Saturday, 23rd November 2024

ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪನೆ ಮಾಡುವುದಿಲ್ಲ: ಎಲೋನ್ ಮಸ್ಕ್

ಟೆಕ್ಸಾಸ್: ಆಮದು ಕಾರುಗಳ ಮಾರಾಟಕ್ಕೆ ಅನುಮತಿ ನೀಡುವವರೆಗೂ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪನೆ ಮಾಡುವು ದಿಲ್ಲ ಎಂದು ಟೆಸ್ಲಾ ಕಂಪೆನಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಲೋನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಬೇಡಿಕೆಯ ವಾಹನವಾಗಿದ್ದು, ಉತ್ತಮ ಮಾರುಕಟ್ಟೆ ಹೊಂದಿದೆ.

2020ರಲ್ಲಿ ಭಾರತದಲ್ಲಿ ಟೆಸ್ಲಾ ಉತ್ಪಾದಕ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆದರೆ ಭಾರತದಲ್ಲಿ ತೆರಿಗೆ ಪದ್ಧತಿ ದುಬಾರಿ ಯಾಗಿದೆ, ಕೆಲವು ತೊಂದರೆಗಳು ಇವೆ. ಭಾರತ ಸರ್ಕಾರ ಆಮದು ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲು ಅವಕಾಶ ನೀಡದ ಹೊರತು ಅಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವುದಿಲ್ಲ ಎಂದು ಪ್ರಶ್ನೆಗೆ ಪ್ರತಿ ಕ್ರಿಯಿಸಿದ್ದಾರೆ.

ಕಳೆದ ಏಪ್ರಿಲ್‍ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ, ಎಲೋನ್ ಮಸ್ಕ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನಾ ಘಟಕ ಸ್ಥಾಪಿಸಲು ಸ್ವಾಗತವಿದೆ. ಆದರೆ ಮಸ್ಕ್ ಚೀನಾ ದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಿ ಮಾರಾಟವನ್ನು ಭಾರತದಲ್ಲಿ ಮಾಡುತ್ತೇನೆ ಎಂದರೆ ಅದು ಉತ್ತಮ ಪ್ರಸ್ತಾವನೆ ಯಾಗಲಾರದು ಎಂದಿದ್ದರು.

ಭಾರತದಲ್ಲಿ ದುಬಾರಿ ತೆರಿಗೆ ಎಂಬ ಆಕ್ಷೇಪಕ್ಕೂ ಗಡ್ಕರಿ ಪ್ರತಿಕ್ರಿಯಿಸಿದರು. ಮಸ್ಕ್ ಉತ್ಪಾದನಾ ಘಟಕ ಸ್ಥಾಪಿಸುವುದಾರೆ ಎಲ್ಲಾ ರೀತಿಯ ಅನುಕೂಲತೆ ಸಿಗಲಿವೆ. ಉತ್ಪಾದನಾ ವೆಚ್ಚವು ಕಡಿಮೆಯಾಗಲಿದೆ. ದೊಡ್ಡ ಮಾರುಕಟ್ಟೆಯಿದೆ, ರಫ್ತಿಗೆ ಅನುಕೂಲ ವಾಗುವಂತೆ ಬಂದರು ಸೇರಿದಂತೆ ಉತ್ತಮ ಮೂಲಸೌಲಭ್ಯಗಳಿವೆ.

ಇತ್ತೀಚೆಗೆ ವಿದ್ಯುತ್ ವಾಹನಗಳ ಕ್ಷೇತ್ರ ವ್ಯಾಪಕವಾಗಿ ಬೆಳೆಯುತ್ತಿದೆ. ಅದರಿಂದ ಸರ್ಕಾರ ಮತ್ತು ಉದ್ಯಮ ಇಬ್ಬರಿಗೂ ಅನುಕೂಲ ವಾಗಲಿದೆ. ಆದರೆ ಚೀನಾದಲ್ಲಿ ಉತ್ಪಾದಿಸಿ ಇಲ್ಲಿ ಮಾರುತ್ತೇವೆ ಎಂದರೆ ಅನುಮತಿ ನೀಡುವುದಿಲ್ಲ ಎಂದಿದ್ದರು.

ಬೃಹತ್ ಉದ್ಯಮಗಳ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜಾರ್ ಇದೇ ಭಾವನೆಯಲ್ಲಿ ಮಾತನಾಡಿದರು. ಚೀನಾದಲ್ಲಿ ಉದ್ಯೋಗ ಸೃಷ್ಟಿಸಿ, ಭಾರತದಲ್ಲಿ ಮಾರುಕಟ್ಟೆ ಮಾಡುತ್ತೇನೆ ಎಂದರೆ ಅವಕಾಶವಿಲ್ಲ ಎಂದಿದ್ದರು.

2020ದಲ್ಲಿ ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪನೆಯನ್ನು ಘೋಷಿಸಿದ್ದ ಮಸ್ಕ್ ದೇಶದ ನೈರುತ್ಯ ಭಾಗದಲ್ಲಿರುವ ಬೆಂಗಳೂರಿ ನಲ್ಲಿ ಟೆಸ್ಲಾದ ಅಂಗ ಸಂಸ್ಥೆ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರವೈಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು.