ಯುರೋಪ್ಗೆ ಹಿಂದಿರುಗಿದ ಪ್ರಯಾಣಿಕನಲ್ಲಿ ಮಂಕಿಪಾಕ್ಸ್ ವೈರಸ್ ಅನ್ನು ಆಸ್ಟ್ರೇಲಿಯಾದ ಅಧಿಕಾರಿಗಳು ಗುರುತಿಸಿದ್ದು, ದೃಢೀಕರಣ ಪರೀಕ್ಷೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
40ರ ಹರೆಯದ ವ್ಯಕ್ತಿಯೊಬ್ಬರು ಸಿಡ್ನಿಗೆ ಮರಳಿ ಬಂದ ಹಲವು ದಿನಗಳ ನಂತರ ರೋಗಲಕ್ಷಣಗಳು ಕಂಡು ಬಂದಿದ್ದು, ಅನಾರೋಗ್ಯಕ್ಕೆ ಒಳಗಾಗಿದ್ದರು.
ಪೋರ್ಚುಗಲ್ ಮತ್ತು ಸ್ಪೇನ್ ಸೇರಿದಂತೆ ಹಲವಾರು ದೇಶಗಳು ಇತ್ತೀಚಿನ ವಾರಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳನ್ನು ವರದಿ ಮಾಡಿದ್ದು, ಇತ್ತೀಚೆಗೆ ಕೆನಡಾದ ಕ್ವಿಬೆಕ್ ಪ್ರಾಂತ್ಯಕ್ಕೆ ಪ್ರಯಾಣಿಸಿದ ವ್ಯಕ್ತಿ ಯಲ್ಲಿ ಬುಧವಾರ ಮ್ಯಾಸಚೂಸೆಟ್ಸ್ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಯುಎಸ್ ಪ್ರಕರಣವನ್ನು ಗುರುತಿಸಿದ್ದಾರೆ.
ಮ್ಯಾಸಚೂಸೆಟ್ಸ್ನಲ್ಲಿ ಯುಎಸ್ ಮಂಕಿಪಾಕ್ಸ್ ಪ್ರಕರಣ ಮತ್ತು ಮಾಂಟ್ರಿಯಲ್ ಪ್ರದೇಶದಲ್ಲಿನ ಕೆಲವು ಶಂಕಿತ ಪ್ರಕರಣಗಳ ನಡುವೆ ಸಂಬಂಧವಿದೆ ಎಂದು ಹೇಳಿದರು.