Saturday, 26th October 2024

ಬಿಐಎಎಲ್‌ಗೆ ಎಸಿಐನ ಗ್ರೀನ್ ಏರ್‌ಪೋರ್ಟ್ ರಿಕಗ್ನಿಷನ್ ೨೦೨೨ ಉನ್ನತ ಪುರಸ್ಕಾರ

೨೦೨೧ರ ವರ್ಷಕ್ಕೆ ಸಸ್ಟೇನಬಿಲಿಟಿ ಉಕ್ರಮಗಳಿಗೆ `ಗೋಲ್ಡನ್ ಪೀಕಾಕ್ ಅವಾರ್ಡ್’ಗೂ ಭಾಜನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ ಪೋರ್ಟ್ ಲಿಮಿಟೆಡ್(ಬಿಐಎಎಲ್)ಗೆ ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್(ಎಸಿಐ) ಪ್ರದಾನ ಮಾಡುವ ಗ್ರೀನ್ ಏರ್‌ ಪೋರ್ಟ್ ರಿಕಗ್ನಿಷನ್ ೨೦೨೨ ಪ್ಲಾಟಿನಂ ಪ್ರಶಸ್ತಿ ನೀಡಲಾಗಿದೆ.

ಬಿಐಎಎಲ್ ತನ್ನ ಇಂಗಾಲದ ಹೊರಹೊಮ್ಮುವಿಕೆಯಲ್ಲಿ ವಾರ್ಷಿಕ ೧೫-೫೦ ಮಿಲಿ ಯನ್ ಪ್ರಯಾಣಿಕರ ನಿರ್ವಹಣೆಯ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಬಿಐಎಎಲ್ ಶೇ.೧೦೦ ರಷ್ಟು ನವೀಕರಿಸಬಲ್ಲ ವಿದ್ಯುಚ್ಛಕ್ತಿ(೭೦ ಮಿಲಿಯನ್ ಯೂನಿಟ್‌ಗಳು) ಬಳಸುತ್ತಿದ್ದು ಇದರಿಂದ ಝೀರೋ (>೫೦೦೦೦ ಎಂಟಿಯಷ್ಟು ಇಂಗಾಲದ ಹೊರಹೊಮ್ಮುವಿಕೆ ಕಡಿತ) ಸ್ಕೋಪ್ ಎಮಿಷನ್ಸ್ ಸಾಧಿಸುತ್ತಿದೆ.

ಅಲ್ಲದೆ ಬಿಐಎಎಲ್ ತನ್ನ ಇಂಗಾಲದ ಹೊರಹೊಮ್ಮುವಿಕೆ ಕಡಿಮೆ ಮಾಡಿರುವ ಕಾರಣ ಮತ್ತು ತನ್ನ ದೈನಂದಿನ ಕಾರ್ಯಾ ಚರಣೆಗಳಲ್ಲಿ ಸುಸ್ಥಿರತೆ ಸುಧಾರಣೆಗೆ `ಗೋಲ್ಡನ್ ಪೀಕಾಕ್ ಅವಾರ್ಡ್ ಫಾರ್ ಸಸ್ಟೇನಬಿಲಿಟಿ ೨೦೨೧’ ಪುರಸ್ಕಾರವನ್ನೂ ಗೆದ್ದಿದೆ.

ಎನರ್ಜಿ ನ್ಯೂಟ್ರಾಲಿಟಿ, ವಾಟರ್ ಪಾಸಿಟಿವಿಟಿ, ಎಲ್ಲ ರೀಟೇಲ್ ಆಹಾರ ಮತ್ತು ಪಾನೀಯ ಮಳಿಗೆಗಳಲ್ಲಿ ಒಮ್ಮೆ ಬಳಕೆಯ ಪ್ಲಾಸ್ಟಿಕ್ ನಿವಾರಣೆ ಮತ್ತು ಸಸ್ಟೇನಬಿಲಿಟಿ ವಿಷನ್ ಅಂಡ್ ರೋಡ್‌ಮ್ಯಾಪ್ ೨೦೩೦ ಅಂತಹ ಉಪಕ್ರಮಗಳಿಗೆ ಈ ಕಾರ್ಯಕ್ರಮ ದಲ್ಲಿ ಅಪಾರ ಪ್ರಶಂಸೆ ದೊರಕಿದೆ.

ಕಳೆದ ಒಂದು ದಶಕದಲ್ಲಿ ಬಿಐಎಎಲ್ ಸಂಸ್ಥೆಯ ಸುಸ್ಥಿರತೆಯ ಗುರಿಗಳನ್ನು ಸಾಧಿಸಲು ಹಲವು ಶ್ರೇಷ್ಠ ರೂಢಿಗಳನ್ನು ಜಾರಿ ಗೊಳಿಸಿದೆ ಮತ್ತು ಸುಸ್ಥಿರ ವೈಮಾನಿಕತೆಯನ್ನು ಉತ್ತೇಜಿಸುವುದರಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣದ ವಹಿವಾಟು ಮತ್ತು ಕಾರ್ಯಾಚರಣೆಗಳು ವಿಸ್ತರಿಸುತ್ತಿರುವಂತೆ ಬಿಐಎಎಲ್‌ನ ಸುಸ್ಥಿರತೆಯ ಗುರಿ “ಟಚ್ ಲೈವ್ಸ್ ಬೈ ನರ್ಚರಿಂಗ್ ಎ ಸಸ್ಟೇನಬಲ್ ಫ್ಯೂಚರ್ ಥ್ರೂ ಇನಿಷಿಯೇಟಿವ್ಸ್ ದಟ್ ಡ್ರೈವ್ ಇಕನಾಮಿಕ್, ಸೋಷಿಯಲ್ ಅಂಡ್ ಎನ್ವಿರಾನ್‌ಮೆಂಟಲ್ ಟ್ರಾನ್ಸ್ಫಾರ್ಮೇಷನ್”(ಆರ್ಥಿಕ, ಸಾಮಾಜಿಕ ಮತ್ತು ಪಾರಿಸರಿಕ ಪರಿವರ್ತನೆಯನ್ನು ಮುನ್ನಡೆಸುವ ಉಪಕ್ರಮಗಳ ಮೂಲಕ ಸುಸ್ಥಿರ ಭವಿಷ್ಯವನ್ನು ಪೋಷಿಸಿ ಜೀವನಗಳನ್ನು ತಲುಪುತ್ತದೆ) ವಿಸ್ತರಣೆ ಹೊಂದಿದೆ.

ಬೆಂಗಳೂರು ವಿಮಾನ ನಿಲ್ದಾಣ ತನ್ನ ಸುಸ್ಥಿರತೆಯ ಉಪಕ್ರಮಗಳಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ಗ್ರೀನ್ ಬಿಲ್ಡಿಂಗ್ ಸರ್ಟಿಫಿಕೇಷನ್ ಇಂಕ್.(೨೦೨೨)ನಿ0ದ ಪ್ರತಿಷ್ಠಿತ ಪೀರ್(ಪರ್ಫಾರ್ಮೆನ್ಸ್ ಎಕ್ಸೆಲೆನ್ಸ್ ಇನ್ ಎಲೆಕ್ಟಿçಸಿಟಿ ರಿನ್ಯೂವಲ್) ಪ್ಲಾಟಿನಂ ಪ್ರಮಾಣೀಕರಣ; ಎಫ್‌ಐಸಿಸಿಐ ಸ್ಮಾರ್ಟ್ ಅರ್ಬನ್ ಇನ್ನೋವೇಷನ್ ಅವಾರ್ಡ್ ಫಾರ್ ಸೋಲಾರ್ ಅಂಡ್ ರಿನ್ಯೂಯಬಲ್ ಎನರ್ಜಿ(೨೦೨೧); ಸಿಐಐ ಮೋಸ್ಟ್ ಇನ್ನೊವೇಟಿವ್ ಎನ್ವಿರಾನ್‌ಮೆಂಟಲ್ ಪ್ರಾಜೆಕ್ಟ್ ಅವಾರ್ಡ್ ಮತ್ತು ವಾತಾವರಣ ಬದಲಾ ವಣೆಯನ್ನು ಪರಿಣಾಮ ನಿಭಾಯಿಸಿದೆ ಮತ್ತು ಅಳವಡಿಕೆಯ ಉಪಕ್ರಮಗಳಿಗೆ ಸಿಐಐ “ಮೋಸ್ಟ್ ಯೂಸ್‌ಫುಲ್ ಎನ್ವಿರಾನ್‌ ಮೆಂಟಲ್ ಪ್ರಾಜೆಕ್ಟ್ ಅವಾರ್ಡ್ ೨೦೨೧” ಪಡೆದಿದೆ.