Friday, 18th October 2024

ಅಸ್ಸಾಂನಲ್ಲಿ ಪ್ರವಾಹ: ಮತ್ತೆ ನಾಲ್ವರ ಸಾವು, ಮೃತರ ಸಂಖ್ಯೆ 18

ಡಿಸ್ಪುರ್: ಭಾರೀ ಮಳೆಯಿಂದ ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಮತ್ತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 18ಕ್ಕೇರಿಕೆಯಾಗಿದೆ. 74 ಸಾವಿರ ಮಂದಿ ನಿರಾಶ್ರೀತರಾಗಿ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ದೆಲ್ಯೂಗೆ ಪ್ರದೇಶದಲ್ಲಿ ಹೊಸದಾಗಿ ನಾಲ್ಮು ಮಂದಿ ಜೀವ ಹಾನಿ ವರದಿ ಯಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ ನಿರ್ವ ಸತಿಗರ ಸಂಖ್ಯೆ 6,80,118 ದಿಂದ 7,11,905ಕ್ಕೆ ಕಡಿಮೆಯಾಗಿದೆ.

ನಗೋಣ್ ಪ್ರದೇಶ ಅತ್ಯಂತ ಗಂಭೀರ ಸ್ವರೂಪದಲ್ಲಿ ಹಾನಿಗೆ ಒಳಗಾಗಿದೆ. ಸುಮಾರು 3.39 ಲಕ್ಷ ಮಂದಿ ತೊಂದರೆಗೆ ಒಳಗಾಗಿ ದ್ದಾರೆ.

282 ನಿರಾಶ್ರೀತರ ಶಿಬಿರದಲ್ಲಿ 74,907 ಮಂದಿ ಆಶ್ರಯ ಪಡೆದಿದ್ದಾರೆ. 214 ಆಹಾರ ವಿತರಣಾ ಕೇಂದ್ರಗಳು ಸಂತ್ರಸ್ಥರಿಗೆ ನೆರವಾ ಗುತ್ತಿವೆ ಎಂದು ತಿಳಿಸಲಾಗಿದೆ. ಸೇನೆ, ಅರೆಸೇನಾಪಡೆ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮತ್ತು ಸ್ವಯಂ ಸೇವಕರು ಪುನರ್ವಸತಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಟ್ಟ ಕುಸಿತ ಹಾಗೂ ನೀರಿನಲ್ಲಿ ಹಳಿಗಳು ಕೊಚ್ಚಿ ಹೋಗಿರುವುದರಿಂದ 11 ಜೋಡಿ ರೈಲುಗಳ ಸಂಚಾರ ಸ್ಥಗಿತಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.