Thursday, 21st November 2024

ಡೆಂಗ್ಯೂ ಜ್ವರ ವೈರಸ್ ಇದ್ದಂತೆ : ಪರಿಮಳ ಮೈತ್ರಿ

ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಡೆಂಗೀ ದಿನಾಚರಣೆ

ಸಿರವಾರ : ಡೆಂಗ್ಯೂ ಜ್ವರ ಒಂದು ವೈರಸ್ ಮೂಲಕ ತಗಲುವ ಜ್ವರವಾಗಿದ್ದು ಒಬ್ಬರಿಂದ ಒಬ್ಬರಿಗೆ ಒಂದು ಮಾಧ್ಯಮದ ಮೂಲಕ ಹರಡುವ ಜ್ವರ ವಾಗಿದೆ. ಈ ಜ್ವರ ಉಂಟಾದ ವ್ಯಕ್ತಿಗಳಲ್ಲಿ ಕಂಡು ಬರುವ ರೋಗ ಲಕ್ಷಣಗ ಳು ಎಂದರೆ ಮೈಕೈ ನೋ ವು,ಕೀಲು ನೋವು, ಜ್ವರ ಇತ್ಯಾದಿ ರೋಗ ಗಳು ಕಂಡು ಬರುತ್ತವೆ ಎಂದು ತಾಲೂಕ ಆಡಳಿತ ವೈದ್ಯಾಧಿಕಾರಿ ಡಾ.ಪರಿಮಳ ಮೈತ್ರಿ, ಹೇಳಿದರು.

ಪಟ್ಟಣದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ರಾಷ್ಟ್ರಿಯ ಡೆಂಗೀ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಮನುಷ್ಯನ ಆರೋಗ್ಯ ಅತ್ಯಂತ ಮಾರಕವಾಗಿರುವ ಇನ್ನೊಂದು ಕಾಯಿಲೆ ಎಂದರೆ ಅದು ಡೆಂಗ್ಯೂ ಜ್ವರ. ಡೆಂಗ್ಯೂ ಜ್ವರ ಉಂಟು ಮಾಡುವ ಸೊಳ್ಳೆಗಳು ಪ್ರಪಂಚದ ಉಷ್ಣವಲಯ ಮತ್ತು ಉಪ ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಡೆಂಗ್ಯೂ ಜ್ವರ ಉಂಟಾದ ವ್ಯಕ್ತಿಗಳಲ್ಲಿ ಕಂಡು ಬರುವ ರೋಗ ಲಕ್ಷಣಗಳು ಎಂದರೆ ಮೈ ಕೈ ನೋವು, ಕೀಲು ನೋವು, ಜ್ವರ ಇತ್ಯಾದಿ. ಒಂದು ವೇಳೆ ಡೆಂಗ್ಯೂ ಜ್ವರ ವಿಪರೀತವಾದರೆ ರಕ್ತಸ್ರಾವ ಉಂಟಾಗಿ ದೇಹದಲ್ಲಿ ರಕ್ತದ ಒತ್ತಡ ಕುಸಿತ ಕಂಡು ಸಾವು ಉಂಟಾಗಬಹುದು.

ಡೆಂಗ್ಯೂ ಜ್ವರ ಉಂಟಾದ ತಕ್ಷಣದಲ್ಲಿ ಮಕ್ಕಳು ಅಥವಾ ದೊಡ್ಡವರು ಯಾವುದೇ ರೋಗ ಲಕ್ಷಣಗಳನ್ನು ಹೊಂದಿ ರುವುದಿಲ್ಲ. ರೋಗ ಲಕ್ಷಣಗಳು ದಿನ ಕಳೆದಂತೆ ಅಂದರೆ ನಾಲ್ಕ ರಿಂದ ಏಳು ದಿನಗಳ ನಂತರ ಕಾಣಿಸಿಕೊಳ್ಳ ಲು ಮತ್ತು ಉಲ್ಬಣಗೊಳ್ಳಲು ಪ್ರಾರಂಭವಾ ಗುತ್ತವೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಹೊಂದಿದ ಒಬ್ಬ ಮನುಷ್ಯನ ದೇಹದ ತಾಪ ಮಾನ 104F ಇದ್ದು,ತಲೆನೋವ, ಮೈಕೈ ನೋವ, ಕೀಲುನೋವ, ವಾಕರಿಕ,ವಾಂತ,ಕಣ್ಣುಗಳ ಹಿಂಭಾಗದಲ್ಲಿ ನೋವು, ಊದಿಕೊಂಡ ಗ್ರಂಥಿಗಳ ದೇಹದ ಮೇಲೆ ಅಲ್ಲಲ್ಲಿ ಕಲೆಗಳು ರೋಗ ಲಕ್ಷಣಗಳನ್ನು ಹೊಂದಿರುತ್ತವೆ ಎಂದು ಜನರಿಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಡಾ.ಶರಣಬಸವ ಪಾಟೀಲ್, ಆಯುಷ್ ವೈದ್ಯಾಧಿಕಾರಿ ಡಾ.ಸುನಿಲ್ ಸರೋದೆ, ಪ್ರಯೋಗ ತಜ್ಞರು ಪ್ರಕಾಶ್, Sts ಪ್ರೇಮ ಪ್ರಸಾದ, HIO ವಿಜಯ್ ಕುಮಾರ್,PHCO ನಿಲಮ್ಮ,ಸಿದ್ದಮ್ಮ,ಔಷಧಿ ವಿತರಣಾಧಿಕಾರಿ ವಿದ್ಯಾ ಹಿರೇಮಠ,ಆಶಾ ಕಾರ್ಯಕರ್ತೆ ರಾ ಧಾ,ಯಮುನಮ್ಮ ಸೇರಿದಂತೆ ಆಶಾ ಕಾರ್ಯ ಕರ್ತೆಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.