Thursday, 12th December 2024

ವಿಜಯಪುರದಲ್ಲಿ ಕರೋನಾಗೆ ಮತ್ತೊಂದು ಬಲಿ

ವಿಜಯಪುರ :

ಜಿಲ್ಲೆಯಲ್ಲಿ ಕರೋನಾ ಸೊಂಕಿತರ ಪತ್ತೆ ಪ್ರಕರಣ ಮುಂದುವರೆದಿದೆ. ಶನಿವಾರದಂದು ಮತ್ತೆ ೨ ಪ್ರಕರಣ ಪತ್ತೆಯಾಗಿವೆ. ಈ ಪೈಕಿ ಒರ್ವ ವ್ಯಕ್ತಿ ಬಲಿಯಾಗಿದ್ದಾನೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ.

ಕಳೆದ ರಾತ್ರಿ ಮೃತಪಟ್ಟ ೪೨ ವರ್ಷ ವಯೋಮಾನದ ಪುರುಷನಿಗೆ ಸೊಂಕು ತಗುಲಿರುವದು ದೃಢಪಟ್ಟಿದೆ. ಮೃತನು ೩೦೬, ೩೦೮ನೇ ಸೊಂಕಿತರ ಸಂಬಂಧಿಯಾಗಿದ್ದನು.

ಇದ್ದಲ್ಲದೆ ೬೦ರ ವೃದ್ಧನಿಗೂ ಯರೋನಾ ಸೊಂಕು ತಗುಲಿದೆ. ಈತನು ಕಳೆದ ಮಾ.೧೨ ರಂದು ಪತ್ತೆಯಾದ ಸೊಂಕಿತೆ ಸಂಖ್ಯೆ ೨೨೧ ಇರುವ ವೃದ್ದ ಮಹಿಳೆಯ ಸಂಬಂಧಿಕ ವ್ಯಕ್ತಿ ಆಗಿದ್ದಾನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.