ತೆಂಗಿನ ಕಾಯಿ ಮಹತ್ವ ತಿಳಿಸಿದ್ದ ವಿಶ್ವೇಶ್ವರ ಭಟ್
ತುಮಕೂರು: ಕಲ್ಪತರು ನಾಡಿನ ಪ್ರಮುಖ ಉತ್ನನ್ನವಾಗಿರುವ ಕೊಬ್ಬರಿಯಿಂದ ಎಣ್ಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ದೇಶ, ವಿದೇಶಗಳಿಗೆ ರಫ್ತು ಮಾಡುವ ಸಂಬಂಧ ಜಿಲ್ಲೆಯ ಅಕೃತಿ ಅಗ್ರಿಟೇಕ್ ಮತ್ತು ಆಗ್ಟೆಕ್ ವೇವ್ಸ್ ಸಂಸ್ಥೆಯೊಂದಿಗ ಇಸ್ರೇಲ್ನ ಎಂ.ಡಿ, ಹೆಚ್.ಐ, ಆರ್.ಎನ್.ಡಿ ಪ್ರಾಡಕ್ ಜತೆಗೆ ಒಪ್ಪಂದ ಮಾಡಿ ಕೊಂಡಿದ್ದು, ಇದರಿಂದ ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದು ಅಕೃತಿ ಆಗ್ರಿಟೆಕ್ ಸಿಇಓ ಅಶೋಕ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯ 50 ಜನ ಯುವಜನರಿಗೆ ಉದ್ಯೋಗ ದೊರೆಯುವ 18 ಕೋಟಿ ರೂಗಳ ವ್ಯಾಪಾರ, ವಹಿವಾಟು ಒಪ್ಪಂದಕ್ಕೆ ಇಸ್ರೇಲ್ನ ಎಂ.ಡಿ.ಹೆಚ್.ಐ ಆರ್.ಎನ್.ಡಿ. ಪ್ರಾಡಕ್ಟ್ ಡಾ.ಡೇವಿಡ್ ಮಿರ್ಜಾಹಿ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು,ಕೊಬ್ಬರಿಯಿಂದ ಎಣ್ಣೆ ತಯಾರಿಕೆ ಹಾಗೂ ಡೆಸಿಕೇಟ್ಡ್ ಕೋಕನಟ್ ಪೌಡರ್ ಮತ್ತು ತೆಂಗು ಆಧಾರಿತ ಪಧಾರ್ಥ ಗಳನ್ನು ಜಿಲ್ಲೆಯ ತೆಂಗು ಉಪಯೋಗಿಸಿ, ಉತ್ಪಾಧಿಸುವ ನಿಟ್ಟಿನಲ್ಲಿ ಬಂಡವಾಳ ಹೂಡಲು ಇಸ್ರೆಲ್ ಸಂಸ್ಥೆ ಮುಂದೆ ಬಂದಿದೆ. ಜತೆಗೆ ತಾಂತ್ರಿಕ ಮತ್ತು ಮಾರು ಕಟ್ಟೆ ಸಹಕಾರವನ್ನು ಸಹ ಅಕೃತಿ ಅಗ್ರಿಟೆಕ್ ಮತ್ತು ಆಗ್ಟೆಕ್ ವೇವ್ಸ್ ಸಂಸ್ಥೆಗೆ ನೀಡಲು ಮುಂದೆ ಬಂದಿದೆ ಎಂದರು.
ಕಲ್ಪತರು ನಾಡು ಎಂದು ಕರೆಯಿಸಿಕೊಳ್ಳುವ ತುಮಕೂರು ಜಿಲ್ಲೆಯಲ್ಲಿ ಕೊಬ್ಬರಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಅದರಲ್ಲಿಯೂ ಜಿಲ್ಲೆಯ ತಿಪಟೂರು ಭಾಗದ ಕೊಬ್ಬರಿಗೆ ಉತ್ತರ ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದನ್ನು ಮನಗಂಡು, ಕೊಬ್ಬರಿಯಿಂದ ತೆಗೆದ ಎಣ್ಣೆ ಹಾಗೂ ಡೆಸಿಕೇಟಡ್ ಕೋಕನಟ್ ಪೌಢರ್ ಮತ್ತಿತರರ ಉತ್ಪನ್ನಗಳನ್ನು ಉತ್ಪಾಧಿಸಿ ಅಕೃತಿ ಅಗ್ರಿಟೆಕ್ ಮತ್ತು ಆಗ್ಟೆಕ್ ವೇವ್ಸ್ ಸಂಸ್ಥೆಗಳು ಅಕೃತಿ ಕೋಕೋ ಡೈಸ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿದೆ. ಇದನ್ನು ಮತ್ತಷ್ಟು ಅಭಿವೃದ್ದಿ ಪಡಿಸಲು ಶಿರಾ ಬಳಿಯ ಕೈಗಾರಿಕಾ ವಲಯದಲ್ಲಿ ಜಾಗ ಪಡೆದು, ಹೊಸ ಇಂಡಸ್ಟ್ರಿ ತೆರೆಯಲಾಗುತ್ತಿದೆ. ಇದರಿಂದ ಜಿಲ್ಲೆಯ ರೈತರು ಬೆಳೆಯುವ ತೆಂಗಿಗೆ ಹೆಚ್ಚಿನ ಬೇಡಿಕೆ ಮತ್ತು ಬೆಲೆ ಬರಲಿದೆ ಎಂದು ಅಶೋಕ್ ತಿಳಿಸಿದರು.
ಅಕೃತಿ ಅಗ್ರಿಟೆಕ್ ಮತ್ತು ಆಗ್ಟಕ್ ವೇವ್ಸ್ ಸಂಸ್ಥೆ ಉತ್ಪಾಧಿಸುತ್ತಿರುವ ತೆಂಗಿನ ಉತ್ಪನ್ನ ಗಳಿಗೆ ತೆಂಗಿನ ಕಾಯಿಯ ಮೇಬ್ಬಾಗದ ಸಿಪ್ಪೆ ಬಿಸ್ಕೇಟ್ ಕಲರ್ 680 ಗ್ರಾಂ ಮತ್ತು ಬಾದಾಮಿ ಕಲರ್ 550 ಗ್ರಾಮ್ ತೂಕವಿರುವ ಕಾಯಿಗಳನ್ನು ಬಳಸಲಾಗುತ್ತಿದೆ.ಈ ಮಾನದಂಡದ ಕಾಯಿಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ವಸ್ತು ಗಳನ್ನು ಉತ್ಪಾಧಿಸಲಾಗುತ್ತಿದೆ.28 ದೇಶಗಳಲ್ಲಿ ಅಕೃತಿ ಮತ್ತು ಅಗ್ಟೆಕ್ಸ್ ಉತ್ಪನ್ನಗಳಿಗೆ ಬೇಡಿಕೆ ಇದೆ ಎಂದರು.
ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಸಂಶೋಧನಾ ಮುಖ್ಯಸ್ಥ ಡಾ.ಲೋಗಾನಂದನ್ ಮಾತನಾಡಿ,ಪ್ರಧಾನ ಮಂತ್ರಿಗಳ ಒಂದು ಜಿಲ್ಲೆ, ಒಂದು ಉತ್ಪನ್ನದ ಅಡಿಯಲ್ಲಿ ತೆಂಗಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ರೈತರು ಸಹ ಇಂತಹ ತಂತ್ರಜ್ಞಾನ ಅಳವಡಿಸಿಕೊಂಡು ಅರ್ಥಿಕವಾಗಿ ಮುಂದುವರೆಯುವಂತೆ ಸಲಹೆ ನೀಡಿದರು.
ಸಿದ್ದಗಂಗಾ ಇನ್ಕ್ಯುಬೇಷನ್ ಸೆಂಟರನ ಮುಖ್ಯಸ್ಥ ಡಾ.ಲೋಹಿತ್ ಸಿ.ಪಿ.ಮಾತನಾಡಿ, ಎಸ್.ಐ.ಟಿ ಇನ್ಕ್ಯೂಬೇಷನ್ ಸೆಂಟರ್ ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗೆ ತೊಡಗುವ ವಿದ್ಯಾರ್ಥಿಗಳಿಗೆ ಒಂದು ಅವಕಾಶ ಕಲ್ಪಿಸಲಿದೆ. ಈಗಾಗಲೇ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್ ಅಫ್ಗಳಿಗೆ 5 ಕೋಟಿ ಅನುದಾನ ನೀಡಿದೆ. ಇದು ದೇಶದಲ್ಲಿ ಇಂಜಿನಿಯರಿಂಗ್ ಕಾಲೇಜಿಗೆ ನೀಡುತ್ತಿರುವುದು ಮೊದಲು ಎಂದರು.
ಸುದ್ದಿಗೋಷ್ಠಿಯಲ್ಲಿ ಕೋಕೋಡೈಸ್ನ ಪ್ರವರ್ತಕ ನಿಶಾ ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವೇಶ್ವರ ಭಟ್ ಅವರ ಮಾರ್ಗದರ್ಶನ ಅನುಕೂಲವಾಯಿತು
ತುಮಕೂರು ಜಿಲ್ಲೆಯವರಾಗಿದ್ದರೂ ತೆಂಗಿನಕಾಯಿ, ಕೊಬ್ಬರಿ ಮಹತ್ವ ನಮಗೆ ತಿಳಿದಿಲ್ಲ. ಒಮ್ಮೆ ಇಸ್ರೇಲ್ ದೇಶಕ್ಕೆ ಕಾರ್ಯಾ ಗಾರದಲ್ಲಿ ಭಾಗವಹಿಸಲು ತೆರಳಿದ್ದಾಗ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಸಿಕ್ಕಿದ್ದರು.
ಜಿಲ್ಲೆಯ ತೆಂಗಿಗೆ ಇಸ್ರೇಲ್ ಸೇರಿದಂತೆ ಬೇರೆ ದೇಶಗಳಲ್ಲಿ ಬಹಳ ಬೇಡಿಕೆಯಿದೆ, ಅದರ ಅನುಕೂಲ ಪಡೆದುಕೊಳ್ಳಿ ಎಂದು ಮಾರ್ಗದರ್ಶನ ಮಾಡಿದ್ದರು. ಅದರ ಪರಿಣಾಮವಾಗಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದು ಅಕೃತಿ ಆಗ್ರಿಟೆಕ್ ಸಿಇಓ ಅಶೋಕ್ ಹರ್ಷ ವ್ಯಕ್ತಪಡಿಸಿದರು.