Saturday, 26th October 2024

ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಚಿಕ್ಕನಾಯಕನಹಳ್ಳಿ : ದುಶ್ಚಟ ಮುಕ್ತ ಸಮಾಜ ನರ‍್ಮಾಣವೇ ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಉದ್ದೇಶವಾಗಿದೆ ಎಂದು ತಾಲ್ಲೂಕು ಯೋಜನಾಧಿಕಾರಿ  ಪ್ರೇಮಾನಂದ ಯಲ್.ಬಿ. ಹೇಳಿದರು.

ಶ್ರೀಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ದೇಶಿಯ ವಿದ್ಯಾಪೀಠ ಪ್ರೌಢಶಾಲೆಯ ಜಂಟಿ ಆಶ್ರಯದಲ್ಲಿ ನಡೆದ *ವಿಶ್ವ ತಂಬಾಕು ವಿರೋಧ ದಿನಾಚರಣೆ ಅಂಗವಾಗಿ ನಡೆದ ವಿಶೇಷ ಕರ‍್ಯಕ್ರಮದಲ್ಲಿ ಈ ವಿಚಾರ ಹೇಳಿ ದರು.

ಯೋಜನೆಯ ಪ್ರತಿರ‍್ಷ ಕುಡಿತದ ದಾಸರಾದವರನ್ನು ಕುಡಿತದಿಂದ ಮುಕ್ತಿಗೊಳಿಸಲು ಮದ್ಯರ‍್ಜನ ಶಿಬಿರ, ಶಾಲಾ ಕಾಲೇಜು ವಿದ್ಯರ‍್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕರ‍್ಯಕ್ರಮ ಮುಂತಾ ದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ” ಎಂದು ಹೇಳಿದರು. ಈ ಕರ‍್ಯಕ್ರಮವನ್ನು ನಿವೃತ್ತ ಮುಖ್ಯಗುರುಗಳಾದ ಶ್ರೀ ಧನಪಾಲ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಮುಖ್ಯಗುರುಗಳಾದ ಶ್ರೀ ರಂಗಸ್ವಾಮಿ ವಹಿಸಿದ್ದರು. ವಿಶೇಷ ಉಪನ್ಯಾಸ ವನ್ನು ಉಪನ್ಯಾಸಕ ರಾಜ ಕುಮಾರ್ ರವರು ನೀಡಿ, ವಿದ್ಯರ‍್ಥಿಗಳಿಗೆ ಪ್ರತಿಜ್ಞಾವಿಧಿಬೋಧನೆ ಮಾಡಿದರು.

ವೇದಿಕೆಯಲ್ಲಿ ಸಮಿತಿಯ ತಾಲೂಕ ಅಧ್ಯಕ್ಷರಾದ ಶ್ರೀ ರಂಗಸ್ವಾಮಿ, ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ರಜನಿ ಉಪಸ್ಥಿತರಿದ್ದರು. ಶಾಲೆ ಶಾಲೆಯ ಹಿರಿಯ ಶಿಕ್ಷಕರಾದ ಬಸವರಾಜ್ ಅವರು ಸ್ವಾಗತಿಸಿದರು. ಮೇಲ್ವಿಚಾರಕರಾದ ಭಾಸ್ಕರ್ ಅವರು ಕರ‍್ಯಕ್ರಮ ನಿರೂಪಿಸಿ ವಂದನರ‍್ಪಣೆಗೈದರು.

ಸೇವಾ ಪ್ರತಿನಿಧಿ ಶ್ರೀಮತಿ ನೇತ್ರಾವತಿ ಸಹಕರಿಸಿದರು. ಈ ಕರ‍್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು, ಶಿಕ್ಷಕರು, ಪೋಷಕರು, ಶಾಲಾ ವಿದ್ಯರ‍್ಥಿಗಳು ಭಾಗವಹಿಸಿದ್ದರು.