Sunday, 27th October 2024

ನಗರದ 20 ಪ್ರದೇಶಗಳು ಕಂಟೈನ್‌ಮೆಂಟ್ ಜೋನ್

ಬೆಂಗಳೂರು:
ಮಾರಕ ಕರೋನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ರಾಜಧಾನಿ ಬೆಂಗಳೂರಿನಲ್ಲಿ 20 ಪ್ರದೇಶಗಳನ್ನು ಕಂಟೈನ್ ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.
ಈ ಹಿಂದೆ ಬಿಬಿಎಂಪಿ ಘೋಷಣೆ ಮಾಡಿದ್ದ ಕಂಟೈನ್ ಮೆಂಟ್ ಝೋನ್ ಗಳನ್ನು 30ರಿಂದ 20ಕ್ಕೆ ಇಳಿಕೆ ಮಾಡಲಾಗಿದ್ದು, ಪ್ರಸ್ತುತ ಘೋಷಣೆ ಮಾಡಿರುವ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ಕಠಿಣವಾಗಿ ಜಾರಿ ಮಾಡಲು ಅಧಿಕಾರಿಗಳು  ಮುಂದಾಗಿದ್ದಾರೆ,
ಕಳೆದ ಶನಿವಾರ ಅಧಿಕಾರಿಗಳು ಬೆಂಗಳೂರಿನ 30 ವಾರ್ಡ್ ಗಳನ್ನು ಕಂಟೈನ್ ಮೆಂಟ್ ಝೋನ್ ಗಳಾಗಿ ಘೋಷಣೆ ಮಾಡಿದ್ದರು. ಬಳಿಕ ಈ ಪೈಕಿ 2 ವಾರ್ಡ್ ಗಳನ್ನು ಕಂಟೈನ್ ಮೆಂಟ್ ಝೋನ್ ಪಟ್ಟಿಯಿಂದ ಕೈ ಬಿಟ್ಟು 28 ವಾರ್ಡ್ ಗಳ ಹೊಸ ಪಟ್ಟಿ ಬಿಡುಗಡೆ ಮಾಡಿದ್ದರು. ಇದೀಗ ಮತ್ತೆ  ಪಟ್ಟಿಯನ್ನು ಅಧಿಕಾರಿಗಳು ಪರಿಷ್ಕರಿಸಿದ್ದು, 8 ವಾರ್ಡ್ ಗಳನ್ನು ಕೈ ಬಿಟ್ಟು 20 ವಾರ್ಡ್ ಗಳ ನೂತನ ಕಂಟೈನ್ ಮೆಂಟ್ ಝೋನ್ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬೊಮ್ಮನಹಳ್ಳಿ, ಯಲಹಂಕ ಮತ್ತು ರಾಜರಾಜೇಶ್ವರಿ ನಗರಗಳಲ್ಲಿ ತಲಾ ಒಂದೊಂದು ಹಾಟ್ಸ್ ಸ್ಪಾಟ್ ಗಳಿದ್ದರೂ ಈ ಮೂರು  ವಾರ್ಡ್ ಗಳನ್ನು ಕಂಟೈನ್ ಮೆಂಟ್ ಝೋನ್ ಪಟ್ಟಿಯಿಂದ ಕೈ ಬಿಡಲಾಗಿದೆ.