Sunday, 15th December 2024

ಪ್ಲಾಸ್ಮಾ ಚಿಕಿತ್ಸೆ ಅನುಮತಿ

ಬೆಂಗಳೂರು:
ಕರೋನಾ ಪೀಡಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (Indian Council of Medical Research) ಅನುಮತಿ ನೀಡಿದ್ದು ಇನ್ನೂ ರಾಜ್ಯದಲ್ಲಿ ಈ ಮಾದರಿಯ ಚಿಕಿತ್ಸೆ ಮುಂದುವರೆಸಬಹುದು ಎಂದು ಸಚಿವ ಡಾ|ಕೆ. ಸುಧಾಕರ್‌ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೋನಾದಿಂದ ಗುಣಮುಖರಾದ ವ್ಯಕ್ತಿಯ ದೇಹದಿಂದ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುವ ರಕ್ತದ ಕಣಗಳನ್ನು ರೋಗ ಪೀಡಿತ ವ್ಯಕ್ತಿಗೆ ನೀಡುವ ಮೂಲಕ ಆತನನ್ನೂ ಈ ಕಾಯಿಲೆಯಿಂದ ಗುಣಪಡಿಸಬಹುದು. ಡಾ. ವಿಶಾಲ್ ರಾವ್ ಅವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಐಸಿಎಂಆರ್‌ ಈಗಾಗಲೇ ಅನುಮತಿ ನೀಡಿದೆ.
 ಈ ಚಿಕಿತ್ಸೆ ಫಲಕಾರಿಯಾದರೆ ಕರೋನಾದಿಂದ ಗುಣಮುಖರಾದವರಿಂದ ಕನಿಷ್ಠ ಇಬ್ಬರು ಮೂವರು ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಮಾಡಬಹುದು. ರಾಜ್ಯದಲ್ಲಿ ಈಗಾಗಲೇ 129 ಜನ ಕೊರೋನಾದಿಂದ ಮುಣಮುಖರಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಕುರಿತು ಮಾತನಾಡಿರುವ ಅವರು, “ಬೆಂಗಳೂರು ರೆಡ್‌ ಜೋನ್ ಇತ್ತು. ಆದರೆ, ಕಳೆದ ಮೂರು ದಿನಗಳಿಂದ ನಗರದಲ್ಲಿ ಒಂದೇ ಒಂದು ಹೊಸ ಪ್ರಕರಣ ಕಂಡು ಬಂದಿಲ್ಲ.ಅಷ್ಟರ ಮಟ್ಟಿಗೆ ನಾವು ಒಳ್ಳೆ ಪೊಸಿಷನ್ ನಲ್ಲಿದ್ದೇವೆ. ನಿನ್ನೆ ಸಂಜೆಯವರೆಗಿನ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ ರಾಜ್ಯದಲ್ಲಿ 418 ಎಂದು ಮಾಹಿತಿ ನೀಡಿದ್ದಾರೆ.