Friday, 22nd November 2024

ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆ

ಚಂಡೀಘರ್: ಪಂಜಾಬಿನಲ್ಲಿ ಸರಕಾರ ಗಣ್ಯರ ಭದ್ರತೆ ವಾಪಸ್ ಪಡೆದ 24 ಗಂಟೆಯಲ್ಲೇ ಮಾನ್ಸಾ ಗ್ರಾಮದಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕಾಂಗ್ರೆಸ್ ನಾಯಕ ಮತ್ತು ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕರೆತರಲಾಗಿತ್ತು. ಒಟ್ಟು ಮೂವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಅದರಲ್ಲಿ ಸಿದ್ದು ಮೂಸೆವಾಲಾ ಮೃತಪಟ್ಟಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಸಂಸ್ಥೆಗೆ ಶಿಫಾರಸು ಮಾಡಲಾಗಿದೆ ಎಂದು ಮಾನಸಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ರಂಜೀತ್ ರೈ ಹೇಳಿದ್ದಾರೆ.

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಪಂಜಾಬ್ ಪೊಲೀಸರು ಹಿಂತೆಗೆದುಕೊಂಡ ಒಂದು ದಿನದಲ್ಲಿ ಈ ಘಟನೆ ನಡೆದಿದೆ.

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗಾಯಕ ಸಿಧು ಮೂಸೆವಾಲಾ ಮಾನ್ಸಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ದ್ದರು. ಎಎಪಿ ಅಭ್ಯರ್ಥಿ ವಿಜಯ್ ಸಿಂಗ್ಲಾ ವಿರುದ್ಧ 63,000 ಮತಗಳ ಭಾರೀ ಅಂತರದಿಂದ ಸೋಲು ಅನುಭವಿಸಿದ್ದರು. ಭ್ರಷ್ಟಾ ಚಾರದ ಆರೋಪದ ಮೇಲೆ ವಿಜಯ್ ಸಿಂಗ್ಲಾ ಅವರನ್ನು ಇತ್ತೀಚೆಗೆ ಪಂಜಾಬ್ ಸಿಎಂ ವಜಾಗೊಳಿಸಿದ್ದರು.

ಕಳೆದ ತಿಂಗಳಷ್ಟೇ, ಸಿದ್ದು ಮೂಸೆವಾಲಾ ತಮ್ಮ ಇತ್ತೀಚಿನ ಹಾಡು ‘ಬಲಿಪಶು’ ದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಅದರ ಬೆಂಬಲಿಗ ರನ್ನು ಗುರಿಯಾಗಿಸಿಕೊಂಡಿ ದ್ದರು. ತನ್ನ ಹಾಡಿನಲ್ಲಿ ಎಎಪಿ ಬೆಂಬಲಿಗರನ್ನು ‘ಗದ್ದರ್’ ಅಂದರೆ ದೇಶದ್ರೋಹಿ ಎಂದು ಕರೆದಿದ್ದರು.

ಪಂಜಾಬ್‌ನ ಪ್ರತಿಭಾವಂತ ಸಂಗೀತಗಾರ ಸಿಧು ಮೂಸ್ ವಾಲಾ ಹತ್ಯೆಯು ಕಾಂಗ್ರೆಸ್ ಪಕ್ಷಕ್ಕೆ ಮತ್ತು ಇಡೀ ರಾಷ್ಟ್ರಕ್ಕೆ ಆಘಾತ ವನ್ನುಂಟು ಮಾಡಿದೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ನಮ್ಮ ಸಂತಾಪಗಳು,” ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ.