Sunday, 24th November 2024

400 ಯುನಿಟ್‌ ರಕ್ತ ಸಂಗ್ರಹ

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್‌ ಎಜುಕೇಷನ್‌ ಫೌಂಡೇಷನ್‌ ನ “ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ” ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ “ತಾಂತ್ರಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಹಬ್ಬ – 2022”ರ ಪ್ರಯುಕ್ತ ಮೇ.31ರಂದು ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗ ದೊಂದಿಗೆ “ರಕ್ತದಾನ ಶಿಬಿರ” ನಡೆಸಲಾಯಿತು.

ಈ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲದೆ, ಪ್ರಾಧ್ಯಾಪಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಈ ಶಿಬಿರದಲ್ಲಿ ಭಾಗವಹಿಸಿದ್ದರು. 400 ಯುನಿಟ್‌ಗಳಷ್ಟು ಸಂಗ್ರಹಿಸಿದ ರಕ್ತವನ್ನು “ನ್ಯಾಷನಲ್‌ ಎಜುಕೇಷನ್‌ ಫೌಂಡೇಷನ್‌” ನ ಹೆಚ್ಚುವರಿ ಕಾರ್ಯದರ್ಶಿಗಳಾದ ವೆ0ಕಟಪ್ಪ ನವರು ಹಾಗೂ ಆಡಳಿತ ನಿರ್ವಾಹಕರಾದ ವಿಶ್ವನಾಥ ರೆಡ್ಡಿ (ನಿವೃತ್ತ ಐ.ಎ.ಎಸ್‌ ಅಧಿಕಾರಿ) ರವರು, ರೆಡ್‌ಕ್ರಾಸ್ ಸಂಸ್ಥೆಯ ಆನಂದ ಜಿಗಜಿಣಿ, ಹೆಚ್.‌ ಎಸ್.‌ ಬಾಲ ಸುಬ್ರಹ್ಮಣ್ಯ ಹಾಗೂ ಡಾ. ನರೇಶ್‌ ಬಾಬು ರವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎನ್.‌ ರಾಣಾಪ್ರತಾಪ್‌ ರೆಡ್ಡಿ ರವರು ಹಾಗೂ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಸರವಣ ರವರು ಉಪಸ್ಥಿತರಿದ್ದರು.

ರೆಡ್‌ಕ್ರಾಸ್ ಸಂಸ್ಥೆಯ ಹೆಚ್.‌ ಎಸ್.‌ ಬಾಲಸುಬ್ರಹ್ಮಣ್ಯ, ಆನಂದ ಜಿಗಜಿಣಿ, “ನ್ಯಾಷನಲ್‌ ಎಜುಕೇಷನ್‌ ಫೌಂಡೇಷನ್‌” ನ ಹೆಚ್ಚುವರಿ ಕಾರ್ಯದರ್ಶಿಗಳಾದ ವೆ0ಕಟಪ್ಪ ಅವರಿಗೆ ಪ್ರಮಾಣಪತ್ರ ವಿತರಿಸಿದರು. ಆಡಳಿತ ನಿರ್ವಾಹಕರಾದ ವಿಶ್ವನಾಥ ರೆಡ್ಡಿ (ನಿವೃತ್ತ ಐ.ಎ.ಎಸ್‌ ಅಧಿಕಾರಿ), ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎನ್.‌ ರಾಣಾಪ್ರತಾಪ್‌ ರೆಡ್ಡಿ, ಡಾ. ನರೇಶ್‌ ಬಾಬು ಇದ್ದರು