ ಕೂಡ ತೊಳೆಯದೇ, ನಾಲ್ಕು ಕ್ಯಾರಿಯರ್ ತುಂಬ ತುಂಬಿಸಿಕೊಂಡು ಶಾಲೆಗೆ ಹೊರಟುಬಿಟ್ಟರು. ನನ್ನ ತಿಂಡಿ-ಅಡುಗೆಯನ್ನು ನಾನು ಮತ್ತೆ ಮಾಡಿಕೊಳ್ಳುವಂತಾಯ್ತು. ಯಾಕೋ ಇದು ಸರಿ ಹೋಗ್ತಾ ಇಲ್ಲ ಅನ್ನಿಸಿ ಮನಸಿಗೆ ತುಂಬ ಕಿರಿಕಿರಿಯಾಗತೊಡಗಿತು. ಹೇಳೋಣ ಅಂದ್ರೆ ರವಿಯೆಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಅನ್ನುವ ಸಂಕಟ. ಅವತ್ತು ರವಿ ಮನೆಯ ಉಳಿದುಕೊಂಡಿದ್ದರು.
ಅವರಿದ್ದಲ್ಲಿ ಮಾತಿಗೆ ಬರವೇ? ಪಿಂಟೂ ಕೂಡ ಜತೆಯ ಇದ್ದ. ಅವನೊಂದಿಗೆ ಮಾತಾಡುತ್ತಾ ‘ಭೀಮಾ ತೀರದ ಹಂತಕರು’ ವಿಷಯದ ಕುರಿತಾಗಿ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದರು. ಅದೇ ವಿಷಯವಾಗಿ ಮಾತನಾಡುತ್ತಾ ಕುಳಿತಿದ್ದರು. ಆಗಲೇ ನನಗೆ ತಿಳಿದದ್ದು ಈ ಪಿಂಟೂ ಕೂಡ ಅದೇ ಹಂತಕರಲ್ಲಿ ಒಬ್ಬನೆಂದು. ಕಿಂಚಿತ್ತು ಪಶ್ಚಾತ್ತಾಪವೂ ಇಲ್ಲದೆ ಆ ಘಟನೆಗಳನ್ನು ವಿವರಿಸುತ್ತಿದ್ದುದು ಕೇಳಿದಾಗ ಎದೆ ಝಂದು ಹೋಗಿತ್ತು. To whom I am giving a shelter… ಎಂಬುದು ಅರಿವಾಗಿ ತಲೆ ಸಿಡಿದುಹೋದಂತಾಗಿತ್ತು.
ಮಾರನೆಯ ದಿನವೇ ಅಮ್ಮನಿಗೆ ಫೋನು ಮಾಡಿ ಒಂದೆರಡು ದಿನಗಳ ಮಟ್ಟಿಗೆ ಮನೆಗೆ ಬಂದು ಹೋಗುವಂತೆ ಕೇಳಿಕೊಂಡೆ. ಅವರು ಬಂದ ನಂತರ ಎಲ್ಲದಕ್ಕೂ ರವಿ ಅಂಕಲ್ ಇದ್ದಾರೆ ಎಂದು ಮೆರೆಯುತ್ತಿದ್ದ ಈ ಹೆಣ್ಣು ಮಕ್ಕಳು ಬಾಲಸುಟ್ಟ ಬೆಕ್ಕಿನಂತಾದರು. ಸದ್ದಿಲ್ಲದೇ ಒಯ್ಯುತ್ತಿದ್ದ ತಿಂಡಿ-ಊಟಕ್ಕೆಲ್ಲ ಬ್ರೇಕು ಬಿದ್ದು ಅವರ ಮುಖ ಮುದುಡಿಹೋಯ್ತು. ಕೆಲವೇ ದಿನಗಳಿಗೆ ಆಂಟೀ ನಿಮಗ್ಯಾಕೆ ತೊಂದರೆ? ಇ ಹತ್ತಿರದ ಒಂದು ಸಣ್ಣ ರೂಮು ಸಿಕ್ಕಿದೆ. ನಾವು ಒಟ್ಟಿಗೆ ಅ ಇರ್ತೇವೆ ಎಂದು ಹೇಳಿ ಜಾಗ ಖಾಲಿ ಮಾಡಿದರು. ಅಮ್ಮನಿಗೆ ಮನದ ಕೃತಜ್ಞತೆ ಸಲ್ಲಿಸಿದ್ದೆ.