Saturday, 23rd November 2024

ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್‌ ಮಹಿಳೆ ಪ್ರತಿಭಟನೆ..!

ಪ್ಯಾರಿಸ್: ಕಾನ್ ಚಿತ್ರೋತ್ಸವದಲ್ಲಿ ಉಕ್ರೇನ್‌ ಮಹಿಳೆಯೊಬ್ಬರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮಹಿಳೆ ಧರಿಸಿದ್ದ ಉಡುಪಿನ ಮೇಲೆ ಉಕ್ರೇನಿಯನ್ ಧ್ವಜದ ಬಣ್ಣಗಳಲ್ಲಿ ‘ನಮ್ಮ ಮೇಲೆ ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ’ ಎಂದು ಬರೆಯಲಾಗಿದೆ.

ಟಾಪ್‌ಲೆಸ್‌ ಉಡುಪು ಧರಿಸಿದ್ದ ಮಹಿಳೆಯೊಬ್ಬರು ಕಿರುಚುತ್ತಾ ಛಾಯಾಗ್ರಾಹಕರ ಮುಂದೆ ಏಕಾಏಕಿ ಓಡಿಬಂದಿದ್ದರು. ಸ್ಥಳದಲ್ಲಿದ ಭದ್ರತಾ ಸಿಬ್ಬಂದಿ ಆಕೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್’ ಚಿತ್ರದ ಪ್ರದರ್ಶನದ ವೇಳೆ ನಡೆದ ಈ ಘಟನೆ ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು. ಕಾನ್ ಚಿತ್ರೋತ್ಸವ ದಲ್ಲಿ ಉದ್ಘಾಟನಾ ಸಮಾರಂಭದ ವೇಳೆ ವಿಡಿಯೊ ಹಂಚಿಕೊಂಡಿದ್ದ ಝೆಲೆನ್‌ಸ್ಕಿ, ಉಕ್ರೇನ್‌ಗೆ ಸಹಾಯಾಸ್ತ ಚಾಚುವಂತೆ ಮನವಿ ಮಾಡಿದ್ದರು.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಾರ್ವಜನಿಕರು ಸೇರಿದಂತೆ ಅನೇಕ ಸೈನಿಕರು ಮೃತಪಟ್ಟಿದ್ದಾರೆ.