Saturday, 23rd November 2024

ಹೆಡ್ಗೆವಾರ್ ದೇಶದಲ್ಲಿ ಕೋಮು ಭಾವನೆ ಬೆಳೆಸಿದ ವ್ಯಕ್ತಿ

ನವದೆಹಲಿ: ಪಠ್ಯ ಪುಸ್ತಕದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಹೆಡ್ಗೆವಾರ್ ದೇಶದಲ್ಲಿ ಕೋಮು ಭಾವನೆ ಬೆಳೆಸಿದ ವ್ಯಕ್ತಿ. ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿಲ್ಲ. ಸ್ವಾತಂತ್ರ್ಯ ಹೋರಾಟ ವಿರುದ್ಧವಾಗಿದ್ದವರು, ಧರ್ಮದ ಸಂಘಟನೆ ಮುಖ್ಯಸ್ಥರಾಗಿದ್ದವರು.

ಸ್ವಾತಂತ್ರ್ಯ ಪ್ರೇಮಿ ಭಗತ್ ಸಿಂಗ್ , ಗುರು ನಾರಾಯಣ್, ಕುವೆಂಪುರುವರ ವಿಚಾರಗಳನ್ನ ಕೈ ಬಿಟ್ಟಿರುವುದನ್ನ ಒಪ್ಪಲು ಸಾಧ್ಯವಿಲ್ಲ ಎಂದು ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನ ಪಠ್ಯಪುಸ್ತಕದಲ್ಲಿ ತರಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣವನ್ನ ಕೇಸರಿಕರಣ ಮಾಡಲಾಗುತ್ತಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ನಡೀತಾ ಇದೆ. ಭವಿಷ್ಯತ್ತಿನಲ್ಲಿ ಭಯಾನಕ ವಾತಾವರಣ ಸೃಷ್ಟಿಮಾಡಲು ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ಕಿಡಿಕಾರಿದರು.

ಮಡಿಕೇರಿಯಲ್ಲಿ ಶಾಲೆ ಆವರಣದಲ್ಲಿ ಗನ್ ತರಬೇತಿ ವಿವಾದ ಸಂಬಂಧಿಸಿ, ದಲಿತರು ಗನ್ ತರಬೇತಿ ಪಡೆದರು ನಕ್ಸಲೈಟ್ ಪಟ್ಟ ಕಟ್ಟುತ್ತಾರೆ.

ಮುಸ್ಲಿಮರು ಗನ್ ತರಬೇತಿ ಪಡೆದರೆ ಭಯೋತ್ಪಾದಕ ಎಂಬ ಪಟ್ಟ ಕಟ್ಟುತ್ತಾರೆ. ಅದೇ ಬಜರಂಗದಳದವರು ಆತ್ಮರಕ್ಷಣೆಗೆ ಗನ್ ತರಬೇತಿ ಪಡೆಯುತ್ತಾರಾ? ಎಲ್ಲರನ್ನ ರಕ್ಷಣೆ ಮಾಡಲು ಪೊಲೀಸ್ ಇದೆ, ಮಿಲಿಟರಿ ಇದೆ. ಬಜರಂಗದಳದವರಿಂದ ರಕ್ಷಣೆ ಬೇಕಾಗಿಲ್ಲ. ಇದು ಕಾನೂನು ಬಾಹಿರ, ಸಂವಿಧಾನ ಬಾಹಿರ ಎಂದು ಪ್ರತಿಕ್ರಿಯಿಸಿದರು.