ಚಿಂಚೋಳಿ: ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಮೀರಿಯಾಣ ಗ್ರಾಮದಲ್ಲಿ ಚಿಂಚೋಳಿ ಅಬಕಾರಿ ನಿರೀಕ್ಷಕ ಜೆಟ್ಟೆಪ್ಪ ಬಿ.ಬೇಲೂರು ಹಾಗೂ ಮೀರಿಯಾಣ ಪೊಲೀಸ್ ಠಾಣೆಯ ಮಹಿಳಾ ಪೇದೆ ಸವಿತಾ ಕಾಶೀನಾಥ ಅವರು ತಂಡದೊಂದಿಗೆ ದಾಳಿ ಮಾಡಿ ಅಕ್ರಮವಾಗಿ ತಯಾರಿಸಲಾದ ಸೆಂದಿಯನ್ನು ಜಪ್ತಿ ಮಾಡಲಾಗಿದೆ.
ಗ್ರಾಮದ ಪದ್ಮಮ್ಮ ಗಂಡ ನರಸಿಂಹಲು, ಅನಂತಮ್ಮ ತಂದೆ ಮೋಗಲಯ್ಯ ಎಂಬ ಆರೋಪಿತರ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 110 ಲೀಟರ್ ಅಕ್ರಮವಾಗಿ ತಯಾರಿಸಲಾದ ಕಲಬೇರಿಕೆ ಸೇಂದಿ ಹಾಗೂ ಸೇಂದಿ ತಯಾರಿಕೆಗಾಗಿ ಬಳಸುವ 2 ಕೆ.ಜಿ ಸಿಹೆಚ್ ಪೌಡರ್ ಮತ್ತು 1 ಕೆ.ಜಿ ಸಿಹೆಚ್ ಪೌಡರ್ ಪೇಸ್ಟ್ ವಶ ಪಡಿಸಿಕೊಂಡಿದ್ದು, ಒಟ್ಟು ಮೌಲ್ಯ 17,170 ರೂ. ವಶ ಪಡೆಸಿಕೊಳ್ಳ ಲಾಗಿದೆ. ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಿ.ಹೆಚ್ ಪೌಡರ್ ಸರಬರಾಜು ಮಾಡುವ ವ್ಯಕ್ತಿಯ ಪತ್ತೆಗೆ ತನಿಖೆ ಮುಂದುವರೆದಿದ್ದು, ಅಬಕಾರಿ ನಿರೀಕ್ಷಕರಾದ ಜೆಟ್ಟೆಪ್ಪ ಬಿ.ಬೇಲೂರು, ಅಬಕಾರಿ ಪೇದೆಗಳಾದ ಗೌತಮ ಬುದ್ದ, ಶಿವಶರಣಪ್ಪ, ಸಿದ್ಧಾರೂಢ ಮತ್ತು ಮಿರಿಯಾಣ ಪೊಲೀಸ್ ಠಾಣೆಯ ಮಹಿಳಾ ಪೇದೆಯಾದ ಸವಿತಾ ಕಾಶಿನಾಥ ಹಾಗೂ ವಾಹನ ಚಾಲಕ ಗುರುನಾಥ ಇದ್ದರು.