Saturday, 26th October 2024

ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿಗಳ ಸಂವಾದ

ಆಜಾದಿ ಕಾ ಅಮೃತ್ ಮಹೋತ್ಸವ ಹಿನ್ನೆಲೆ

ಕಲಬುರಗಿ: ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಕೇಂದ್ರ ಪುರಸ್ಕೃತ ವಿವಿಧ ಯೋಜನೆ, ಕಾರ್ಯಕ್ರಮಗಳ ದೇಶದಾದ್ಯಂತ ಫಲಾನುಭವಿಗಳೊಂದಿಗೆ ವರ್ಚುವಲ್ ವೇದಿಕೆ ಮೂಲಕ ಸಂವಾದ ನಡೆಸಿದರು. ಇದಕ್ಕಾಗಿ ಕಲಬುರಗಿ ನಗರದ ಪಿ.ಡಿ.ಎ. ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಹ ಇದರ ವ್ಯವಸ್ಥೆ ಮಾಡಲಾ ಗಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶ ಲಡಾಕ್‍ನ ಲೇಹ್ ಜಿಲ್ಲೆಯ ತಾಶಿ ತಂಡೂಪ್, ಬಿಹಾರ ರಾಜ್ಯದ ಬಂಕಾ ಜಿಲ್ಲೆಯ ಲಲಿತಾದೇವಿ, ತ್ರಿಪುರಾ ರಾಜ್ಯದ ಪಶ್ಚಿಮ್ ತ್ರಿಪುರಾ ಜಿಲ್ಲೆಯ ಪಂಕಜ್ ಸಲಾನಿ, ಕರ್ನಾಟಕದ ಕಲ ಬುರಗಿ ಜಿಲ್ಲೆಯ ಸಂತೋಷಿ ಹಾಗೂ ಗುಜರಾತ್ ರಾಜ್ಯದ ಮೆಹಸಾನಾ ಜಿಲ್ಲೆಯ ಅರವಿಂದ ಕುಮಾರ ಜೊತೆಗೆ ಹಿಮಾಚಲ ಪ್ರದೇಶದ ಶಿಮ್ಲಾದ ಬಹಿರಂಗ ಸಮಾರಂಭದಲ್ಲಿಯೆ ಭಾಗವಹಿಸಿದ್ದ ಸಹದೇವಿ ಅವರೊಂದಿಗೆ ಪ್ರಧಾನಮಂತ್ರಿ ಆವಾಸ್, ಜಲ ಜೀವನ್ ಮಿಷನ್, ಒನ್ ನೇಷನ್ ಒನ್ ರೇಷನ್, ಆಯೂಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆರೋಗ್ಯ ಮತ್ತು ವೆಲ್‍ನೆಸ್ ಸೆಂಟರ್ ಹಾಗೂ ಇನ್ನಿತರ ಯೋಜನೆಗಳಿಂದಾದ ಲಾಭದ ಕುರಿತು ನೇರವಾಗಿ ಸಂವಾದ ನಡೆಸಿದರು.

ಸಂತೋಷಿ ಮಾತಿಗೆ ಪ್ರಧಾನಿ ಮೆಚ್ಚುಗೆ: ನನ್ನ ವಯೋವೃದ್ಧ ತಾಯಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲು ತ್ತಿದ್ದು, ಅರೋಗ್ಯ ಮತ್ತು ವೆಲ್‍ನೆಸ್ ಸೆಂಟರ್ ಸ್ಥಾಪನೆಯ ಪರಿಣಾಮ ನಮ್ಮೂರಿನಲ್ಲಿ ಅರೋಗ್ಯ ಕಾರ್ಯ ಕರ್ತರು ಮನೆಗೆ ಬಂದು ಉಚಿತ ತಪಾಸಣೆ ಕೈಗೊಂಡಿದಲ್ಲದೆ ಅಗತ್ಯ ಔಷಧೋ ಪಚಾರ ನೀಡಿದ್ದಾರೆ.

ಇದರಿಂದ ನನ್ನ ಹೆತ್ತ ತಾಯಿ ಈಗ ಅರೋಗ್ಯ ವಾಗಿದ್ದಾಳೆ. ಹಿಂದೆಲ್ಲ ಹಳ್ಳಿಗಳಲ್ಲಿ ಈ ಸೌಲಭ್ಯ ಇಲ್ಲದಿದ್ದಕ್ಕೆ ಬಹಳ ಕಷ್ಟ ಅನುಭವಿಸಿದ್ದೇವೆ. ಇಂತಹ ಜನಪರ ಯೋಜನೆ ಜಾರಿಗೆ ತಂದಿದ್ದಕ್ಕೆ ತಮಗೂ ಮತ್ತು ತಮ್ಮ ಸರ್ಕಾರಕ್ಕೆ ತುಂಬಾ ಅಭಾರಿಯಾಗಿದ್ದೇನೆ ಎಂದು ಆರೋಗ್ಯ ಮತ್ತು ವೆಲ್‍ನೆಸ್ ಸೆಂಟರ್ ಫಲಾನುಭವಿ ಜಿಲ್ಲೆಯ ಕಮಲಾಪೂರ ತಾಲೂಕಿನ ಕಿಣ್ಣಿ ಸಡಕ್ ಗ್ರಾಮದ ಮಹಿಳೆ ಸಂತೋಷಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೋಜನೆಯ ಲಾಭದ ಕುರಿತು ಎಳೆ-ಎಳೆಯಾಗಿ ಹಂಚಿಕೊಂಡರು.

ಕನ್ನಡದಲ್ಲಿಯೇ ಮಾತನಾಡಿದ ಸಂತೋಷಿ ಅವರ ಮಾತು ಆಲಿಸಿದ ನಂತರ ನರೇಂದ್ರ ಮೋದಿ ಅವರು ನಗುತ್ತಾ ಮಾತನಾಡಿ, ನೀವು ಕನ್ನಡದಲ್ಲಿ ಮಾತನಾಡಿದ್ದು ಸಂತೋಷ.  ಒಂದು ವೇಳೆ ನಾನು ಕರ್ನಾಟಕ ರಾಜಕೀಯದಲ್ಲಿದ್ದರೆ ನಿಮಗೆ ಚುನಾವಣೆಗೆ ನಿಲ್ಲಿಸು ತ್ತಿದ್ದೆ. ಯೋಜನೆಯ ಲಾಭದ ಕುರಿತು ಸವಿಸ್ತಾರವಾಗಿ ಹೇಳಿದ ಪರಿ ನೋಡಿದರೆ ನೀವು ಜನನಾಯಕಿ ಆಗುವಿರಿ ಎಂದು ಸಂತೋಷಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿದರು. ಸಂತೋಷಿ ಜೊತೆಗೆ ಕಲಬುರಗಿ ತಾಲೂಕಿನ ಬೇಲೂರಿನ ನೀಲಕಂಠ ಬಿರಾದಾರ, ಚಿಂಚೋಳಿ ತಾಲೂಕಿನ ಕೋಡ್ಲಿಯ ಅಣ್ಣಾರಾವ ಪೆದ್ದಿ ಹಾಗೂ ಆಳಂದ ತಾಲೂಕಿನ ಬೆಣ್ಣೆಶಿರೂರು ಗ್ರಾಮದ ಅಲ್ಲಂಪ್ರಭು ಇದ್ದರು.

ಕೇಂದ್ರ ಸರ್ಕಾರದ ಒಂಭತ್ತು ಸಚಿವಾಲಯದ 16 ಜನಪರ ಯೋಜನೆಗಳು ದೇಶದ ಬಡ ಜನರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಹಿನ್ನೆಲೆಯಲ್ಲಿ ವಿಡಿಯೋ ಸಂವಾದ ಕಾರ್ಯ ಕ್ರಮಕ್ಕೆ “ಗರೀಬ್ ಕಲ್ಯಾಣ್ ಸಮ್ಮೇಳನ” ಎಂದು ಹೆಸರಿಸಲಾಗಿತ್ತು.

ಯೋಜನೆಗಳು ನಾಗರಿಕರಿಗೆ ಸುಲಭ ಜೀವನ ನಡೆಸಲು ಹೇಗೆ ಕಾರಣವಾಗಿವೆ ಎಂಬು ದನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಫಲಾನುಭವಿ ಗಳ ಜೀವನೋಪಾಯ ಮತ್ತು ಆರ್ಥಿಕ ಒಳಗೊಳ್ಳುವಿಕೆ ಇತ್ಯಾದಿಗಳ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಅರಿಯಲು ಮತ್ತು ಮತ್ತಷ್ಟು ಪರಿಣಾಮಕಾರಿ ಅನುಷ್ಠಾನಕ್ಕೆ ಸಂವಾದ ಆಯೋಜಿಸ ಲಾಗಿತ್ತು.

ನವ ಭಾರತ ನಿರ್ಮಾಣಕ್ಕೆ ಪಣ: ತದನಂತರ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಆ ದಿಶೆಯಲ್ಲಿ ನಾವು ಸಾಗಿದ್ದೇವೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ ಎಂದರು.

ಜನರ ಸೇವಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಹಿಂದೆಲ್ಲ ಯಾವುದೇ ಸರ್ಕಾರಿ ಯೋಜನೆಗಳು ಪಡೆಯಬೇಕಾದರೆ ಅಂದಿನ ವ್ಯವಸ್ಥೆಯೇ ಜನರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ಇದೀಗ ಆ ವ್ಯವಸ್ಥೆಯ ಸಮಸ್ಯೆಗೆ ಸಂಪೂರ್ಣ ಇತಿಶ್ರೀ ಹಾಡಲಾಗಿದೆ. ತಂತ್ರಜ್ಞಾನದ ಮೂಲಕ ಭ್ರಷ್ಠಾಚಾರ ರಹಿತ ಆಡಳಿತ ನೀಡುತ್ತಿದ್ದೇವೆ. ಕೇಂದ್ರದಿಂದ ಕಳುಹಿಸುವ ಯಾವುದೇ ಯೋಜನೆಯ ಅನುದಾನ ಫಲಾನುಭವಿಯ ಖಾತೆಗೆ ನೇರವಾಗಿ ಜಮೆ ಆಗುತ್ತದೆ. 50 ಕೋಟಿ ಜನರಿಗೆ ಆಯೂಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗಿದೆ. 80 ಲಕ್ಷ ಜನರಿಗೆ ಪ್ರಧಾನಮಂತ್ರಿ ಬಿಮಾ ಯೋಜನೆಯಡಿ ವಿಮೆ ಸೌಲಭ್ಯ ಪಡೆದಿದ್ದಾರೆ. 45 ಲಕ್ಷ ಜನರ ಜನ-ಧನ್ ಖಾತೆ ತೆರೆಯಲಾಗಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಹೇಳಿಕೊಂಡರು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ಯೋಜನೆಯಡಿ 11ನೇ ಕಂತಿನ ರೂಪವಾಗಿ 11.78 ಕೋಟಿ ರೈತರಿಗೆ 21,000 ಕೋಟಿ ರೂ. ಹಣ ಡಿಜಿಟಲ್ ಮೋಡ್ ಮೂಲಕ ಬಿಡುಗಡೆಗೊಳಿಸಿದರು.

ಶಿಮ್ಲಾ ವೇದಿಕೆಯಲ್ಲಿ ಕೇಂದ್ರದ ಯುವ ಸಬಲೀಕರಣ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ ಠಾಕೂರ, ಹಿಮಾಚಲ ಪ್ರದೇಶದ ರಾಜ್ಯಪಾಲ  ರಾಜೇಂದ್ರ ವಿಶ್ವನಾಥ ಅರಲೇಕರ್, ಮುಖ್ಯಮಂತ್ರಿ ಜೈರಾಮ್ ಠಾಕೂರ ಮತ್ತಿತ್ತರ ಗಣ್ಯರಿದ್ದರು.

ಇತ್ತ ಕಲಬುರಗಿಯಲ್ಲಿ ಜರುಗಿದ ಕಾರ್ಯಕ್ರದಮಲ್ಲಿ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಕೆ.ಕೆ.ಆರ್.ಟಿ.ಸಿ. ಮತ್ತು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ, ಕೃಷ್ಣ ಕಾಡಾ ಭೀಮರಾಯನಗುಡಿ ಅಧ್ಯಕ್ಷ ಶರಣಪ್ಪ ತಳವಾರ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯ ಉಪ ಕಾರ್ಯದರ್ಶಿ ಅರುಣ ಕೆಂಭಾವಿ, ಐ.ಎ.ಎಸ್. ಅಧಿಕಾರಿ ಹರ್ಷಾ ಮಂಗ್ಲಾ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಗಿರೀಶ್ ಡಿ. ಬದೋಲೆ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರಪ್ಪ ವಣಿಕ್ಯಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ವಿವಿಧ ಯೋಜನೆಯ ಫಲಾನುಭವಿಗಳು ಭಾಗವಹಿಸಿದ್ದರು.

ದೇಶದ ವಿವಿಧ ಜಿಲ್ಲಾ ಕೇಂದ್ರ, ರಾಜ್ಯದ ರಾಜಧಾನಿ, ಕೆ.ವಿ.ಕೆ ಹೀಗೆ 1500 ಸ್ಥಳಗಳಲ್ಲಿ ಸಂವಾದ ವೀಕ್ಷಣೆಗೆ ಅವಕಾಶ ಮಾಡಿ ಕೊಡಲಾಗಿತ್ತು.