Saturday, 23rd November 2024

ಬಿಹಾರದ ’ಮಹಾತ್ಮ ಗಾಂಧಿ ಸೇತು’ ಜೂನ್ 7ರಂದು ಲೋಕಾರ್ಪಣೆ

ಪಾಟ್ನಾ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ಬಿಹಾರದ ಮಹಾತ್ಮ ಗಾಂಧಿ ಸೇತು ಜೂನ್ 7 ರಂದು ಲೋಕಾರ್ಪಣೆಗೊಳ್ಳಲಿದೆ.

ನವೀಕರಣಗೊಂಡ ಸೇತುವೆ ಅಂದಿನಿಂದ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗ ಲಿದೆ. ಗಂಗಾ ನದಿಯ ಮೇಲೆ ನಿರ್ಮಾಣ ಗೊಂಡಿರುವ ಈ ಸೇತುವೆಯು 5.6 ಕಿ.ಮೀ ಉದ್ದವಿದೆ. ಇದು ಬಿಹಾರದ ರಾಜಧಾನಿ ದಕ್ಷಿಣದ ಪಾಟ್ನಾ ಮತ್ತು ಉತ್ತರದ ಹಾಜಿಪುರ ನಗರಗಳನ್ನು ಸಂಪರ್ಕಿಸುತ್ತದೆ.

39 ವರ್ಷಗಳ ಹಿಂದೆಯೇ ಸೇತುವೆ ನಿರ್ಮಾಣಗೊಂಡಿತ್ತು. ಶಿಥಿಲಗೊಂಡಿದ್ದ ಹಿನ್ನೆಲೆ ಯಲ್ಲಿ ಪುನರ್ ನಿರ್ಮಾಣಗೊಂಡಿದೆ. 5,750 ಮೀಟರ್ ಉದ್ದದ ಮಹಾತ್ಮಾ ಗಾಂಧಿ ಸೇತುವೆಯನ್ನು 1982 ರಲ್ಲಿ ಉದ್ಘಾಟಿಸಲಾಗಿತ್ತು. ಅಂದಿನ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಹಾಜಿಪುರದಲ್ಲಿ ನಡೆದ ಸಮಾರಂಭದಲ್ಲಿ ಸೇತುವೆಯನ್ನು ಲೋಕಾರ್ಪಣೆ ಗೊಳಿಸಿದ್ದರು.

ವಾಹನಗಳ ಸತತ ಸಂಚಾರದಿಂದ ಸೇತುವೆಯ ತೂಕ ತಡೆದುಕೊಳ್ಳುವ ಸಾಮರ್ಥ್ಯ ಕುಸಿದಿತ್ತು. ಸೇತುವೆಯ ಪುನರ್ ನಿರ್ಮಾಣ ಕಾರ್ಯ 2017 ರಲ್ಲಿ ಪ್ರಾರಂಭಿಸಲಾಯಿತು. ಸೇತುವೆಯ ಮೇಲ್ವಿನ್ಯಾಸವನ್ನು ಸಂಪೂರ್ಣವಾಗಿ ಉಕ್ಕಿನಿಂದ ನಿರ್ಮಿಸಲು ಯೋಜಿಸ ಲಾಯಿತು. 1,742 ಕೋಟಿ ರು. ವೆಚ್ಚದಲ್ಲಿ ನೂತನ ಉಕ್ಕಿನ ಸೇತುವೆ ನರ್ಮಾಣಗೊಂಡಿದೆ. ಸೇತುವೆಯ ನಿರ್ಮಾಣದ ಹೊಣೆ ಯನ್ನು ಅಫ್ಕಾನ್ಸ್ ಇನ್ಫ್ರಾಸ್ಟಕ್ಚರ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.

ಸೇತುವೆಯ ಪುನರ್ ನಿರ್ಮಾಣ ಕಾರ್ಯವು 2017ರಲ್ಲಿ ಪ್ರಾರಂಭವಾಯಿತು ಮತ್ತು ಇದರ ಪಶ್ಚಿಮ ಭಾಗವನ್ನು 2020ರಲ್ಲಿ ಉದ್ಘಾಟಿಸಲಾಯಿತು. ಕೆಲವು ವರ್ಷಗಳು ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯ ಹೊರತಾಗಿಯೂ ಈ ಸಂಕೀರ್ಣ ಸೇತುವೆಯ ಪುನರ್ ನಿರ್ಮಾಣ ಕಾರ್ಯ ಕೇವಲ ಐದು ವರ್ಷಗಳಲ್ಲಿ ಪೂರ್ಣಗೊಂಡಿರುವುದು ಗಮನಾರ್ಹವಾಗಿದೆ.